ಐದು ವರ್ಷದ ಈ ಪುಟ್ಟ ಪೋರನಿಗೆ ಎಲ್ಲಿಲ್ಲದ ಟ್ಯಾಲೆಂಟ್: ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ
ಅಮೀನ್ ಸಾಬ್ | Updated By: ಗಂಗಾಧರ ಬ. ಸಾಬೋಜಿ
Updated on:
Nov 23, 2024 | 7:31 PM
ಐದು ವರ್ಷದ ಅಗಸ್ತ್ಯ ಸಜ್ಜನ್ ಅವರ ಅದ್ಭುತ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದ್ದಾರೆ. ಬ್ರಿಕ್ಸ್ ರಾಷ್ಟ್ರಗಳ ಧ್ವಜಗಳು, ರಾಜ್ಯಗಳ ರಾಜಧಾನಿಗಳು, ಕವಿಗಳ ಹೆಸರುಗಳು, ಇಂಗ್ಲಿಷ್ ವರ್ಣಮಾಲೆ ಟೈಪಿಂಗ್‌ನಂತಹ ಅನೇಕ ವಿಷಯಗಳನ್ನು ಅವರು ಸುಲಭವಾಗಿ ನೆನಪಿಟ್ಟುಕೊಳ್ಳುತ್ತಾರೆ. ಅವರ ಪ್ರತಿಭೆ ಶಿಕ್ಷಕರು ಮತ್ತು ಪೋಷಕರನ್ನು ಆಶ್ಚರ್ಯಗೊಳಿಸಿದೆ.
1 / 7
ಈ ಪುಟಾಣಿ ಮಗುವಿಗೆ ಇನ್ನು ಕೇವಲ ಐದು ವರ್ಷ ವಯಸ್ಸು. ಮುದ್ದಮುದ್ದಾದ ಮಗು ಮನೆಯಲ್ಲಿ ಆಟವಾಡಿಕೊಂಡು ತಾಯಿಯ ಮಡಿಲಲ್ಲಿ ಇರಬೇಕು. ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ದೊಡ್ಡದೊಂದು ಸಾಧನೆ ಮಾಡಿದೆ. ಏನು ಕೇಳಿದರೂ ಪಟಾಪಟಾನೇ ಉತ್ತರ ನೀಡುತ್ತಾನೆ. ಈ ಪುಟಾಣಿ ಪೋರನ ಟ್ಯಾಲೆಂಟ್ ಎಂಥವರನ್ನು ಬೆರಗಾಗಿಸುತ್ತದೆ.
2 / 7
ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಈ ಪುಟ್ಟ ಪೋರನ ಹೆಸರು ಅಗಸ್ತ್ಯ ಸಜ್ಜನ್. ವಯಸ್ಸು ಬರೀ ಐದು ವರ್ಷ. ಸಾಧನೆ ಮಾತ್ರ ದೊಡ್ಡದು. ಹೌದು ಜಿಲ್ಲೆಯ ಶಾಹಪುರ ನಗರದ ವೀರೇಶ್ ಹಾಗೂ ಆರ್ತಿ ದಂಪತಿಯ ಈ ಪುಟಾಣಿ ಮಗುವಿನ ಹೆಸರು ಈಗ ಇಂಡಿಯಾ ಬುಕ್ ಆಫ್ ರಿಕಾರ್ಡ್ ಸೇರಿದೆ. ಆ ಮೂಲಕ ಈ ಬಾಲಕ ದೊಡ್ಡ ಸಾಧನೆ ಮಾಡಿದ್ದಾನೆ.
3 / 7
ಅಗಸ್ತ್ಯ ಸಜ್ಜನ್ ಟ್ಯಾಲೆಂಟ್ನಲ್ಲಿ ಎಲ್ಲರಿಗಿಂತ ಭಿನ್ನವಾಗಿದ್ದಾನೆ. ಯಾಕೆಂದರೆ ಮಗುವಿನ ಜ್ಞಾಪಕ ಶಕ್ತಿಯನ್ನ ನೋಡಿಯೇ ಇಂಡಿಯಾ ಬುಕ್ ಆಫ್ ರಿಕಾರ್ಡ್ನಲ್ಲಿ ಹೆಸರು ಸೇರಿಸಲಾಗಿದೆ. ಈ ಐದು ವರ್ಷದ ಮಗು ಶಹಾಪುರ ನಗರದ ಖಾಸಗಿ ಶಾಲೆಯೊಂದರಲ್ಲಿ ಯುಕೆಜಿಯಲ್ಲಿ ಓದುತ್ತಿದ್ದಾನೆ.
4 / 7
ಅಷ್ಟಕ್ಕೂ ಈ ಯುಕೆಜಿಯಲ್ಲಿ ಓದುವ ಮಗು ಮಾಡಿದ ಸಾಧನೆಯಾದರೂ ಏನು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ಈ ಪುಟ್ಟ ಮಗು ಬ್ರಿಕ್ಸ್ ರಾಷ್ಟ್ರಗಳ ಧ್ವಜಗಳನ್ನ ಗುರುತಿಸಿ ರಾಷ್ಟ್ರಗಳ ಹೆಸರನ್ನ ನಿರ್ಗಳವಾಗಿ ಹೇಳುತ್ತಾನೆ. ಜೊತೆಗೆ ಕೇವಲ 10 ಸೆಕೆಂಡ್ನಲ್ಲಿ ಇಂಗ್ಲಿಷ್ ಆಲ್ಫಾಬೆಟ್ಗಳನ್ನ ಕಂಪ್ಯೂಟರ್ನಲ್ಲಿ ಟೈಪ್ ಮಾಡಿ ಎಲ್ಲರನ್ನ ನಿಬ್ಬೆರಗಾಗುವಂತೆ ಮಾಡುತ್ತಾನೆ. ಮಗುವಿನ ವಿಶೇಷ ಟ್ಯಾಲೆಂಟ್ ನೋಡಿ ಶಾಲೆಯ ಶಿಕ್ಷಕರು ಕೂಡ ಶಾಕ್ ಆಗಿದ್ದಾರೆ.
5 / 7
ಅಗಸ್ತ್ಯ ಸಜ್ಜನ್ ಏನ್ ಕೇಳಿದ್ರು ಪಟ್ ಅಂತ ಗ್ಯಾಪ್ ಕೊಡದೆ ಉತ್ತರ ಕೊಡ್ತಾನೆ. ಐದು ವರ್ಷದ ಈ ಮಗು ಇಲ್ಲಿ ವರೆಗೆ ಎಷ್ಟು ಮಂದಿ ರಾಷ್ಟ್ರ ಕವಿಗಳಿದ್ದಾರೆ ಎಲ್ಲರ ಹೆಸರು ಕೇಳಿದ್ರೆ ನಾನ್ ಸ್ಟಾಪ್ ಉತ್ತರಿಸುತ್ತಾನೆ. ಇನ್ನು ಇಷ್ಟೇ ಯಾಕೆ ರಾಜ್ಯದ ಮುಖ್ಯಮಂತ್ರಿಗಳ ಹೆಸರು ತನ್ನ ತೊದಲು ನಾಲಿಗೆಯಿಂದಾನೆ ಉತ್ತರ ಕೊಟ್ಟರು ಎಲ್ಲರನ್ನ ಚಕಿತಗೊಳಿಸುತ್ತಾನೆ. ಇನ್ನು ದೇಶದ ಎಲ್ಲಾ ರಾಜ್ಯದ ರಾಜಧಾನಿಗಳು, ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರು, ಭಾರತ ಲಾಂಛನ, ರಾಷ್ಟ್ರ ಪ್ರಾಣಿ, ಪಕ್ಷಿ, ರಾಷ್ಟ್ರೀಯ ಕ್ರೀಡೆ ಹೀಗೆ ಒಂದಾ ಎರಡು ಏನ್ ಕೇಳಿದ್ರು ಉತ್ತರ ಈ ಅಗಸ್ತ್ಯ ಬಳಿ ರೆಡಿ ಇರುತ್ತೆ.
6 / 7
ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ವಾರಗಳನ್ನ ಸ್ಪೆಲ್ಲಿಂಗ್ ಸಮೇತ ಹೇಳುತ್ತಾನೆ. ಸ್ಪಾರ್ಟ್ಸ್ ಆಫ್ ದಿ ಬಾಡಿ ಹೆಸರು ಸ್ಪೆಲ್ಲಿಂಗ್ ಸಮೇತವಾಗಿ ಹೇಳುತ್ತಾನೆ. ಇದರ ಜೊತೆಗೆ ಯಾವುದೆ ವಿಶೇಷದ ಬಗ್ಗೆ ಕೇಳಿದ್ರು ಅದರ ಬಗ್ಗೆ ಸ್ಪಷ್ಟವಾಗಿ ಹೇಳಿ ಎಲ್ಲರನ್ನ ಚಕಿತಗೊಳಿಸುತ್ತಾನೆ. ಕೇವಲ ಶಾಲೆಯಲ್ಲಿ ಶಿಕ್ಷಕರು ಮಾತ್ರ ಕಲಿಸೋದಲ್ಲೇ ಮನೆಯಲ್ಲಿ ಅಗಸ್ತ್ಯ ತಾಯಿ ನಿತ್ಯ ತರಬೇತಿಯನ್ನ ನೀಡುತ್ತಾರೆ. ಮೂರು ವರ್ಷದವನಾಗಿದಾಗಲೇ ಈ ವಿಷಯಗಳನ್ನ ಬಗ್ಗೆ ಅಗಸ್ತ್ಯ ಆಸಕ್ತಿ ಹೊಂದಿದ್ದ. ಇದೆ ಕಾರಣಕ್ಕೆ ನಿತ್ಯ ಮನೆಯಲ್ಲಿ ಪೋರನಿಗೆ ತಾಯಿಯಿಂದ ತರಬೇತಿ ಸಿಗ್ತಾಯಿತ್ತು. ಇದೆ ಕಾರಣಕ್ಕೆ ಅಗಸ್ತ್ಯ ಸಜ್ಜನ್ ಈ ಸಾಧನೆ ಮಾಡಿದ್ದಾನೆ.
7 / 7
ಮಗುವಿ ಟ್ಯಾಲೆಂಟ್ನ್ನ ಪೋಷಕರು ರಿಕಾರ್ಡ್ ಮಾಡಿ ಇಂಡಿಯಾ ಬುಕ್ ರಿಕಾರ್ಡ್ನಲ್ಲಿ ಸ್ಪರ್ಧೆ ಮಾಡಿದ್ದಕ್ಕೆ ಈಗ ಅಗಸ್ತ್ಯ ಹೆಸರು ಬುಕ್ ಆಫ್ ರೆಕಾರ್ಡ್ನಲ್ಲಿ ಸೇರ್ಪಡೆಯಾಗಿದೆ. ಮಗುವಿನ ಸಾಧನೆ ಕಂಡು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಅಂದ್ರೆ ಸಾಕು ಯಾದಗಿರಿ ಜಿಲ್ಲೆ ರಾಜ್ಯದಲ್ಲಿ ಕೊನೆಯ ಸ್ಥಾನದಲ್ಲಿ ಇರುತ್ತೆ. ಆದರೆ ಈ ಮಗುವಿನ ಸಾಧನೆಯಿಂದ ಜಿಲ್ಲೆಯ ಹೆಸರು ನಾಡಿಗೆ ಚೆನ್ನಾಗಿ ಪರಿಚಯ ಮಾಡಿಕೊಟ್ಟಂತಾಗಿದೆ.