IPL Auction 2025: ಭಾರತದ ಈ 8 ಸ್ಟಾರ್ ಬೌಲರ್​ಗಳ ಮೇಲೆ ಎಲ್ಲಾ ಫ್ರಾಂಚೈಸಿಗಳ ಕಣ್ಣು

IPL Auction 2025: 2024ರ ಐಪಿಎಲ್ ಮೆಗಾ ಹರಾಜಿನಲ್ಲಿ 577 ಆಟಗಾರರು ಭಾಗವಹಿಸಲಿದ್ದಾರೆ. ಇದರಲ್ಲಿ ಭಾರತದ ಬೌಲರ್​ಗಳ ಎಲ್ಲಾ ಫ್ರಾಂಚೈಸಿಗಳ ಕಣ್ಣು ನೆಟ್ಟಿದೆ. ಅವರಲ್ಲಿ ಪ್ರಮುಖವಾಗಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ದೀಪಕ್ ಚಹಾರ್, ಅವೇಶ್ ಖಾನ್ ಮತ್ತು ಭುವನೇಶ್ವರ್ ಕುಮಾರ್ ಹೆಸರು ಸೇರಿದೆ.ಹೀಗಾಗಿ ಹರಾಜಿನಲ್ಲಿ ಯಾವ ತಂಡ ಯಾವ ಬೌಲರ್ ಅನ್ನು ಪಡೆಯುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ಪೃಥ್ವಿಶಂಕರ
|

Updated on: Nov 23, 2024 | 8:19 PM

ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಒಟ್ಟು 577 ಆಟಗಾರರನ್ನು ಹರಾಜು ಹಾಕಲಾಗುತ್ತದೆ. ಇದರಲ್ಲಿ 367 ಭಾರತೀಯರು, 210 ವಿದೇಶಿ ಆಟಗಾರರು ಮತ್ತು ಮೂವರು ಸಹವರ್ತಿ ರಾಷ್ಟ್ರಗಳ ಆಟಗಾರರು ಸೇರಿದ್ದಾರೆ. ಆದರೆ ಇವರುಗಳಲ್ಲಿ ಭಾರತದ ಈ 8 ಬೌಲರ್​ಗಳ ಮೇಲೆ ಎಲ್ಲಾ ಫ್ರಾಂಚೈಸಿಗಳ ಕಣ್ಣು ನೆಟ್ಟಿದೆ. ಆ 8 ಬೌಲರ್​ಗಳು ಯಾರು ಎಂಬುದರ ಮಾಹಿತಿ ಇಲ್ಲಿದೆ.

1 / 9
ಭಾರತದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡು ಕ್ರಿಕೆಟ್ ಅಂಗಳಕ್ಕೆ ಕಾಲಿರಿಸಿದ್ದಾರೆ. ಕೆಲವು ದಿನಗಳ ಹಿಂದೆ ನಡೆದ ರಣಜಿ ಟ್ರೋಫಿಯ ಪಂದ್ಯದಲ್ಲಿ ಆಡಿದ್ದ ಶಮಿ, ತಮ್ಮ ಹಳೆಯ ಲಯದಲ್ಲೇ ಕಾಣಿಸಿಕೊಂಡರು. ಹೀಗಾಗಿ ಪೂರ್ಣ ಫಿಟ್ ಆಗಿರುವ ಶಮಿಯನ್ನು ಬಿಟ್ಟುಕೊಡಲು ಯಾವ ತಂಡವೂ ಸಿದ್ದವಿಲ್ಲ. ಹಾಗಾಗಿ 2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬರುವ ಶಮಿಗಾಗಿ ಎಲ್ಲಾ ತಂಡಗಳು ಪೈಪೋಟಿಗೆ ಬೀಳಲಿವೆ.

2 / 9
ಆರ್‌ಸಿಬಿ ತಂಡದ ಬೌಲಿಂಗ್ ಜೀವಾಳ ಎನಿಸಿಕೊಂಡಿದ್ದ ಮೊಹಮ್ಮದ್ ಸಿರಾಜ್​ರನ್ನು ಈ ಬಾರಿ ತಂಡದಲ್ಲಿ ಉಳಿಸಿಕೊಂಡಿಲ್ಲ. ಹೀಗಾಗಿ ಸಿರಾಜ್​ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದಾಗ್ಯೂ ಆರ್​ಸಿಬಿ, ಸಿರಾಜ್​ ಮೇಲೆ ಆರ್​ಟಿಎಮ್ ಬಳಸುವ ಸಾಧ್ಯತೆಗಳಿವೆ. ಆದರೆ ಸಿರಾಜ್ ಅಧಿಕ ಮೊತ್ತಕ್ಕೆ ಹರಾಜಾಗುವುದು ಖಚಿತವಾಗಿದ್ದು, ಯಾವ ತಂಡ ಸೇರುತ್ತಾರೆ ಎಂಬುದು ನಾಳೆ ತಿಳಿಯಲಿದೆ.

3 / 9
ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಭಾರತ ತಂಡದ ಮತ್ತೊಂದು ದೊಡ್ಡ ಹೆಸರು ಅರ್ಷದೀಪ್ ಸಿಂಗ್. ವೇಗದ ಬೌಲರ್ ಅರ್ಷದೀಪ್ ದೀರ್ಘ ಕಾಲದಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಪಂಜಾಬ್ ಈ ಬಾರಿ ಅವರನ್ನು ಉಳಿಸಿಕೊಂಡಿಲ್ಲ. ಆದರೆ ಹರಾಜಿನಲ್ಲಿ ಅವರ ಮೇಲೆ ಆರ್​ಟಿಎಮ್ ಬಳಸಬಹುದು. ಆದರೂ ಅರ್ಷದೀಪ್ ಈ ಬಾರಿ ಹೊಸ ತಂಡ ಸೇರುವ ಸಾಧ್ಯತೆಗಳಿವೆ.

4 / 9
ಅರ್ಷದೀಪ್ ಸಿಂಗ್ ಅವರನ್ನು ಖರೀದಿಸಲು ಸಾಧ್ಯವಾಗದವರು ಖಲೀಲ್ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಯಶ್ ದಯಾಳ್ ಅವರನ್ನು ಆರ್​ಸಿಬಿ ಉಳಿಸಿಕೊಂಡಿದೆ. ಆದ್ದರಿಂದ ಖಲೀಲ್ ಕೂಡ ಉತ್ತಮ ಬೆಲೆಗೆ ಮಾರಾಟವಾಗಬಹುದು.

5 / 9
ಕಳೆದ ಕೆಲವು ವರ್ಷಗಳಿಂದ ಗಾಯಗಳಿಂದ ಬಳಲುತ್ತಿರುವ ದೀಪಕ್ ಚಹಾರ್ ಪವರ್‌ಪ್ಲೇಯಲ್ಲಿ ಉತ್ತಮ ಸ್ವಿಂಗ್ ಬೌಲರ್ ಎಂದು ಸಾಬೀತುಪಡಿಸಿದ್ದಾರೆ. ಹೀಗಾಗಿ ಅನೇಕ ತಂಡಗಳು ಅವರಿಗಾಗಿ ಕಾದುಕುಳಿತಿವೆ. ರಣಜಿ ಟ್ರೋಫಿಯಲ್ಲೂ ಉತ್ತಮ ಪ್ರದರ್ಶನ ನೀಡಿರುವ ದೀಪಕ್​ ಬ್ಯಾಟಿಂಗ್‌ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.

6 / 9
ಕಳೆದ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ 19 ವಿಕೆಟ್ ಪಡೆದಿದ್ದ ವೇಗಿ ಅವೇಶ್ ಖಾನ್ ಅವರನ್ನು 10 ಕೋಟಿ ರೂ.ಗೆ ಖರೀದಿಸಲಾಗಿತ್ತು. ಆದರೀಗ ಅವರು ಮತ್ತೊಮ್ಮೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು, ಅವರಿಗೂ ಉತ್ತಮ ಬೆಲೆ ಸಿಗುವ ಸಾಧ್ಯತೆಗಳಿವೆ.

7 / 9
ಐಪಿಎಲ್‌ನಲ್ಲಿ ಯಾವಾಗಲೂ ಅಚ್ಚರಿಯ ಬೆಲೆಗೆ ಮಾರಾಟವಾಗುವ ಆಟಗಾರರ ಪೈಕಿ ಹರ್ಷಲ್ ಪಟೇಲ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ರಾಷ್ಟ್ರೀಯ ತಂಡದ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ, ಐಪಿಎಲ್‌ನಲ್ಲಿ ಮಾತ್ರ ಹರ್ಷಲ್ ಪಟೇಲ್​ಗೆ ಭಾರಿ ಬೇಡಿಕೆ ಇದೆ.

8 / 9
ಪವರ್‌ಪ್ಲೇಯಲ್ಲಿ ಉತ್ತಮ ಪ್ರದರ್ಶನ ನೀಡುವ ಕೆಲವೇ ಕೆಲವು ಭಾರತೀಯ ಸೀಮ್ ಮತ್ತು ಸ್ವಿಂಗ್ ಬೌಲರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಕೂಡ ಒಬ್ಬರು. 10 ಕೋಟಿಗಿಂತ ಕಡಿಮೆ ಬೆಲೆಗೆ ಅವರನ್ನು ಖರೀದಿಸಬಹುದಾಗಿದ್ದು, ಅನುಭವದ ಆಧಾರದ ಮೇಲೆ ಭುವನೇಶ್ವರ್ ಕುಮಾರ್ ಒಂದು ಒಳ್ಳೆಯ ಆಯ್ಕೆಯಾಗಲಿದ್ದಾರೆ.

9 / 9
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ