ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಪಘಾತದಲ್ಲಿ ಬಲಿಯಾಗುವವರನ್ನ ತಪ್ಪಿಸಲು ತುರ್ತು ಚಿಕತ್ಸೆ ನೀಡಲು ರಾಜ್ಯದಲ್ಲಿ ಸರ್ಕಾರ ಹೊಸ ಅಪದ್ಭಾಂದವ ಆ್ಯಂಬುಲೆನ್ಸ್ ಗೆ ಇಂದು ಚಾಲನೆ ನೀಡಿದೆ.
ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಅಪಘಾತ ಪ್ರಕರಣದಿಂದ ಬಲಿಯಾಗ್ತೀರೋರ ಸಂಖ್ಯೆ ಏರಿಕೆ ಹಿನ್ನಲೆ ಅಪಘಾತದ ವೇಳೆ ತುರ್ತು ಚಿಕಿತ್ಸೆ ಸಿಗ್ದೆ ಜನರು ಜೀವ ಕೈಚೆಲ್ಲುತ್ತಿದ್ದಾರೆ.. ಹೀಗಾಗಿ ಜನರ ಜೀವ ಉಳಿಸಲು ಇಂದು ಸಿಎಂ ಆಪದ್ಭಾಂಧವ ಆ್ಯಂಬುಲೆನ್ಸ್ ಚಾಲನೆ ನೀಡಿದ್ದಾರೆ.. ರಾಜ್ಯದಲ್ಲಿ ಅಪಘಾತಕ್ಕೀಡಾದವರಿಗೆ ಆಪತ್ಬಾಂಧವನ ರೀತಿಯಲ್ಲಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಆಪತ್ಕಾಲಯಾನ ಎಂಬ ವಿಶೇಷ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ಸಿಕ್ಕಿದೆ.
ರಸ್ತೆ ಅಪಘಾತಕ್ಕೀಡಾದವರಿಗೆ ಗೋಲ್ಡನ್ ಅವರ್ ಒಳಗಾಗಿ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಸಹಕಾರದೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರೋಡ್ ಸುರಕ್ಷತೆ ನಿಧಿಯಡಿ 65 ನೂತನ ಆಪದ್ಭಾಂಧವ ಆಂಬ್ಯುಲೆನ್ಸ್ಗಳ ಸೇವೆಗೆ ಯೋಜನೆ ಜಾರಿಗೆ ತರಲಾಗಿದೆ.
ಇನ್ನು ಅಪಘಾತಕ್ಕೀಡಾದವರಿಗೆ ಆಪತ್ಬಾಂಧವನ ರೀತಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ಅಂಬ್ಯುಲೆನ್ಸ್ ಗಳಲ್ಲಿ 26 ಅಡ್ವಾನ್ಸ್ ಲೈಫ್ ಸಪೋರ್ಟ್ ತಂತ್ರಜ್ಞಾನವನ್ನ ಅಳವಡಿಸಲಾಗಿದೆ. 39 BLS ಅಂಬ್ಯುಲೆನ್ಸ್ ಗಳಿವೆ. ರಸ್ತೆ ಸಂಚಾರದಲ್ಲಿ ಹೆಚ್ಚು ಅಪಘಾತ ಸಂಭವಿಸುವ 65 ಬ್ಲಾಕ್ ಸ್ಪಾಟ್ ಗಳನ್ನ ಗುರುತಿಸಿದ್ದು, ಅಂಥಹ ಸ್ಥಳಗಳ ಹತ್ತಿರದಲ್ಲಿರುವ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಈ ಅಂಬ್ಯುಲೆನ್ಸ್ ಗಳನ್ನ ನೀಡಲಾಗಿದೆ.
*ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳ ಸನಿಹದ ಆಸ್ಪತ್ರೆಗಳಲ್ಲಿ ತಂಗಲಿವೆ. * 65 ಹಾಟ್ ಸ್ಪಾಟ್ ಗಳನ್ನ ಗುರುತಿಸಲಾಗಿದ್ದು, ಆ ಸ್ಥಳಗಳ ಹತ್ತಿರದ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳಿಗೆ ಅಂಬ್ಯುಲೆನ್ಸ್ ಗಳನ್ನ ನೀಡಲಾಗಿದೆ. * ವೆಂಟೀಲೇಟರ್ ಸಹಾಯದೊಂದಿಗೆ ಜಿಲ್ಲಾಸ್ಪತ್ರೆಗಳಿಗೆ ರೋಗಿಗಳನ್ನ ಕರೆದೊಯ್ದು ಚಿಕಿತ್ಸೆ ಕೊಡಿಸುವ ಸೌಲಭ್ಯ ಒದಗಿಸಲಾಗಿದೆ..
* ತುರ್ತು ಪರಿಸ್ಥಿತಿ ಸಂದರ್ಭದಲ್ಲಿ (ALS) ಅಡ್ವಾನ್ಸ್ ಲೈಫ್ ಸಪೋರ್ಟ್ ಅಂಬ್ಯುಲೆನ್ಸ್ ಸೇವೆ ಲಭ್ಯವಾಗಲಿದೆ. * ಜಿಲ್ಲಾಸ್ಪತ್ರೆಗಳ ಮಟ್ಟದಲ್ಲಿ ಚಿಕಿತ್ಸೆ ಅಗತ್ಯವಾದಲ್ಲಿ ಆರೋಗ್ಯ ಇಲಾಖೆಯ ಸ್ಟಾಫ್ ನರ್ಸ್ ಅನ್ನ ಅಂಬ್ಯುಲೆನ್ಸ್ ಗಳಿಗೆ ಡೆಪ್ಯೂಟ್ ಮಾಡಲಾಗುವುದು. * ವೆಂಟೀಲೇಟರ್ ಸಹಾಯದೊಂದಿಗೆ ಜಿಲ್ಲಾಸ್ಪತ್ರೆಗಳಿಗೆ ರೋಗಿಗಳನ್ನ ಕರೆದೊಯ್ದು ಚಿಕಿತ್ಸೆ ಕೊಡಿಸುವ ಸೌಲಭ್ಯ ಒದಗಿಸಲಾಗಿದೆ..
ಅಂಬ್ಯುಲೆನ್ಸ್ ಗಳು ಸುಸಜ್ಜಿತ ಉಪಕರಣಗಳು ಮತ್ತು ಔಷಧಿ ಹಾಗೂ ಉಪಭೋಗ್ಯ ವಸ್ತುಗಳನ್ನು ಹೊಂದಿರಲಿವೆ. ಈ ಪ್ರಕ್ರಿಯೆಯು ಅಪಘಾತಕ್ಕೆ ಒಳಗಾದ ವ್ಯಕ್ತಿಯ ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಅಲ್ಲದೇ ಸ್ಥಳಾಂತರಕ್ಕೆ ರೋಗಿಗಳ ಸ್ವಂತ ಹಣದ ವ್ಯಯವನ್ನು ತಪ್ಪಿಸಲಿದೆ.
ಒಟ್ಟಿನಲ್ಲಿ ಹೆದ್ದಾರಿ ಹೊರ ವಲಯ ಹಾಗೂ ಗ್ರಾಮೀಣ ಭಾಗಗಳ ಜನರು ಸಂಚಾರ ನಿಯಮಗಳ ಜಾಗೃತಿ ಇಲ್ಲದ ಕಾರಣ ಅಪಘಾತಗಳು ಹೆಚ್ಚಾಗುತ್ತಿವೆ ಇದರ ಜೊತೆ ಸಿಟಿಯ ಭಾಗದಲ್ಲಿಯೂ ಅಪಘಾತ ಪ್ರಕರಣದಿಂದ ತುರ್ತು ಆ್ಯಂಬುಲೆನ್ಸ್ ಸೇವೆಗೂ ಹೆಚ್ಚಾಗಿ ಬೇಡಿಕೆ ಕೇಳಿ ಬರ್ತಿದೆ ಹೀಗಾಗಿ ಸರ್ಕಾರ ಆಪದ್ಭಾಂದವ ಆ್ಯಂಬುಲೆನ್ಸ್ ಕಾರಯಚರಣೆಯನ್ನ ಇಂದಿನಿಂದ ಶುರು ಮಾಡ್ತೀರೋದು ಒಳ್ಳೆಯ ವಿಚಾರ.
Published On - 9:36 pm, Mon, 23 September 24