
ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗುತ್ತಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳನ್ನು ಪೂರೈಸಿದ ಈ ಕ್ಷಣವನ್ನು ಸಂಭ್ರಮಿಸಲಾಗುತ್ತಿದೆ.

ಬಿಗ್ ಬಾಸ್ ಮನೆಯಲ್ಲೂ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಡಗರ ಕಳೆಗಟ್ಟಿದೆ. ಎಲ್ಲ ಸ್ಪರ್ಧಿಗಳು ದೇಶಭಕ್ತಿ ಮೆರೆದಿದ್ದಾರೆ.

‘ಬಿಗ್ ಬಾಸ್ ಕನ್ನಡ ಒಟಿಟಿ’ ಮೊದಲ ಸೀಸನ್ ನಡೆಯುತ್ತಿದೆ. ಸದ್ಯ ದೊಡ್ಮನೆಯಲ್ಲಿ ಇರುವ ಸ್ಪರ್ಧಿಗಳು ಧ್ವಜಾರೋಹಣ ಮಾಡಿದ್ದಾರೆ. ರಾಷ್ಟ್ರ ಧ್ವಜಕ್ಕೆ ಎಲ್ಲರೂ ಸೆಲ್ಯೂಟ್ ಮಾಡಿದ್ದಾರೆ.

ಎಲ್ಲ ಸ್ಪರ್ಧಿಗಳು ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಥೀಮ್ನಲ್ಲಿ ಬಟ್ಟೆ ಧರಿಸಿದ್ದಾರೆ. ದೇಶಕ್ಕಾಗಿ ಹೋರಾಡಿದವರ ತ್ಯಾಗ-ಬಲಿದಾನವನ್ನು ಸ್ಮರಿಸಿಕೊಳ್ಳಲಾಗಿದೆ.

ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ ಕನ್ನಡದ ಬಿಗ್ ಬಾಸ್ ಪ್ರಸಾರ ಆಗುತ್ತಿದೆ. ಆರು ವಾರಗಳ ಕಾಲ ಈ ಶೋ ನಡೆಯಲಿದ್ದು, ನಂತರ ಟಿವಿಯಲ್ಲಿ ‘ಬಿಗ್ ಬಾಸ್ ಕನ್ನಡ 9ನೇ ಸೀಸನ್’ ಶುರುವಾಗಲಿದೆ.
Published On - 12:14 pm, Mon, 15 August 22