ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಶುಭ ಕೋರಿದ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು; ಇಲ್ಲಿದೆ ಫೋಟೋ ಗ್ಯಾಲರಿ
77ನೇ ಸ್ವಾತಂತ್ರ್ಯೋತ್ಸವವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಇಂದು (ಆಗಸ್ಟ್ 15) ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಕೂಡ ಶುಭ ಕೋರಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸಲಾಗುತ್ತಿದೆ. ಎಲ್ಲೆಲ್ಲೂ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಈ ಸಡಗರದಲ್ಲಿ ಭಾಗಿ ಆಗಿದ್ದಾರೆ.
1 / 8
ನಟ ನೆನಪಿರಲಿ ಪ್ರೇಮ್ ಅವರು ವಿಶೇಷವಾದ ಫೋಟೋ ಹಂಚಿಕೊಂಡಿದ್ದಾರೆ. ಮುಖದ ಮೇಲೆ ತ್ರಿವರ್ಣದ ಧ್ವಜದ ಚಿತ್ರ ಬರೆದುಕೊಂಡಿರುವ ಅವರು ಸೆಲ್ಯೂಟ್ ಮಾಡಿದ್ದಾರೆ. ಈ ಮೂಲಕ ಅವರು ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ.
2 / 8
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಅರವಿಂದ್ ಕೆಪಿ ಅವರು ಮನೆಮಾತಾದರು. ಭಾರತದ ಭಾವುಟವನ್ನು ಹಿಡಿದು ಖುಷಿಯಿಂದ ಪೋಸ್ ನೀಡಿದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಇದಕ್ಕೆ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.
3 / 8
ನಟಿ ಆಶಾ ಭಟ್ ಅವರು ರಾಷ್ಟ್ರ ಧ್ವಜ ಹಿಡಿದು ಹೆಮ್ಮೆಯಿಂದ ನಿಂತಿದ್ದಾರೆ. ‘ಸ್ವತಂತ್ರ ಭಾರತದ ವೈಭವವನ್ನು ಸಂಭ್ರಮಿಸೋಣ. ದೇಶದ ಗೌರವವನ್ನು ಎತ್ತಿ ಹಿಡಿಯೋಣ’ ಎಂದು ಅವರು ಈ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ.
4 / 8
‘ಕೆಡಿ’ ಚಿತ್ರತಂಡ ಕೂಡ ಸ್ವಾತಂತ್ರ್ಯೋತ್ಸವಕ್ಕೆ ಶುಭ ಕೋರಿದೆ. ‘ಮಾ ತುಜೆ ಸಲಾಂ’ ಎಂಬ ಕ್ಯಾಪ್ಷನ್ನೊಂದಿಗೆ ನಿರ್ದೇಶಕ ಪ್ರೇಮ್ ಅವರು ಈ ಪೋಸ್ಟರ್ ಹಂಚಿಕೊಂಡಿದ್ದಾರೆ. ‘ಕೆಡಿ’ ಚಿತ್ರಕ್ಕೆ ಧ್ರುವ ಸರ್ಜಾ ಹೀರೋ.
5 / 8
ರಿಷಬ್ ಶೆಟ್ಟಿ ಅವರು ಕನ್ನಡದ ಸೊಗಡಿಗೆ ಮಹತ್ವ ನೀಡುತ್ತಾರೆ. ಬಿಳಿ ಅಂಗಿ, ಬಿಳಿ ಪಂಚೆ ಧರಿಸಿದ ಅವರು ತ್ರಿವರ್ಣ ಧ್ವಜ ಹಿಡಿದು ದೇಶಭಕ್ತಿ ಮೆರೆದಿದ್ದಾರೆ. ನಾಡಿನ ಸಮಸ್ತ ಜನರಿಗೆ ಅವರು ಶುಭ ಕೋರಿದ್ದಾರೆ. ‘ಕಾಂತಾರ 2’ ಚಿತ್ರಕ್ಕೆ ಅವರು ತಯಾರಿ ನಡೆಸುತ್ತಿದ್ದಾರೆ.
6 / 8
ನಟ ಶಿವರಾಜ್ಕುಮಾರ್ ಅವರು ಮೈಸೂರಿನ ಶಕ್ತಿಧಾಮದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. ಅಲ್ಲಿನ ಮಕ್ಕಳ ಜೊತೆ ಧ್ವಜಾರೋಹಣ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ಹಂಚಿಕೊಂಡು ಎಲ್ಲರಿಗೂ ಅವರು ವಿಶ್ ಮಾಡಿದ್ದಾರೆ.
7 / 8
ಡಾಲಿ ಧನಂಜಯ್ ಅವರು ಕೂಡ ರಾಷ್ಟ್ರ ಧ್ವಜದ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅವರ ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ನಟನಾಗಿ ಮತ್ತು ನಿರ್ಮಾಪಕನಾಗಿ ಧನಂಜಯ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
8 / 8
ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ದಂಪತಿಯ ಪುತ್ರ ರಾಯನ್ ರಾಜ್ ಸರ್ಜಾ ಕೂಡ ರಾಷ್ಟ್ರ ಧ್ವಜ ಹಿಡಿದು, ಮುದ್ದು ಮುದ್ದಾಗಿ ಸ್ಮೈಲ್ ಮಾಡಿದ್ದಾನೆ. ಆತನ ವಿಡಿಯೋವನ್ನು ಮೇಘನಾ ರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.