
ಒಂದಲ್ಲಾ ಎರಡಲ್ಲಾ ಬರೋಬ್ಬರಿ 9 ಮಹಿಳೆಯರನ್ನು ವಿವಾಹವಾಗಿ ಅದರಲ್ಲಿ ಮೂವರಿಂದ ವಿಚ್ಛೇದನ ಪಡೆದಿದ್ದ ವ್ಯಕ್ತಿಯೊರ್ವನ ಸುದ್ದಿ ಎಲ್ಲೆಡೆ ಭಾರೀ ವೈರಲ್ ಆಗಿತ್ತು.

ಇದೀಗಾ ತನ್ನ 6 ಪತ್ನಿಯರೊಂದಿಗೆ ಒಟ್ಟಿಗೆ ಮಲಗಲು ಈತ ಹಾಸಿಗೆಯೊಂದನ್ನು ಸಿದ್ಧ ಪಡಿಸಿದ್ದಾನೆ. ಇದಕ್ಕಾಗಿ ಬರೋಬ್ಬರೀ 81 ಲಕ್ಷ ರೂ ಖರ್ಚು ಮಾಡಿದ್ದಾನೆ.

ನನ್ನ ಪತ್ನಿಯರೊಂದಿಗೆ ಮಲಗಲು ಸ್ಥಳಾವಕಾಶದ ಕೊರತೆ ಇರುವುದರಿಂದ ಸ್ಥಳಾವಕಾಶ ಕಲ್ಪಿಸಲು ನೆಲದ ಮೇಲೆ ಮಲಗಬೇಕಾಗಿತ್ತು. ಹೀಗಾಗಿ ಇಂಥಾ ದೊಡ್ಡ ಹಾಸಿಗೆಯನ್ನು ಸಿದ್ಧಪಡಿಸಿಕೊಂಡಿದ್ದೇನೆ ಎಂದು ಸ್ವತಃ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾನೆ.

ಇತ್ತೀಚೆಗಷ್ಟೇ ಮೊದಲ ಮಗುವನ್ನು ಯಾರಿಂದ ಪಡೆಯಬೇಕು ಎಂದು ತಿಳಿಯದೇ ಬಾಡಿಗಗೆ ತಾಯ್ತನದ ಮೂಲಕ ನನ್ನ ಮೊದಲ ಮಗುವನ್ನು ಪಡೆಯಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದ, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

ಬ್ರೆಜಿಲ್‌ನ ಸಾವೊ ಪಾಲೊ ಮೂಲದ 37 ವರ್ಷದ ಆರ್ಥರ್ ಒ ಉರ್ಸೊ ಎನ್ನುವ ವ್ಯಕ್ತಿಗೆ 9 ಜನ ಪತ್ನಿಯರಿದ್ದರು. ಅಂದರೆ 2021 ರಲ್ಲಿ 9 ಯುವತಿಯರನ್ನು ಮದುವೆಯಾಗಿದ್ದಾನೆ. ಆದರೆ ಈಗ ಮೂವರಿಗೆ ವಿಚ್ಚೇದನ ನೀಡಿದ್ದಾರೆ.

ಈಗ ಆರ್ಥರ್ 21ರಿಂದ 51 ವರ್ಷದ ತನಕ ಇರುವ 6 ಜನ ಹೆಂಡತಿಯರನ್ನು ಹೊಂದಿದ್ದಾನೆ. ಲುವಾನಾ ಕಝಾಕಿ, ಎಮೆಲಿ ಸೌಜಾ, ವಲ್ಕ್ವಿರಿಯಾ ಸ್ಯಾಂಟೋಸ್, ಒಲಿಂಡಾ ಮಾರಿಯಾ,ಡಾಮಿಯಾನಾ ಮತ್ತು ಅಮಂಡಾ ಅಲ್ಬುಕರ್ಕ್ ಎಂಬುವವರು ಈತನ ಈಗಿರುವ ಪತ್ನಿಯರು.
Published On - 10:59 am, Fri, 28 April 23