Updated on: Jun 16, 2023 | 3:58 PM
ರೈತನೋರ್ವ ಗ್ರಾಮ ಪಂಚಾಯಿತಿ ಕಚೇರಿಯೊಳಗೆ ಕುರಿ-ಮೇಕೆಗಳನ್ನು ನುಗ್ಗಿಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ಕೊಟ್ಟಿಗೆ ಬಿಲ್ ಆಗಿಲ್ಲ ಎಂದು ಗ್ರಾಮ ಪಂಚಾಯತಿ ಕಚೇರಿಯಲ್ಲಿ ಮೇಕೆ ಕಟ್ಟಿದ ರೈತ
ಚನ್ನಪಟ್ಟಣ ತಾಲೂಕಿನ ಮೈಲನಾಯಕನಹಳ್ಳಿ ಗ್ರಾಮದಲ್ಲಿ ಘಟನೆ
ಕೊಟ್ಟಿಗೆ ನಿರ್ಮಾಣ ಮಾಡಿ ಒಂದು ವರ್ಷವಾದರೂ ಬಿಲ್ ಕೊಡದ ಗ್ರಾಮ ಪಂಚಾಯತಿ
ಪ್ರತಿನಿತ್ಯ ಗ್ರಾಮ ಪಂಚಾಯತಿ ಕಚೇರಿಗೆ ಅಲೆದು ಅಲೆದು ರೋಸಿ ಹೋಗಿದ್ದ ರೈತ ರವಿ ಕೊನೆಗೆ ಕುರಿ, ಮೇಕೆ ನುಗ್ಗಿಸಿ ವಿನೂತನ ಪ್ರತಿಭಟನೆ ಮಾಡಿದ್ದಾರೆ.
ಸುಮಾರು 50 ಸಾವಿರ ಬಿಲ್ ನೀಡಬೇಕಿರುವ ಗ್ರಾಮ ಪಂಚಾಯತಿ, ಕಳೆದ ಒಂದು ವರ್ಷದಿಂದ ನೀಡದೇ ಸಬೂಬು ಹೇಳಿಕೊಂಡು ಬಂದಿದೆ.
ಬಿಲ್ ಕೊಡದೇ ಸತಾಯುತ್ತಿದ್ದರಿಂದ ಆಕ್ರೋಶಗೊಂಡಿರುವ ರೈತ ಇಂದು ಕುರಿ-ಮೇಕೆಗಳನ್ನ ಮೈಲನಾಯಕನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯೊಳಗೆ ನುಗ್ಗಿಸಿ ಪ್ರತಿಭಟಿಸಿದ್ದಾನೆ.
ಈಗ ಕುರಿ-ಮೇಕೆಗಳನ್ನು ನುಗ್ಗಿಸಿದ್ದೇವೆ. ಮುಂದೆ ಇದೇ ರೀತಿಯಾದರೆ ಎಮ್ಮೆ-ಕೋಣ, ಕೋಳಿ ಕಚೇರಿಯೊಳಗೆ ನುಗ್ಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.