
ಬಾಲಿವುಡ್ನ ಖ್ಯಾತ ನಟ ಆಮಿರ್ ಖಾನ್ ಅವರ ಪುತ್ರಿ ಇರಾ ಖಾನ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿಲ್ಲ. ಹಾಗಿದ್ದರೂ ಕೂಡ ಅವರು ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ. ಮೇ 8ರಂದು ಅವರು 25ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಇರಾ ಖಾನ್ ಅವರ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಭಾವಿ ಪತಿ ನೂಪುರ್ ಶಿಖಾರೆ ಜೊತೆ ಇರಾ ಖಾನ್ ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ.

ಬಹುಕಾಲದಿಂದ ನೂಪುರ್ ಶಿಖಾರೆ ಮತ್ತು ಇರಾ ಖಾನ್ ಅವರು ಪ್ರೀತಿಸುತ್ತಿದ್ದಾರೆ. ಕಳೆದ ವರ್ಷ ಅವರಿಬ್ಬರು ಎಂಗೇಜ್ಮೆಂಟ್ ಕೂಡ ಮಾಡಿಕೊಂಡರು. ಇಬ್ಬರ ಪ್ರೀತಿಗೆ ಮನೆಯವರ ಒಪ್ಪಿಗೆ ಸಿಕ್ಕಿದೆ. ಈ ಪ್ರಣಯ ಪಕ್ಷಿಗಳು ಹಾಯಾಗಿ ಕಾಲ ಕಳೆಯುತ್ತಿವೆ.

ಭಾವಿ ಪತ್ನಿಯ ಬರ್ತ್ಡೇ ಪ್ರಯುಕ್ತ ನೂಪುರ್ ಶಿಖಾರೆ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇರಾ ಖಾನ್ ಅವರು ಸಿಹಿ ಮುತ್ತು ನೀಡಿದ ಕ್ಷಣ ಈ ಫೋಟೋದಲ್ಲಿ ಸೆರೆಯಾಗಿದೆ. ಈ ಫೋಟೋಗೆ ನೆಟ್ಟಿಗರು ಮತ್ತು ಸ್ನೇಹಿತರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಆಮಿರ್ ಖಾನ್ ಅವರ ಮಗಳು ಎಂಬ ಕಾರಣಕ್ಕೆ ಇರಾ ಖಾನ್ಗೆ ಜನಪ್ರಿಯತೆ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಸಕ್ರಿಯರಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 6 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.