
ಗಣೇಶ ಜ್ಞಾನವನ್ನು ಸಂಕೇತಿಸುತ್ತಾನೆ. ಚತುರ್ಥಿಯಿಂದ ಅನಂತ ಚತುರ್ಥಿಯವರೆಗೆ 10 ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತದೆ. ಈ 10 ದಿನಗಳಲ್ಲಿ ಕನಸಿನಲ್ಲಿ ವಿನಾಯಕ ಕಾಣಿಸಿಕೊಂಡರೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಕನಸಿನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಗಣಪ ಕಾಣಿಸಿಕೊಂಡರೆ ಮನೆಯಲ್ಲಿ ಸಂಪತ್ತು ತುಂಬಿಬರುತ್ತದೆ. ಹಾಗಾದರೆ ಕನಸಿನಲ್ಲಿ ಯಾವುದೇ ರೀತಿಯ ಗಣೇಶನ ಮೂರ್ತಿ ಕಾಣಿಸಿಕೊಂಡರೆ ಯಾವ ರೀತಿಯ ಫಲಿತಾಂಶ ಪ್ರಾಪ್ತಿಯಾಗುತ್ತದೆ ಎಂಬುದನ್ನು ಈಗ ಕಂಡುಕೊಳೋಣ.

ಕನಸಿನಲ್ಲಿ ವಿನಾಯಕನ ವಿಗ್ರಹವನ್ನು ನೋಡುವುದು: ಕನಸಿನಲ್ಲಿ ವಿನಾಯಕನ ಮೂರ್ತಿಯನ್ನು ಕಂಡರೆ ತುಂಬಾ ಶುಭ. ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ. ಹೀಗೆ ಕನಸಿನಲ್ಲಿ ವಿನಾಯಕ ಕಾಣಿಸಿಕೊಂಡರೆ, ಶೀಘ್ರದಲ್ಲೇ ಭಕ್ತನ ಮನೆಯಲ್ಲಿ ಅಥವಾ ಪ್ರೀತಿಪಾತ್ರರ ಮದುವೆಯಾಗುತ್ತದೆ, ಅಥವಾ ಶುಭ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.

ಕನಸಿನಲ್ಲಿ ಗಣಪ ಇಲಿಯ ಮೇಲೆ ಸವಾರಿ ಮಾಡುತ್ತಿರುವುದು ಕಂಡರೆ: ಕನಸಿನಲ್ಲಿ ಗಣೇಶನು ಇಲಿಯ ಮೇಲೆ ಸವಾರಿ ಮಾಡುತ್ತಿದ್ದರೆ, ಅದು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂದರೆ ಶೀಘ್ರದಲ್ಲೇ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಹಣವು ಹರಿದುಬರುತ್ತದೆ. ಸುಖ ಶಾಂತಿ ನೆಲೆಸಲಿದೆ. ವಿನಾಯಕ ದರ್ಶನ ಮಾಡುವುದು ಆ ಜನರು ಶ್ರೀಮಂತರಾಗುವುದರ ಸಂಕೇತ ಎಂದು ಸ್ವಪ್ನಶಾಸ್ತ್ರದಲ್ಲಿ ಹೇಳಲಾಗಿದೆ.

ಗಣೇಶನ ಹಬ್ಬದಲ್ಲಿ ಗಣಪತಿಯ ಕನಸು ಕಂಡಿರಾ? ಶುಭ!

ಗಣಪತಿಯು ಬ್ರಹ್ಮ ಮುಹೂರ್ತದಲ್ಲಿ ಕಾಣಿಸಿಕೊಂಡರೆ: ಬ್ರಹ್ಮ ಮುಹೂರ್ತದಲ್ಲಿ ಅಂದರೆ ಬೆಳಗಿನ ಜಾವದಲ್ಲಿ ಗಣಪತಿ ಕಾಣಿಸಿಕೊಂಡಾಗ ಈ ಕನಸಿನ ಅರ್ಥ ಏನೆಂದರೆ ಲಕ್ಷ್ಮಿ ದೇವಿಯ ಆಶೀರ್ವಾದ ಪ್ರಾಪ್ತಿಯಾಗಲಿದೆ. ಲಕ್ಷ್ಮಿ ದೇವಿಯು ಆ ಮನೆಗೆ ಸಂಪತ್ತನ್ನು ಆಶೀರ್ವದಿಸುತ್ತಾಳೆ. ವಿನಾಯಕನ ಆಶೀರ್ವಾದದಿಂದ ನೀವು ಹಠಾತ್ ಸಂಪತ್ತನ್ನು ಪಡೆಯುತ್ತೀರಿ. ಇದರ ಹೊರತಾಗಿ, ವೃತ್ತಿಯಲ್ಲಿ ಬಡ್ತಿ ಅವಕಾಶಗಳು ಹೆಚ್ಚಾಗಬಹುದು ಅಥವಾ ಉತ್ತಮ ಉದ್ಯೋಗಾವಕಾಶ ಲಭ್ಯವಾಗಬಹುದು.

ಕನಸಿನಲ್ಲಿ ವಿನಾಯಕನನ್ನು ಪೂಜಿಸುವುದು: ನಿಮಗೆ ಕನಸಿನಲ್ಲಿ ಗಣೇಶನ ಪೂಜಿಸುತ್ತಿರುವುದು ಕಾಣಬಹುದು, ಈ ಕನಸು ಬಹಳ ಮಂಗಳಕರವಾಗಿದೆ. ಅಂದರೆ ಇಷ್ಟರಲ್ಲೇ ಇಷ್ಟಾರ್ಥಗಳು ಈಡೇರಲಿವೆ. ಗಣೇಶನ ಆಶೀರ್ವಾದದಿಂದ ಜೀವನದ ಎಲ್ಲಾ ದುಃಖಗಳು ಮತ್ತು ಸಮಸ್ಯೆಗಳು ದೂರವಾಗಿ ವಿನಾಯಕನ ಕೃಪೆಯಿಂದ ಸಂತೋಷದ ಜೀವನವನ್ನು ನಡೆಸುತೀರಿ.