Kannada News » Photo gallery » Accorind to Chanakya Niti these 5 incidents are signs of Economic Crisis Be Careful
Chanakya Niti: ಈ 5 ಘಟನೆಗಳು ಹಣದ ಸಮಸ್ಯೆ ಉಂಟಾಗಲಿರುವ ಸೂಚನೆ ಆಗಿರಬಹುದು; ಜಾಗರೂಕರಾಗಿರಿ- ಚಾಣಕ್ಯ ನೀತಿ
ಚಾಣಕ್ಯ ನೀತಿಯಿಂದ ನೂರಾರು ವಿಚಾರಗಳನ್ನು ನಾವು ಕಲಿಯಬಹುದು. ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ, ಎಚ್ಚರ ಇಟ್ಟುಕೊಂಡರೆ ನಮ್ಮ ಬದುಕನ್ನು ಇನ್ನಷ್ಟು ಹಸನಾಗಿಸಬಹುದು. ಚಾಣಕ್ಯನ ಅನುಭವಗಳು ನಮ್ಮೆಲ್ಲರಿಗೂ ಉಪಯುಕ್ತ ಆಗಿದ್ದು ಅದನ್ನು ಇಲ್ಲಿ ತಿಳಿಸುತ್ತಿದ್ದೇವೆ.
ಮನೆಯ ತುಳಸಿ ಗಿಡ ಒಣಗುವುದು: ಆಚಾರ್ಯ ಚಾಣಕ್ಯರ ಪ್ರಕಾರ ಮನೆಯಲ್ಲಿ ತುಳಸಿ ಗಿಡ ಒಣಗುವುದು ಒಳ್ಳ್ಎಯದಲ್ಲ. ತುಳಸಿ ಗಿಡ ಯಾವತ್ತೂ ಸಮೃದ್ಧಿಯಾಗಿ ಬೆಳೆದು, ಹಸುರಾಗಿ ಇರುವಂತೆ ಕಾಳಜಿ ವಹಿಸಬೇಕು. ಗಿಡ ಒಣಗುವುದು ಮನೆಯಲ್ಲಿ ಆರ್ಥಿಕ ಬಿಕ್ಕಟ್ಟಿನ ಸಂಕೇತವಾಗಿದೆ. ತುಳಸಿ ಗಿಡ ಮನೆಯಲ್ಲಿ ಇರಬೇಕು. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
1 / 5
ಗಾಜು ಒಡೆಯುವುದು: ಆಚಾರ್ಯ ಚಾಣಕ್ಯ ಹೇಳುವಂತೆ ಮನೆಯಲ್ಲಿ ಗಾಜು ಒಡೆಯುವುದು ಅಶುಭ. ಹಾಗೆ ಮಾಡುವುದು ಅಥವಾ ಆಗುವುದು ಕೆಟ್ಟ ಶಕುನ. ಇದು ಹಣಕಾಸಿನ ಸಮಸ್ಯೆಗಳಿಗೆ ಕಾರಣ ಆಗಬಹುದು. ಇದು ಮನೆಯಲ್ಲಿ ಬಡತನ ಮತ್ತು ನಕಾರಾತ್ಮಕತೆಯನ್ನು ತರಬಹುದು.
2 / 5
ಹಿರಿಯರಿಗೆ ಅವಮಾನ ಮಾಡುವುದು: ಹಿರಿಯರನ್ನು ಎಂದಿಗೂ ಅವಮಾನಿಸಬಾರದು. ಅಂತಹ ಮನೆಯಲ್ಲಿ ಲಕ್ಷ್ಮಿ ಎಂದಿಗೂ ನೆಲೆಸುವುದಿಲ್ಲ. ಅಂತಹ ಮನೆಯಲ್ಲಿ ಸಂತೋಷವು ಉಳಿದಿರುವುದಿಲ್ಲ. ಹಿರಿಯರನ್ನು ಅವಮಾನಿಸುವುದರಿಂದ ಅವರಿಗೆ ಬೇಸರವಾಗುತ್ತದೆ. ಇದರಿಂದಾಗಿ ಅನೇಕ ಸಮಸ್ಯೆಗಳು ಉಂಟಾಗಬಹುದು.
3 / 5
ಮನೆಯಲ್ಲಿ ತೊಂದರೆ ಇರುವುದು: ಚಾಣಕ್ಯನ ಪ್ರಕಾರ ಪ್ರತಿದಿನ ಜಗಳಗಳು ನಡೆಯುವ ಮನೆಯಲ್ಲಿ ಲಕ್ಷ್ಮಿ ಎಂದಿಗೂ ನೆಲೆಸುವುದಿಲ್ಲ. ಇವುಗಳನ್ನು ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುವುದಿಲ್ಲ. ಕಠಿಣ ಪರಿಶ್ರಮದ ನಂತರವೂ ನೀವು ವೈಫಲ್ಯವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸಿ ಇರುವುದು ಒಳ್ಳೆಯದು.
4 / 5
ಪೂಜೆ ಪುನಸ್ಕಾರ: ಆಚಾರ್ಯ ಚಾಣಕ್ಯನ ಪ್ರಕಾರ ಮನೆಯಲ್ಲಿ ನಿತ್ಯವೂ ಪೂಜೆ ನಡೆಯಬೇಕು. ಉತ್ತಮ ಮಾತು, ಮಂತ್ರಗಳು ಪಠಣವಾಗಬೇಕಯ. ಹೀಗೆ ಮಾಡುವುದರಿಂದ ಮನೆ, ಮನೆಯಲ್ಲಿ ಇರುವವರ ಮನಸ್ಸು ಶುದ್ಧವಾಗುತ್ತದೆ. ಲಕ್ಷ್ಮಿಯ ಕೃಪೆ ಸದಾ ಇರುತ್ತದೆ.