Updated on: Mar 28, 2024 | 7:00 PM
90ರ ದಶಕದ ಸ್ಟಾರ್ ನಟ ಗೋವಿಂದ ಬಹು ವರ್ಷಗಳಿಂದ ರಾಜಕೀಯದಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳಿದ್ದಾರೆ.
2004 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದ ಗೋವಿಂದ ಆ ಬಳಿಕ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಆ ನಂತರ ಹಲವು ವರ್ಷಗಳಿಂದ ಸಕ್ರಿಯ ರಾಜಕೀಯದಿಂದ ದೂರವೇ ಉಳಿದಿದ್ದ ನಟ ಗೋವಿಂದ ಇಂದು ಹಠಾತ್ತನೆ ಏಕನಾಥ ಶಿಂಧೆ ನಾಯಕತ್ವದ ಶಿವಸೇನಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದಲೂ ನಟ ಗೋವಿಂದ ಶಿವನೇಸಾ ಪಕ್ಷದ ಕೆಲವು ಮುಖಂಡರನ್ನು ಭೇಟಿಯಾಗುತ್ತಿದ್ದರು. ಏಕನಾಥ ಶಿಂಧೆಯನ್ನೂ ಸಹ ಭೇಟಿಯಾಗಿದ್ದರು ಈಗ ಪಕ್ಷಕ್ಕೆ ಸೇರಿದ್ದಾರೆ.
ಶಿವಸೇನೆ ಸೇರ್ಪಡೆ ಬಳಿಕ ಮಾತನಾಡಿದ ಗೋವಿಂದ, 14ನೇ ಲೋಕಸಭೆಯ ಸದಸ್ಯನಾಗಿದ್ದೆ, ಈಗ 14 ವರ್ಷಗಳ ಬಳಿಕ ಸಕ್ರಿಯ ರಾಜಕೀಯಕ್ಕೆ ಮರಳಿದ್ದೇನೆ ಎಂದಿದ್ದಾರೆ.
ಪಕ್ಷ ನನಗೆ ಯಾವುದೇ ಜವಾಬ್ದಾರಿ ವಹಿಸಿದರೂ ಅದನ್ನು ನಿಭಾಯಿಸುತ್ತೇನೆ ಎಂದಿರುವ ಗೋವಿಂದ, ಚುನಾವಣೆಗೆ ಸ್ಪರ್ಧೆ ಮಾಡುತ್ತೀರೆಯೇ ಎಂಬ ಪ್ರಶ್ನೆಗೆ ಉತ್ತರಿಸಿಲ್ಲ.
ಮನಮೋಹನ್ ಸಿಂಗ್ ಮೊದಲ ಬಾರಿ ಪ್ರಧಾನಿ ಆದಾಗ ಗೋವಿಂದ ಸಂಸದರಾಗಿ ಆಯ್ಕೆ ಆಗಿದ್ದರು. ಸೋನಿಯಾ ಗಾಂಧಿ ಪ್ರಧಾನಿ ಆಗಬೇಕೆಂದು ಕಣ್ಣೀರು ಹಾಕಿ ಕೇಳಿಕೊಂಡಿದ್ದರು.