Updated on: Jul 01, 2023 | 6:30 AM
ನಟಿ ಅದಿತಿ ಪ್ರಭುದೇವ ಅವರು ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈಗ ಅವರು ಪತಿ ಯಶಸ್ ಜೊತೆ ದೇಶ ಸುತ್ತುತ್ತಿದ್ದಾರೆ.
ಫ್ರಾನ್ಸ್ನ ಐಫೆಲ್ ಟವರ್ ಎದುರು ನಿಂತು ಅದಿತಿ ಪ್ರಭುದೇವ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅದಿತಿ ಪ್ರಭುದೇವ ಅವರು ಇತ್ತೀಚೆಗೆ ಸ್ವಿಜರ್ಲೆಂಡ್ಗೆ ತೆರಳಿದ್ದರು. ಅಲ್ಲಿಂದ ಅವರು ಫ್ರಾನ್ಸ್ಗೆ ತೆರಳಿದ್ದಾರೆ. ಈ ಫೋಟೋಗಳನ್ನು ಫ್ಯಾನ್ಸ್ಗಾಗಿ ಶೇರ್ ಮಾಡಿಕೊಳ್ಳುತ್ತಾರೆ.
ಅದಿತಿ ಪ್ರಭುದೇವ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಮದುವೆ ಬಳಿಕ ನಟನೆಯಿಂದ ಒಂದು ಬ್ರೇಕ್ ಪಡೆದಿದ್ದಾರೆ.
ಅದಿತಿ ಪ್ರಭುದೇವ ಅವರು ಕಿರುತೆರೆಯಲ್ಲಿ ಗುರುತಿಸಿಕೊಂಡವರು. ನಂತರ ಅವರು ಹಿರಿತೆರೆಗೆ ಕಾಲಿಟ್ಟು ಮಿಂಚಿದರು. ವಿವಾಹದ ಬಳಿಕವೂ ಅವರು ಚಿತ್ರರಂಗದಲ್ಲಿ ಮುಂದುವರಿಯುತ್ತಿದ್ದಾರೆ.
ಅದಿತಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರನ್ನು ಹಲವು ಮಂದಿ ಫಾಲೋ ಮಾಡುತ್ತಿದ್ದಾರೆ.