Updated on: Aug 01, 2023 | 9:45 AM
ನಟಿ ಅಮೂಲ್ಯಗೆ 2022ರಲ್ಲಿ ಅವಳಿ ಮಕ್ಕಳಾದವು. ಮಕ್ಕಳ ಹಲವು ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈಗ ಪತಿ ಜಗದೀಶ್ ಹಾಗೂ ಮಕ್ಕಳ ಜೊತೆ ಅಮೂಲ್ಯ ಚಿಕ್ಕಮಗಳೂರಿಗೆ ತೆರಳಿದ್ದಾರೆ. ಅಲ್ಲಿನ ರೆಸಾರ್ಟ್ನಲ್ಲಿ ಸಮಯ ಕಳೆದ ಫೋಟೋಗಳನ್ನು ಅಮೂಲ್ಯ ಹಂಚಿಕೊಂಡಿದ್ದಾರೆ.
ಈಗ ಮಳೆಗಾಲದ ಸಂದರ್ಭ. ಎಲ್ಲ ಕಾಡು-ಬೆಟ್ಟಗಳು ಹಸಿರಾಗಿವೆ. ಹೀಗಾಗಿ, ಜಗದೀಶ್ ಹಾಗೂ ಅಮೂಲ್ಯ ಇಲ್ಲಿಗೆ ಮಕ್ಕಳ ಜೊತೆ ತೆರಳಿದ್ದಾರೆ.
ಮಕ್ಕಳಿಗೆ ಅಥರ್ವ್ ಹಾಗೂ ಆದವ್ ಎಂದು ನಾಮಕರಣ ಮಾಡಲಾಗಿದೆ. ಅಮೂಲ್ಯ ಅವರ ಮಕ್ಕಳು ಸಖತ್ ಕ್ಯೂಟ್ ಆಗಿದ್ದಾರೆ ಎನ್ನುವ ಕಮೆಂಟ್ಗಳು ಬಂದಿವೆ.
ಮಕ್ಕಳು ಜನಿಸಿದ ಬಳಿಕ ಹಲವು ವರ್ಷ ಅವರ ಆರೈಕೆಯಲ್ಲಿ ತಾಯಂದಿರು ಬ್ಯುಸಿ ಆಗುತ್ತಾರೆ. ನಟಿ ಅಮೂಲ್ಯ ಅವರು ಕೂಡ ಇದಕ್ಕೆ ಹೊರತಾಗಿಲ್ಲ.
ಅಮೂಲ್ಯ ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಅವರು ಮತ್ತೆ ನಟನೆಗೆ ಮರಳಲಿ ಎಂಬುದು ಅನೇಕರ ಆಸೆ.
ಸೋಶಿಯಲ್ ಮೀಡಿಯಾದಲ್ಲಿ ಅಮೂಲ್ಯ ಆ್ಯಕ್ಟೀವ್
Published On - 9:45 am, Tue, 1 August 23