ಪ್ರಚಾರದ ವೇಳೆ ಹೋಟೆಲ್​ನಲ್ಲಿ ಗರಿಗರಿ ಮಿರ್ಚಿ ಬಜ್ಜಿ ಹಾಕಿ ಜನರಿಗೆ ಹಂಚಿದ ನಟಿ ಹರ್ಷಿಕಾ ಪೂಣಚ್ಚ

Updated on: Apr 30, 2023 | 3:03 PM

ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ವಿವಿಧ ಪಕ್ಷಗಳ ಸ್ಟಾರ್ ಪ್ರಚಾರಕರು ನಾನಾ ರೀತಿಯಾಗಿ ಮತದಾರರನ್ನು ಮನವೊಲೈಸುತ್ತಿದ್ದಾರೆ. ಮೊನ್ನೇ ಅಷ್ಟೇ ಮೈಸೂರು ನಗರದ 80 ವರ್ಷ ಹಳೆಯ ಮೈಲಾರಿ ದೋಸೆ ಹೋಟೆಲ್‌ಗೆ ಭೇಟಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಕೈಯ್ಯಾರೆ ಕಾವಲಿ ಮೇಲೆ ದೋಸೆ ಹಾಕಿ ಗಮನಸೆಳೆದಿದ್ದರು. ಇದೀಗ ಸ್ಯಾಂಡಲ್​​ವುಡ್​ ನಟಿ ಹರ್ಷಿಕಾ ಪೂಣಚ್ಚ ಮೆಣಸಿನಕಾಯಿ ಬಜ್ಜಿ ಹಾಕಿ ಜನರಿಗೆ ಹಂಚಿ ಗಮನಸೆಳೆದಿದ್ದಾರೆ.

1 / 7
ಚುನಾವಣಾ ಪ್ರಚಾರದ ವೇಳೆ ನಟಿ  ಹರ್ಷಿಕಾ ಪೂಣಚ್ಚ ಹೋಟೆಲ್​ವೊಂದರಲ್ಲಿ ಮೆಣಸಿನಕಾಯಿ ಬಜ್ಜಿ ಹಾಕಿ ಗಮನಸೆಳೆದರು

ಚುನಾವಣಾ ಪ್ರಚಾರದ ವೇಳೆ ನಟಿ ಹರ್ಷಿಕಾ ಪೂಣಚ್ಚ ಹೋಟೆಲ್​ವೊಂದರಲ್ಲಿ ಮೆಣಸಿನಕಾಯಿ ಬಜ್ಜಿ ಹಾಕಿ ಗಮನಸೆಳೆದರು

2 / 7

ಪ್ರಚಾರ ಮಾಡಲು ಚಿಕ್ಕಬಳ್ಳಾಫುರ ತಾಲೂಕಿನ ನಂದಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಹೋಟೆಲ್​ನಲ್ಲಿ ಬಜ್ಜಿ ಹಾಕಿದರು.

3 / 7

ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಪ್ರಚಾರದ ವೇಳೆ ಹೋಟೆಲ್​ನಲ್ಲಿ ಗರಿಗರಿ ಮಿರ್ಚಿ ಬಜ್ಜಿ ಮಾಡಿದರು

4 / 7

ಬಜ್ಜಿ ಕರಿದು ನೆರೆದಿದ್ದವರಿಗೆ ಹಂಚಿ ಹರ್ಷ ವ್ಯಕ್ತಪಡಿಸಿದ ಹರ್ಷಿಕಾ.

5 / 7

ಕೈಯ್ಯಾರೆ ಗರಿ ಗರಿ ಬಜ್ಜೆ ಕರಿದು ಸಂತಸ ವ್ಯಕ್ತಪಡಿಸಿದ ಹರ್ಷಿಕಾ ಪೂಣಚ್ಚ

6 / 7

ಹರ್ಷಿಕಾ ಪೂಣಚ್ಚ ಅವರು ಮೆಣಸಿನಕಾಯಿ ಬಜ್ಜಿ ಹಾಕಿ ಜನರಿಗೆ ಹಂಚಿ ಖುಷಿ ವ್ಯಕ್ತಪಡಿಸಿದರು

7 / 7

ಇದೇ ವೇಳೆ ತಾವು ಮಾಡಿದ ಬಜ್ಜಿಯನ್ನು ಮಗುವಿಗೂ ನೀಡಿದರು

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us