
ಚಿತ್ರನಟ ಪುನೀತ್ ನಿಧನ ಹಿನ್ನೆಲೆ, ಅಪ್ಪು ಕಲಾಕೃತಿ ತಯಾರಿಸಿ ಧಾರವಾಡ ಜಿಲ್ಲೆಯ ಕಲಾವಿದ ವಿಭಿನ್ನ ರೀತಿಯಲ್ಲಿ ನಮನ ಸಲ್ಲಿಸಿದ್ದಾರೆ. ಕೆಲಗೇರಿ ಬಡಾವಣೆಯ ಮಂಜುನಾಥ ಹಿರೇಮಠ ಪುನೀತ್ ರಾಜ್ ಕುಮಾರ್ ಅವರ ಕಲಾಕೃತಿ ನಿರ್ಮಿಸಿದ್ದಾರೆ.

ಅಪ್ಪು ಮತ್ತೆ ಕನ್ನಡ ಮಣ್ಣಲ್ಲೇ ಹುಟ್ಟಿ ಬರಲೆಂಬ ಆಶಯಯೊಂದಿಗೆ 5 ಗಂಟೆಗಳಲ್ಲಿ ವಿಶೇಷ ಕಲಾಕೃತಿ ನಿರ್ಮಿಸಿದ್ದಾರೆ. 2 ಅಡಿಯ ಅಪ್ಪು ಕಲಾಕೃತಿ ನಿರ್ಮಸಿದ್ದಾರೆ. ವಿಶೇಷ ಎಂದರೆ ಮಣ್ಣಲ್ಲೇ ಕಲಾಕೃತಿಯನ್ನು ಹಿರೇಮಠ ಅವರು ನಿರ್ಮಿಸಿದ್ದಾರೆ.

ಯಾರೂ ಕನಸುಮನಸಿನಲೂ ಊಹಿಸದ ರೀತಿಯಲಿ ನಿನ್ನೆ ಬೆಳಗ್ಗೆ ವಿಧಿವಶರಾದ ಯುವ ನಟ ಪುನೀತ್ ರಾಜ್ ಕುಮಾರ್ (46) ಅವರ ಅಂತ್ಯಕ್ರಿಯೆ ಭಾನುವಾರ ನಡೆಯುವ ಸಾಧ್ಯತೆಗಳಿವೆ. ಪುನೀತ್ ಅವರ ದೊಡ್ಡ ಮಗಳು ಅಮೆರಿಕಾದಿಂದ ಬರಬೇಕಾಗಿದೆ. ಈ ಮಧ್ಯೆ, ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಬಳಿಯ ಪುನೀತ್ ಫಾರ್ಮ್ಹೌಸ್ನಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.

ರಾಮನಗರ ಎಸ್ ಪಿ ಗಿರೀಶ್, ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಪುನೀತ್ ಫಾರ್ಮ್ ಹೌಸ್ ಗೆ ಭೇಟಿ ನೀಡಿ, ಅಪ್ಪು ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಹಿನ್ನೆಲೆ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಪುನೀತ್ ನಿಧನಕ್ಕೆ ಧಾರವಾಡದ ನಾಗರಿಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪುನೀತ ಅಭಿಯನದ ಕೊನೆಯ ಚಿತ್ರ ಯುವರತ್ನ ಧಾರವಾಡದಲ್ಲೇ ಚಿತ್ರೀಕರಣಗೊಂಡಿತ್ತು. ಈ ಹಿನ್ನೆಲೆ ಕೆಸಿಡಿ ಕಾಲೇಜ್ ಆಗರಣದಲ್ಲಿ ಕಲಾವಿದ ಮಂಜುನಾಥ ಹಿರೇಮಠ ತಯಾರಿಸಿದ್ದ ಪುನೀತ್ ಮಣ್ಣಿನ ಪ್ರತಿಮೆ ಇಟ್ಟು ಶ್ರದ್ಧಾಂಜಲಿ ಸಲ್ಲಸಿದ್ದಾರೆ. ವಿದ್ಯಾರ್ಥಿಗಳು, ಕಲಾವಿದರು, ಕನ್ನಡ ಹೋರಾಟಗಾರರು, ವಿವಿಧ ನಾಗರಿಕರು ಭಾಗಿಯಾಗಿದ್ದರು.
Published On - 10:20 am, Sat, 30 October 21