Updated on: Mar 07, 2023 | 2:50 PM
ವಿಭಿನ್ನ ಕಥಾಹಂದರ ಹೊಂದಿರುವ ‘ಬಿಂಗೊ’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಅಭಿನಯಿಸುತ್ತಿದ್ದಾರೆ. ನಾಯಕನಾಗಿ ಆರ್.ಕೆ. ಚಂದನ್ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾಗೆ 2 ಹಂತಗಳ ಚಿತ್ರೀಕರಣ ಮುಗಿದಿದೆ. ಸಿನಿಮಾದ ಕೆಲವು ಫೋಟೋಗಳು ಲಭ್ಯವಾಗಿದೆ.
‘ಬಿಂಗೊ’ ಸಿನಿಮಾಗೆ ಮೂರನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ನಗರದ ಹೊರವಲಯದಲ್ಲಿ ಇರುವ ದೇವರಾಜ್ ಎಸ್ಟೇಟ್ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ರಾಗಿಣಿ ದ್ವಿವೇದಿ, ಆರ್.ಕೆ. ಚಂದನ್ ಜೊತೆ ಹಲವು ಕಲಾವಿದರು ಭಾಗಿಯಾಗಿದ್ದಾರೆ.
ರಾಗಿಣಿ ದ್ವಿವೇದಿ ಅವರು ಗನ್ ಹಿಡಿದು ನಿಂತಿದ್ದಾರೆ. ಅವರ ಪಾತ್ರದ ಲುಕ್ ರಗಡ್ ಆಗಿದೆ. ಆ ಮೂಲಕ ಚಿತ್ರತಂಡ ನಿರೀಕ್ಷೆ ಹುಟ್ಟುಹಾಕಿದೆ. ರಾಗಿಣಿ ದ್ವಿವೇದಿ ಜೊತೆ ರಕ್ಷಾ ನಿಂಬರ್ಗಿ, ರಾಜೇಶ್ ನಟರಂಗ, ಮಜಾ ಟಾಕೀಸ್ ಪವನ್, ಮುರಳಿ ಪೂರ್ವಿಕ್, ಅಪೂರ್ವ, ಆಶಾ ಸುಜಯ್, ಶ್ರವಣ್ ಮುಂತಾದವರು ನಟಿಸುತ್ತಿದ್ದಾರೆ.
ಈ ಹಿಂದೆ ‘ಶಂಭೋ ಶಿವ ಶಂಕರ’ ಚಿತ್ರ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ ಅವರೀಗ ‘ಬಿಂಗೊ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಆರ್.ಕೆ. ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಹಾಗೂ ಆರ್. ಪರಾಂಕುಶ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಅವರ ಪಾತ್ರ ವಿಶೇಷವಾಗಿರಲಿದೆ. ಎರಡು ಶೇಡ್ಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಹಿತನ್ ಹಾಸನ್ ಸಂಗೀತ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ನಟರಾಜ್ ಮುದ್ದಾಲ್ ಛಾಯಾಗ್ರಹಣ ಮಾಡುತ್ತಿದ್ದಾರೆ.