
ರವೀನಾ ಟಂಡನ್ ಅವರು 1995ರಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದರು. 2004ರಲ್ಲಿ ಅನಿಲ್ ತಡಾನಿ ಜೊತೆ ರವೀನಾ ಮದುವೆ ಆದರು. ಈ ದಂಪತಿಗೆ 2005ರಲ್ಲಿ ರಾಶಾ ಜನಿಸಿದರು. ಈಗ ರಾಶಾಗೆ 18 ವರ್ಷ ವಯಸ್ಸು.

‘ಸಮಯ ತುಂಬ ಬೇಗ ಕಳೆಯುತ್ತದೆ. ಅದು ನಿಜ’ ಎಂದು ರವೀನಾ ಟಂಡನ್ ಅವರು ಸೋಶಿಯಲ್ ಮೀಡಿಯಾದ ಪೋಸ್ಟ್ಗೆ ಕ್ಯಾಪ್ಷನ್ ನೀಡಿದ್ದಾರೆ. ಪುತ್ರಿಯ ಬಾಲ್ಯದ ಫೋಟೋಗಳನ್ನು ಕೂಡ ಅವರು ಶೇರ್ ಮಾಡಿಕೊಂಡು, ನೆನಪಿನ ಪುಟ ತೆರೆದಿದ್ದಾರೆ.

ರವೀನಾ ಟಂಡನ್ ಅವರ ಪುತ್ರಿ ರಾಶಾ ತಡಾನಿ ಪದವಿ ಶಿಕ್ಷಣ ಪೂರೈಸಿದ್ದಾರೆ. ಈ ಖುಷಿಗೆ ರವೀನಾ ಟಂಡನ್ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಚಿಕ್ಕವಳಾಗಿದ್ದ ಮಗಳು ಈಗ ಪದವಿಧರೆ ಆಗುವ ಮಟ್ಟಕ್ಕೆ ಬೆಳೆದು ನಿಂತಿರುವುದನ್ನು ರವೀನಾ ಟಂಡನ್ ಅವರು ಬೆರಗಿನಿಂದ ನೋಡುತ್ತಿದ್ದಾರೆ. ಒಂದಷ್ಟು ಫೋಟೋಗಳನ್ನು ಹಂಚಿಕೊಂಡು ಅವರು ಸಂಭ್ರಮಿಸಿದ್ದಾರೆ.

ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ನಿಂದ ಪದವಿ ಪಡೆದ ರಾಶಾ ತಡಾನಿ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ರಾಶಾ ತಡಾನಿ ಅವರು ಗ್ರ್ಯಾಜುಯೇಷನ್ ದಿನದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.