ನಟಿ ಸಾನ್ಯಾ ಐಯ್ಯರ್ ಅವರು ಸದ್ಯ ಉತ್ತರ ಭಾರತದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಅವರ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ಮೊದಲು ಜಮ್ಮು ಕಾಶ್ಮೀರದಲ್ಲಿ ಸಾನ್ಯಾ ಐಯ್ಯರ್ ಸುತ್ತಾಟ ನಡೆಸಿದ್ದರು. ಈಗ ಅವರ ಪ್ರಯಾಣ ಅಮರನಾಥದ ಕಡೆ ತಿರುಗಿದೆ.
ಅಮರನಾಥದಲ್ಲಿ ಟ್ರೆಕ್ಕಿಂಗ್ ಮಾಡುತ್ತಿರುವ ಫೋಟೋಗಳನ್ನು ಸಾನ್ಯಾ ಪೋಸ್ಟ್ ಮಾಡಿದ್ದಾರೆ. ಅವರ ಜೊತೆ ಅಮ್ಮನೂ ಸಾಥ್ ನೀಡಿದ್ದಾರೆ.
ಸಾನ್ಯಾ ಐಯ್ಯರ್ಗೆ ಅಮ್ಮನ ಮೇಲೆ ಎಲ್ಲಿಲ್ಲದ ಪ್ರೀತಿ. ಇದನ್ನು ಅವರು ಆಗಾಗ ಅಭಿವ್ಯಕ್ತಿಪಡಿಸುತ್ತಾ ಇರುತ್ತಾರೆ.
ಅಮರನಾಥ ಗುಹೆ ಬಳಿ ಆದ ಅನುಭವವನ್ನು ಸಾನ್ಯಾ ಹಂಚಿಕೊಂಡಿದ್ದಾರೆ. ಇದರ ಹಿಂದಿನ ಕಥೆಯನ್ನು ಕೂಡ ಅವರು ವಿವರಿಸಿದ್ದಾರೆ.
‘ಅಮರ ಕಥೆಯನ್ನು ತನ್ನ ಪಾರ್ವತಿಗೆ ತಿಳಿಸಿದ ಜಾಗ ಅಮರನಾಥ್ ಎಂದು ಹೆಸರುವಾಸಿಯಾಗಿದೆ. ಕಥೆಯನ್ನು ಕೇಳಿಸಿಕೊಂಡ ಎರಡು ಪಾರಿವಾಳವು ಅಮರವಾಗಿಯೇ ಉಳಿಯಿತು ಎನ್ನುವುದಕ್ಕೂ ಎಷ್ಟೋ ಭಕ್ತಾದಿಗಳಿಗೆ ದರ್ಶನ ಕೊಡುತ್ತಲೇ ಬಂದಿವೆ’ ಎಂದು ಸಾನ್ಯಾ ಬರೆದುಕೊಂಡಿದ್ದಾರೆ.
Published On - 8:43 am, Mon, 31 July 23