
ಬೆಂಗಳೂರಿನ ಬಸವನಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ಸಾವಿರಾರು ಜನ ಪರಿಷೆಗೆ ಭೇಟಿ ನೀಡುತ್ತಿದ್ದಾರೆ. 'ಕಾಂತಾರ' ಚೆಲುವೆ ನಟಿ ಸಪ್ತಮಿ ಗೌಡ ಅವರು ಈ ಪರಿಷೆಗೆ ಹೋಗಿಬಂದಿದ್ದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಕಡಲೆಕಾಯಿ ಪರಿಷೆಯಲ್ಲಿ ಸಪ್ತಮಿ ಗೌಡ ಅವರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಪರಿಷೆಯಲ್ಲಿ ಜನಸಾಮಾನ್ಯರಂತೆ ಓಡಾಡಿದ್ದಾರೆ. ಜೊತೆಗೆ ಕಡಲೆಕಾಯಿ ತಿಂದು ಖುಷಿ ಪಟ್ಟಿದ್ದಾರೆ.

ಫೋಟೋ ನೋಡಿದ ಅಭಿಮಾನಿಯೊಬ್ಬರು ಮಾಸ್ಕ್ ಯಾಕೆ ಹಾಕಿದ್ದೀರಾ, ಫ್ಯಾನ್ಸ್ ಸೆಲ್ಫಿ ಕೇಳುತ್ತಾರೆ ಅಂತಾನಾ? ಎಂದು ಕಿಚಾಯಿಸಿದ್ದಾರೆ.

ಸಪ್ತಮಿ ಗೌಡ ಅವರು ತಮ್ಮ ಸ್ನೇಹಿತರೊಂದಿಗೆ ಕಡಲೆಕಾಯಿ ಪರಿಷೆಯಲ್ಲಿ ತಿರುಗಾಡಿ ಫುಲ್ ಎಂಜಾಯ್ ಮಾಡಿದ್ದಾರೆ.

'ಕಾಂತಾರ' ಚಿತ್ರದ ಮೂಲಕ ಸಪ್ತಮಿ ಗೌಡ ಅವರು ಸಖತ್ ಫೇಮಸ್ ಆಗಿದ್ದಾರೆ.

ಸದ್ಯ ನಟಿ ಸಪ್ತಮಿ ಅವರ ಬೇಡಿಕೆ ಹೆಚ್ಚಾಗಿದ್ದು, ಎರಡು ಕನ್ನಡ ಸಿನಿಮಾಗಳ ಆಫರ್ ಬಂದಿವೆ ಎನ್ನಲಾಗುತ್ತಿದೆ.