
ನಟಿ ಕೃತಿ ಸನೋನ್ ಅವರು ಬಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ಬಹುಬೇಡಿಕೆಯ ನಟಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ‘ಆದಿಪುರುಷ್’ ಚಿತ್ರದಲ್ಲಿ ಅವರು ನಟಿಸಿದ್ದು, ಅದರ ಬಿಡುಗಡೆಗಾಗಿ ಕಾದಿದ್ದಾರೆ.

ಇತ್ತೀಚೆಗೆ ‘ಆದಿಪುರುಷ್’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ಸಮಾರಂಭಕ್ಕೆ ಸೀರೆ ಧರಿಸಿ ಬಂದಿದ್ದ ಕೃತಿ ಸನೋನ್ ಅವರು ಎಲ್ಲರ ಗಮನ ಸೆಳೆದರು. ಅವರ ಫೋಟೋಗಳು ವೈರಲ್ ಆಗಿವೆ.

ಕೃತಿ ಸನೋನ್ ಅವರು ಧರಿಸಿದ ಸೀರೆ ತುಂಬ ವಿಶೇಷವಾಗಿದೆ. ಈ ಸೀರೆಯ ಬಾರ್ಡರ್ನಲ್ಲಿ 24 ಕ್ಯಾರೆಟ್ ಗೋಲ್ಡ್ ಇದೆ. ವಿಶೇಷವಾದ ರೀತಿಯಲ್ಲಿ ಸೀರೆ ಧರಿಸಿದ್ದ ಅವರನ್ನು ಕಂಡು ಅಭಿಮಾನಿಗಳು ವಾವ್ ಎಂದಿದ್ದಾರೆ.

ಬಟ್ಟೆಗಳ ವಿಚಾರದಲ್ಲಿ ಕೃತಿ ಸನೋನ್ ಅವರು ಆಗಾಗ ಪ್ರಯೋಗ ಮಾಡುತ್ತಾರೆ. ಸೀರೆಗಳು ಅವರಿಗೆ ಚೆನ್ನಾಗಿ ಒಪ್ಪುತ್ತವೆ. ‘ಆದಿಪುರುಷ್’ ಸಿನಿಮಾದಲ್ಲಿ ಅವರು ಸೀತೆಯ ಪಾತ್ರ ಮಾಡಿದ್ದಾರೆ. ಹಾಗಾಗಿ ಈ ಚಿತ್ರದ ಪ್ರಚಾರ ಕಾರ್ಯಗಳಿಗೆ ಸೀರೆ ಧರಿಸಿ ಬರುತ್ತಿದ್ದಾರೆ.

‘ಆದಿಪುರುಷ್’ ಸಿನಿಮಾದಲ್ಲಿ ಪ್ರಭಾಸ್ ಅವರು ರಾಮನಾಗಿ ನಟಿಸಿದ್ದಾರೆ. ಓಂ ರಾವತ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಿಂದ ಕೃತಿ ಸನೋನ್ ಅವರಿಗೆ ದೊಡ್ಡ ಗೆಲುವು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.