- Kannada News Photo gallery Adivasis Carried A Sick Woman In A Doli In Moolpet Mandal Of Alluri seetharamaraju District for treatment
ಆಧುನಿಕ ಕಾಲದಲ್ಲಿಯೂ ಆದಿವಾಸಿಗಳ ಪಾಡು ಹೀಗಿದೆ.. ಡೋಲಿಯಲ್ಲಿ ಸಾಗುವ ಜೀವನ ಚಿತ್ರಣ ನೋಡಿ
ಇಂದಿನ ಆಧುನಿಕ ಕಾಲದಲ್ಲೂ ದೂರದ ಕಾಡುಮೇಡು ಪ್ರದೇಶಗಳಲ್ಲಿ ವಾಸಿಸುತ್ತಿರುವ ಕಾಡು ಮಕ್ಕಳಿಗೆ ಡೋಲಿ ಹೊರುವ (a makeshift stretcher -doli) ಹೀನಾಯ ದುಃಸ್ಥಿತಿಯಿಂದ ಮುಕ್ತಿ ಸಿಗುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಜೀವನಾವಶ್ಯಕ ತುರ್ತು ಸಂದರ್ಭದಲ್ಲಿ ಓಡಾಡಲು ರಸ್ತೆ, ವಾಹನಗಳು ಇಲ್ಲ. ಇದರಿಂದ ಮಕ್ಕಳು, ಗರ್ಭಿಣಿಯರು ಹಾಗೂ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
Updated on: May 16, 2024 | 4:06 PM

ಇಂದಿನ ಆಧುನಿಕ ಕಾಲದಲ್ಲೂ ದೂರದ ಕಾಡುಮೇಡು ಪ್ರದೇಶಗಳಲ್ಲಿ ವಾಸಿಸುತ್ತಿರುವ ಕಾಡು ಮಕ್ಕಳಿಗೆ ಡೋಲಿ ಹೊರುವ ಹೀನಾಯ ದುಃಸ್ಥಿತಿಯಿಂದ ಮುಕ್ತಿ ಸಿಗುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಜೀವನಾವಶ್ಯಕ ತುರ್ತು ಸಂದರ್ಭದಲ್ಲಿ ಓಡಾಡಲು ರಸ್ತೆ, ವಾಹನಗಳು ಇಲ್ಲ. ಇದರಿಂದ ಮಕ್ಕಳು, ಗರ್ಭಿಣಿಯರು ಹಾಗೂ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಇತ್ತೀಚೆಗೆ ಅಸ್ವಸ್ಥರಾದ ಆದಿವಾಸಿ ಮಹಿಳೆಯನ್ನು ಆರು ಕಿ. ಮೀ. ದೂರ ಹೀಗೆಯೇ ಡೋಲಿಯಲ್ಲಿ ಸಾಗಿಸಲಾಯಿತು. ಐತಿಹಾಸಿಕ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಕೊಯ್ಯೂರು ಮಂಡಲ (Koyyuru mandal) ಮೂಲಪೇಟ್ ಪಂಚಾಯತ್ ಜಾಜುಲು ಬಂದ ಗ್ರಾಮಸ್ಥರ ಪಡಿಪಾಟಲು ಇದಾಗಿದೆ. ಬೆಟ್ಟದ ತುದಿಯಲ್ಲಿರುವ ಗ್ರಾಮದಲ್ಲಿ 29 ಕುಟುಂಬಗಳಿದ್ದು, ಅದರಲ್ಲಿ 140 ಜನರು ವಾಸವಿದ್ದಾರೆ

ಇದರಿಂದ ಆಂ ಆದಿವಾಸಿ ಕಾಡು ಮಕ್ಕಳು ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ. ಮರ್ರಿ ಕಾವ್ಯ ಎಂಬ ಆದಿವಾಸಿ ಮಹಿಳೆ ಕಳೆದೊಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಳಗ್ಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಿದ್ಧರಾದರು.

ಆದರೆ ಸಕಾಲಕ್ಕೆ ಆಂಬ್ಯುಲೆನ್ಸ್ ಸಿಗದ ಕಾರಣ ಮಹಿಳೆಯ ಕುಟುಂಬಸ್ಥರು ಗ್ರಾಮಸ್ಥರ ನೆರವು ಕೋರಿದ್ದಾರೆ. ಕಾವ್ಯಾ ರನ್ನು ಡೋಲಿನಲ್ಲಿ ಕೂಡಿಸಿಕೊಂಡು ಐದಾರು ಕಿ.ಮೀ. ದೂರದಲ್ಲಿರುವ ಅನಕಾಪಲ್ಲಿ ಜಿಲ್ಲೆಯ ರೋಲುಗುಂಟಾ ಮಂಡಲದ ಅರಳ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಈ ವೇಳೆ ಆಂಬ್ಯುಲೆನ್ಸ್ ಸೌಲಭ್ಯ ಇಲ್ಲವೆಂದು ಕಾವ್ಯಾ ಪತಿ ಕಾಮೇಶ್ ತೀವ್ರ ದುಃಖ ವ್ಯಕ್ತಪಡಿಸಿದರು.

ಅಲ್ಲಿಂದ ಕಾವ್ಯಾರನ್ನು ಬೂಚಿಂಪೇಟೆ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ತೊಟ್ಟಿಲಲ್ಲಿಯೇ (ಡೋಲಿ) ಕೊಂಡೊಯ್ದು ಚಿಕಿತ್ಸೆ ಕೊಡಿಸಲಾಯಿತು. ತಮ್ಮ ಗ್ರಾಮಕ್ಕೆ ರಸ್ತೆ ಸೌಲಭ್ಯ ಕಲ್ಪಿಸಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಗೋವಿಂದ ರಾವ್ ಅವರು ಅಧಿಕಾರಿಗಳಲ್ಲಿ ಮನವಿ ಮಾಡಿದರು. ಅಪೂರ್ಣ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.




