ಎಐ ಮ್ಯಾಜಿಕ್: ಮೇಘನಾ ರಾಜ್ ಕೈ ಹಿಡಿದು ಪ್ರೀತಿಯಿಂದ ನೋಡಿದ ಚಿರು

Updated on: Jun 05, 2026 | 11:41 AM

ಆಧುನಿಕ ಎಐ ತಂತ್ರಜ್ಞಾನದ ಸಹಾಯದಿಂದ ನಟಿ ಮೇಘನಾ ರಾಜ್ ಅವರಿಗೆ ತಮ್ಮ ಅಗಲಿದ ಪತಿ, ಚಿರಂಜೀವಿ ಸರ್ಜಾ ಮತ್ತೆ ಸಿಕ್ಕಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅಪರೂಪದ ಎಐ ಫೋಟೋ ಅಭಿಮಾನಿಗಳ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡುತ್ತಿವೆ.

1 / 5
ಕನ್ನಡ ಚಿತ್ರರಂಗದ ಖ್ಯಾತ ನಟಿ ಮೇಘನಾ ರಾಜ್ ಅವರ ಜೀವನದಲ್ಲಿ ಎಐ ತಂತ್ರಜ್ಞಾನವು ಹೊಸದೊಂದು ಭಾವನಾತ್ಮಕ ಮ್ಯಾಜಿಕ್ ಸೃಷ್ಟಿಸಿದೆ. ಅಗಲಿದ ಪತಿ ಚಿರಂಜೀವಿ ಸರ್ಜಾ ಅವರನ್ನು ಡಿಜಿಟಲ್ ರೂಪದಲ್ಲಿ ಮತ್ತೆ ತಂದುಕೊಟ್ಟಿದೆ. (AI Image)

ಕನ್ನಡ ಚಿತ್ರರಂಗದ ಖ್ಯಾತ ನಟಿ ಮೇಘನಾ ರಾಜ್ ಅವರ ಜೀವನದಲ್ಲಿ ಎಐ ತಂತ್ರಜ್ಞಾನವು ಹೊಸದೊಂದು ಭಾವನಾತ್ಮಕ ಮ್ಯಾಜಿಕ್ ಸೃಷ್ಟಿಸಿದೆ. ಅಗಲಿದ ಪತಿ ಚಿರಂಜೀವಿ ಸರ್ಜಾ ಅವರನ್ನು ಡಿಜಿಟಲ್ ರೂಪದಲ್ಲಿ ಮತ್ತೆ ತಂದುಕೊಟ್ಟಿದೆ. (AI Image)

2 / 5

ಈ ಅಪರೂಪದ ಚಿತ್ರದಲ್ಲಿ ಚಿರು ಮತ್ತು ಮೇಘನಾ ಪರಸ್ಪರ ಪ್ರೀತಿಯಿಂದ ಕಣ್ಣಿಟ್ಟು ನೋಡುತ್ತಿರುವುದನ್ನು ಕಾಣಬಹುದು. ಇಬ್ಬರ ಮುಖದಲ್ಲಿನ ನಗು ಪ್ರತಿಯೊಬ್ಬರ ಹೃದಯ ಸ್ಪರ್ಶಿಸುವಂತಿದೆ. (AI Image)

3 / 5

ಚಿರು ಅಗಲಿಕೆಯ ನಂತರ ಮೇಘನಾ ಒಂಟಿಯಾಗಿದ್ದರು. ಆದರೆ ಇತ್ತೀಚಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವು ಈ ಜೋಡಿಯನ್ನು ಸುಂದರ ಫೋಟೋ ಫ್ರೇಮ್ ಒಂದರಲ್ಲಿ ಮತ್ತೆ ಒಂದುಗೂಡಿಸುವಂತೆ ಅದ್ಭುತವಾಗಿ ಮರುಸೃಷ್ಟಿ ಮಾಡಿದೆ. (AI Image)

4 / 5

ಈ ಅದ್ಭುತ ಎಐ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ನೆಚ್ಚಿನ ಜೋಡಿಯನ್ನು ಒಟ್ಟಿಗೆ ನೋಡಿ ಭಾವುಕರಾಗಿ ಕಮೆಂಟ್ ಮಾಡುತ್ತಿದ್ದಾರೆ.

5 / 5

ತಂತ್ರಜ್ಞಾನದ ಮೂಲಕವಾದರೂ ಚಿರಂಜೀವಿ ಸರ್ಜಾ ಅವರನ್ನು ಮೇಘನಾ ರಾಜ್ ಅವರ ಜೊತೆ ಮತ್ತೆ ನೋಡುವಂತಾಯಿತಲ್ಲ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಮೇಘನಾ ರಾಜ್ ಅವರು ‘ಕ್ವಾಟ್ಲೆ ಕಿಚನ್ ಸೀಸನ್ 2’ಗೆ ಜಡ್ಜ್ ಆಗಿದ್ದಾರೆ.

Published On - 11:40 am, Fri, 5 June 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us