Updated on: Nov 01, 2022 | 12:13 PM
ನಟಿ ಐಶ್ವರ್ಯಾ ರೈ ಅವರು ಇಂದು (ನವೆಂಬರ್ 1) 49ನೇ ವರ್ಷದ ಜನ್ಮದಿವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಫ್ಯಾನ್ಸ್ ಕಡೆಯಿಂದ ಶುಭಾಶಯ ಬರುತ್ತಿದೆ. ಸೆಲೆಬ್ರಿಟಿಗಳು ಐಶ್ವರ್ಯಾ ರೈ ಅವರಿಗೆ ಬರ್ತ್ಡೇ ಶುಭಾಶಯ ತಿಳಿಸುತ್ತಿದ್ದಾರೆ.
ಐಶ್ವರ್ಯಾ ರೈ ಅವರ 1994ರಲ್ಲಿ ವಿಶ್ವ ಸುಂದರಿ ಪಟ್ಟ ಗಳಿಸಿದರು. ಅಲ್ಲಿಂದ ಐಶ್ವರ್ಯಾ ಅವರ ಅದೃಷ್ಟ ಬದಲಾಯಿತು. ಅವರಿಗೆ ಹಲವು ಸಿನಿಮಾ ಆಫರ್ಗಳು ಬಂದವು.
ಐಶ್ವರ್ಯಾ ರೈ ಅವರ 1992ರಲ್ಲಿ ಪಡೆದ ಮೊದಲ ಸಂಬಳ ಕೇವಲ 1500 ರೂಪಾಯಿ. ಆದರೆ, ಈಗ ಅವರು ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.
ಐಶ್ವರ್ಯಾ ರೈ ಅವರು ‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಯಶಸ್ಸಿನ ಅಲೆಯಲ್ಲಿದ್ದಾರೆ. ಈ ಚಿತ್ರಕ್ಕೆ ಮಣಿರತ್ನಂ ಅವರು ನಿರ್ದೇಶನ ಮಾಡಿದ್ದಾರೆ.
ಐಶ್ವರ್ಯಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಇದೆ. ಕೋಟ್ಯಂತರ ಅಭಿಮಾನಿಗಳು ಅವರನ್ನು ಹಿಂಬಾಲಿಸುತ್ತಿದ್ದಾರೆ. ಅವರ ಹಳೆಯ ಫೋಟೋಗಳು ಈಗ ವೈರಲ್ ಆಗುತ್ತಿದೆ.