ಕೊಟ್ಟ ಮಾತಿನಂತೆ 1000 ಎಕರೆ ಕಾಡನ್ನು ದತ್ತು ಪಡೆದ ಅಕ್ಕಿನೇನಿ ನಾಗಾರ್ಜುನ; ಇಲ್ಲಿವೆ ಫೋಟೋಗಳು
TV9 Web | Updated By: ರಾಜೇಶ್ ದುಗ್ಗುಮನೆ
Updated on:
Feb 17, 2022 | 2:05 PM
ಹೈದರಾಬಾದ್ ಹೊರವಲಯದಲ್ಲಿರುವ ಚೆಂಗಿಚೆರ್ಲಾ ಅರಣ್ಯಭಾಗವನ್ನು ತಂದೆ ಅಕ್ಕಿನೇನಿ ನಾಗೇಶ್ವರ್ ರಾವ್ ಹೆಸರಲ್ಲಿ ನಾಗಾರ್ಜುನ ದತ್ತು ಪಡೆದಿದ್ದಾರೆ. ಇದಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮ ನಡೆದಿದೆ.
1 / 5
ಕಳೆದ ವರ್ಷ ತೆಲುಗು ಬಿಗ್ ಬಾಸ್ ವೇದಿಕೆ ಮೇಲೆ 1000 ಎಕರೆ ಕಾಡನ್ನು ದತ್ತು ತೆಗೆದುಕೊಳ್ಳುವ ಭರವಸೆ ನೀಡಿದ್ದರು ಅಕ್ಕಿನೇನಿ ನಾಗಾರ್ಜುಉನ. ಈಗ ಅದನ್ನು ಈಡೇರಿಸಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಅವರ ಕೆಲಸಕ್ಕೆ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
2 / 5
ರಾಜ್ಯ ಸಭೆಯ ಸದಸ್ಯ ಸಂತೋಷ್ ಜೋಗಿನಪಲ್ಲಿ ಅವರಿಗೆ ಮರಗಳ ಮೇಲೆ ಅತ್ಯಂತ ಹೆಚ್ಚು ಪ್ರೀತಿ. ಅವರು ಮರಗಳನ್ನು ಉಳಿಸಲು ಹಾಗೂ ಬೆಳೆಸಲು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಇವರ ಪರಿಚಯ ಅನೇಕರಿಗೆ ಇದೆ. ಗ್ರೀನ್ ಇಂಡಿಯಾ ಚಾಲೆಂಜ್ ಅಡಿಯಲ್ಲಿ 16 ಕೋಟಿ ಮರಗಳನ್ನು ಅವರು ಬೆಳೆಸಿದ್ದಾರೆ. ಈ ಒಂದು ಅದ್ಭುತ ಕೆಲಸಕ್ಕೆ ಸಾಕಷ್ಟು ಸೆಲೆಬ್ರಿಟಿಗಳನ್ನೂ ಅವರು ಸೇರ್ಪಡೆ ಮಾಡಿಕೊಂಡಿದ್ದಾರೆ. ಈಗ ಈ ಸಾಲಿಗೆ ಅಕ್ಕಿನೇನಿ ನಾಗಾರ್ಜುನ ಕೂಡ ಸೇರಿಕೊಂಡಿದ್ದರು.
3 / 5
ಹೈದರಾಬಾದ್ ಹೊರವಲಯದಲ್ಲಿರುವ ಚೆಂಗಿಚೆರ್ಲಾ ಅರಣ್ಯಭಾಗವನ್ನು ತಂದೆ ಅಕ್ಕಿನೇನಿ ನಾಗೇಶ್ವರ್ ರಾವ್ ಹೆಸರಲ್ಲಿ ನಾಗಾರ್ಜುನ ದತ್ತು ಪಡೆದಿದ್ದಾರೆ. ಇದಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮ ನಡೆದಿದೆ.
4 / 5
ಅಕ್ಕಿನೇನಿ ನಾಗಾರ್ಜುನ, ಅಮಲಾ, ನಾಗ ಚೈತನ್ಯ, ಎಂಪಿ ಜೆ. ಸಂತೋಷ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾಡನ್ನು ಬೆಳೆಸಲು ನಾಗಾರ್ಜುನ ಅವರು ಎರಡು ಕೋಟಿ ರೂಪಾಯಿ ಚೆಕ್ ನೀಡಿದ್ದಾರೆ.
5 / 5
ಅಕ್ಕಿನೇನಿ ನಾಗಾರ್ಜುನ ನಟನೆಯ ‘ಬಂಗಾರ್ರಾಜು’ ಸಿನಿಮಾ ಸಂಕ್ರಾಂತಿ ನಿಮಿತ್ತ ತೆರೆಗೆ ಬಂದು ಯಶಸ್ಸು ಕಂಡಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಈಗ ಅವರು ವೆಬ್ ಸೀರಿಸ್ ಮೂಲಕ ಪ್ರೇಕ್ಷಕರ ಎದುರು ಬರಲಿದ್ದಾರೆ ಎನ್ನಲಾಗುತ್ತಿದೆ.