ಅಕ್ಷಯ್ ಕುಮಾರ್ ಸಾಲುಸಾಲು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ‘ಬಚ್ಚನ್ ಪಾಂಡೆ’ ಮಾರ್ಚ್ 18ಕ್ಕೆ ತೆರೆಗೆ ಬರಲಿದೆ. ಇದೀಗ ಅಕ್ಷಯ್ ತಮ್ಮ ಮತ್ತೊಂದು ಬಿಗ್ ಬಜೆಟ್ ಚಿತ್ರ ಪೃಥ್ವಿರಾಜ್ ಚೌಹಾಣ್ ಕತೆಯನ್ನಾಧರಿಸಿದ ‘ಪೃಥ್ವಿರಾಜ್’ ಚಿತ್ರದ ರಿಲೀಸ್ ದಿನಾಂಕವನ್ನು ಘೋಷಿಸಿದ್ದಾರೆ. ಜೂನ್ 10ರಂದು ಸಿನಿಮಾ ರಿಲೀಸ್ ಆಗಲಿದೆ.
‘ಪೃಥ್ವಿರಾಜ್’ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ಚಿತ್ರ ತೆರೆಗೆ ಬರಲಿದೆ.
ಈ ಚಿತ್ರದ ಮೂಲಕ ಮಾನುಷಿ ಚಿಲ್ಲರ್ ಅವರನ್ನು ಬಾಲಿವುಡ್ಗೆ ಪರಿಚಯಿಸಲಾಗುತ್ತಿದೆ.
ಸಂಜಯ್ ದತ್ ಈ ಚಿತ್ರದಲ್ಲಿ ಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು, ‘ಕಾಕಾ ಕನ್ಹಾ’ನಾಗಿ ಬಣ್ಣಹಚ್ಚಲಿದ್ದಾರೆ.
ಸೋನು ಸೂದ್ ಪಾತ್ರಕ್ಕಾಗಿ ಸಂಪೂರ್ಣ ಬದಲಾಗಿದ್ದಾರೆ. ಅವರ ಗೆಟಪ್ ಹೀಗಿದೆ.