ಬಹುಭಾಷಾ ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಏಪ್ರಿಲ್ 14ರ ಗುರುವಾರದಂದು ತಮ್ಮ ನಿವಾಸದಲ್ಲಿ ಆಲಿಯಾ ಹಾಗೂ ರಣಬೀರ್ ವಿವಾಹ ಬಂಧನಕ್ಕೆ ಒಳಗಾಗಿದ್ದರು.
ಮದುವೆಯ ನಂತರ ಫೋಟೋ ಹಂಚಿಕೊಂಡು ಅಧಿಕೃತವಾಗಿ ಹೇಳಿಕೊಂಡಿದ್ದ ಈ ಜೋಡಿ, ಅದಕ್ಕೂ ಮುನ್ನ ವಿಷಯವನ್ನು ಆದಷ್ಟು ಗೌಪ್ಯವಾಗಿಟ್ಟಿದ್ದರು.
ಆಲಿಯಾ ಹಾಗೂ ರಣಬೀರ್ ವಿವಾಹದ ಫೋಟೋಗಳನ್ನು ಹಂಚಿಕೊಂಡ ನಂತರ ಇದೀಗ ಮೆಹಂದಿ ಶಾಸ್ತ್ರದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆಪ್ತರೊಂದಿಗೆ ಸಂಭ್ರಮಿಸುತ್ತಿರುವ ವಿಶೇಷ ಫೋಟೋಗಳನ್ನು ಹಂಚಿಕೊಂಡಿರುವ ತಾರಾ ಜೋಡಿ, ಜೀವನದ ಅತ್ಯಂತ ಸಂಭ್ರಮದ ಕ್ಷಣಗಳಿವು ಎಂದು ಬಣ್ಣಿಸಿದ್ದಾರೆ.
ಮೆಹಂದಿ ಕಾರ್ಯಕ್ರಮದಲ್ಲಿ ರಣಬೀರ್ ಕಪೂರ್ ತಮ್ಮ ತಂದೆ ದಿ.ರಿಷಿ ಕಪೂರ್ ಅವರ ಭಾವಚಿತ್ರದೊಂದಿಗೆ ನೃತ್ಯ ಮಾಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಆಲಿಯಾ ಆಪ್ತರು ಹಾಜರಿದ್ದು, ನಟಿಯ ಸಂಭ್ರಮವನ್ನು ಹೆಚ್ಚಿಸಿದರು.
ಆಲಿಯಾ- ರಣಬೀರ್ ಮೆಹಂದಿ ಶಾಸ್ತ್ರದ ಚಿತ್ರಗಳೀಗ ವೈರಲ್ ಆಗಿದ್ದು, ಜನರ ಮನಗೆದ್ದಿದೆ.
ಈ ಹಿಂದೆ ಆಲಿಯಾ- ರಣಬೀರ್ ವಿವಾಹ ಸಂದರ್ಭದ ಫೋಟೋಗಳನ್ನು ಹಂಚಿಕೊಂಡಿದ್ದರು.
ಪಂಜಾಬಿ ಶೈಲಿಯಲ್ಲಿ ವಿವಾಹವಾಗಿದ್ದ ಈ ಜೋಡಿಯನ್ನು ನೋಡಿ ಅಭಿಮಾನಿಗಳು ಸಂತಸಗೊಂಡಿದ್ದರು.
ಆಲಿಯಾ ಭಟ್- ರಣಬೀರ್ ಕಪೂರ್
ಆಲಿಯಾ ಭಟ್- ರಣಬೀರ್ ಕಪೂರ್
ಆಲಿಯಾ ಭಟ್- ರಣಬೀರ್ ಕಪೂರ್