
ಬಾಲಿವುಡ್ ನಟಿ ಆಲಿಯಾ ಭಟ್ ಬಂಗಾರದ ಬಣ್ಣದಲ್ಲಿ ಮಿಂಚಿದ್ದಾರೆ.

ಹಳದಿ ಬಣ್ಣದ ಸೀರೆ, ರವಿಕೆ ತೊಟ್ಟಿರುವ ಆಲಿಯಾ ಭಟ್, ಜಡೆಗೂ ಬಂಗಾರದ ಬಣ್ಣದ ಟೇಪು ಕಟ್ಟಿಕೊಂಡು ಫೋಸು ಕೊಟ್ಟಿದ್ದಾರೆ.

ಆಲಿಯಾ ಭಟ್ ಬಾಲಿವುಡ್ನ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ದೀಪಿಕಾರನ್ನೂ ಹಿಂದಿಕ್ಕಿದ್ದಾರೆ ಆಲಿಯಾ.

ಇತ್ತೀಚೆಗಷ್ಟೆ ಆಲಿಯಾ ಭಟ್ಗೆ ನಟನೆಗೆ ರಾಷ್ಟ್ರಪ್ರಶಸ್ತಿಯೂ ಲಭಿಸಿದೆ. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾಕ್ಕೆ ಅವಾರ್ಡ್ ದೊರೆತಿದೆ.

ಆಲಿಯಾ ಭಟ್ ಪ್ರಸ್ತುತ ಹಲವು ಸಿನಿಮಾಗಳನ್ನು ಕೈಯಲ್ಲಿ ಹಿಡಿದಿದ್ದಾರೆ. ಸ್ವಂತ ನಿರ್ಮಾಣವನ್ನೂ ಮಾಡುತ್ತಿದ್ದಾರೆ.

ಹೊಸದೊಂದು ಹಾಲಿವುಡ್ ಸಿನಿಮಾದಲ್ಲಿಯೂ ಆಲಿಯಾ ಭಟ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಹೆಣ್ಣು ಮಗುವಿನ ತಾಯಿಯಾಗಿರುವ ಆಲಿಯಾ ಭಟ್, ತಾಯಿಯಾದ ಬಳಿಕವೇ ಹೆಚ್ಚು ಅವಕಾಶಗಳನ್ನು ಪಡೆಯುತ್ತಿದ್ದಾರೆ.