Updated on: Nov 22, 2022 | 2:05 PM
ನಟಿ ಆಲಿಯಾ ಭಟ್ ಅವರಿಗೆ ಇತ್ತೀಚೆಗೆ ಹೆಣ್ಣು ಮಗು ಜನಿಸಿತ್ತು. ಈ ವಿಷಯವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದರು.
ಮಗು ಜನಿಸಿದ ಕೆಲ ವಾರಗಳ ಬಳಿಕ ಆಲಿಯಾ ಭಟ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.
ಆಲಿಯಾ ಭಟ್ ಅವರು ನಟನೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.
ಆಲಿಯಾ ಭಟ್ ಅವರು ಪ್ರಾಣಿ ಪ್ರೇಮಿ. ಮನೆಯಲ್ಲಿ ಬೆಕ್ಕು, ನಾಯಿ ಸಾಕಿದ್ದಾರೆ. ಅವುಗಳ ಫೋಟೋಗಳನ್ನೂ ಆಗಾಗ ಹಂಚಿಕೊಳ್ಳುತ್ತಾರೆ.
ರಣಬೀರ್ ಕಪೂರ್ ಅವರನ್ನು ಆಲಿಯಾ ಏಪ್ರಿಲ್ನಲ್ಲಿ ಮದುವೆ ಆದರು. ಪತಿ ಜತೆ ಅವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.
Published On - 1:30 pm, Tue, 22 November 22