- Kannada News Photo gallery Amazon announces Smartphone Upgrade Days deals and offers on a range of the latest smartphones
Amazon: ಅಮೆಜಾನ್ನಲ್ಲಿ ಸ್ಮಾರ್ಟ್ಫೋನ್ ಅಪ್ಗ್ರೇಡ್ ಡೇಸ್: ಮೊಬೈಲ್ ಖರೀದಿಗೆ ಇದೇ ಬೆಸ್ಟ್ ಟೈಮ್
Amazon Smartphone Upgrade Days: ಈ ಬಾರಿ ಅಮೆಜಾನ್ ಸ್ಮಾರ್ಟ್ ಫೋನ್ ಅಪ್ ಗ್ರೇಡ್ ಡೇಸ್ ನಡೆಸುತ್ತಿದ್ದು ಅತ್ಯಂತ ಕಡಿಮೆ ಬೆಲೆಗೆ ಮೊಬೈಲ್ ಗಳು ಮಾರಾಟ ಆಗುತ್ತಿದೆ. ಆಗಸ್ಟ್ 14ರ ವರೆಗೆ ಈ ಸೇಲ್ ನಡೆಯಲಿದೆ. ಆಕರ್ಷಕ ರಿಯಾಯಿತಿಯಲ್ಲಿ ಸಿಗುತ್ತಿರುವ ಫೋನ್ ಗಳ ಬಗೆಗಿನ ಮಾಹಿತಿ ಇಲ್ಲಿದೆ.
Updated on:Aug 12, 2022 | 3:05 PM

ಇತ್ತೀಚೆಗಷ್ಟೆ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಹಮ್ಮಿಕೊಂಡು ಭರ್ಜರಿ ಸದ್ದು ಮಾಡಿದ್ದ ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್ ಇದೀಗ ಮತ್ತೊಂದು ಸೇಲ್ ನೊಂದಿಗೆ ಬಂದಿದೆ. ಈ ಬಾರಿ ಅಮೆಜಾನ್ ಸ್ಮಾರ್ಟ್ ಫೋನ್ ಅಪ್ ಗ್ರೇಡ್ ಡೇಸ್ ನಡೆಸುತ್ತಿದ್ದು ಅತ್ಯಂತ ಕಡಿಮೆ ಬೆಲೆಗೆ ಮೊಬೈಲ್ ಗಳು ಮಾರಾಟ ಆಗುತ್ತಿದೆ. ಆಗಸ್ಟ್ 14ರ ವರೆಗೆ ಈ ಸೇಲ್ ನಡೆಯಲಿದೆ. ಆಕರ್ಷಕ ರಿಯಾಯಿತಿಯಲ್ಲಿ ಸಿಗುತ್ತಿರುವ ಫೋನ್ ಗಳ ಬಗೆಗಿನ ಮಾಹಿತಿ ಇಲ್ಲಿದೆ.

ಒನ್ ಪ್ಲಸ್ 9 ಸರಣಿಯ ಫೋನಿಗೆ ಆಕರ್ಷಕ ಆಫರ್ ನೀಡಲಾಗಿದೆ. 37,999 ರೂ. ಗೆ ಮಾರಾಟ ಆಗುತ್ತಿರುವ ಈ ಫೋನಿನ ಮೇಲೆ 5,000 ರೂ. ಗಳ ಎಕ್ಸ್ ಚೇಂಜ್ ಆಫರ್ ಇದೆ. ಒನ್ ಪ್ಲಸ್ 10R ಮೇಲೆ 4,000 ರೂ. ಗಳ ಡಿಸ್ಕೌಂಟ್ ಘೋಷಿಸಲಾಗಿದೆ. ಒನ್ ಪ್ಲಸ್ 10 ಪ್ರೊ ಮೇಲೆ 5,000 ರೂ. ಗಳ ಡಿಸ್ಕೌಂಟ್ ಘೋಷಿಸಲಾಗಿದೆ.

ಇತ್ತೀಚೆಗಷ್ಟೆ ಬಿಡುಗಡೆ ಆದ ಒನ್ ಪ್ಲಸ್ 10T ಮೇಲೆ 5,000 ರೂ. ಗಳ ಬ್ಯಾಂಕ್ ಆಫರ್ ಡಿಸ್ಕೌಂಟ್ ನೀಡಲಾಗಿದೆ. ಒನ್ ಪ್ಲಸ್ ನಾರ್ಡ್ CE 2ಲೈಟ್ ಈಗ ಕೇವಲ 18,999 ರೂ. ಗೆ ಹಾಗೂ ಒನ್ ಪ್ಲಸ್ ನಾರ್ಡ್ CE 2ಲೈಟ್ 23,999 ರೂ. ಗೆ ನಿಮ್ಮದಾಗಿಸಬಹುದು.

ಸ್ಯಾಮ್ ಸಂಗ್ M ಸರಣಿಯ ಫೋನುಗಳ ಮೇಲೂ ರಿಯಾಯಿತಿ ನೀಡಲಾಗಿದೆ. ಗ್ಯಾಲಕ್ಸಿ ಎಮ್53 ಮೇಲೆ 5,000 ರೂ. ಗಳ ರಿಯಾಯಿತಿ ಇದೆ. ಇದರ ಜೊತೆಗೆ ಬ್ಯಾಂಕ್ ಆಫರ್ ಕೂಡ ಲಭ್ಯವಿದ್ದು ಇನ್ನಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು.

ಶವೋಮಿಯ ಫೋನುಗಳ ಮೇಲೆ ಬರೋಬ್ಬರಿ ಶೇ. 40 ರಷ್ಟು ರಿಯಾಯಿತಿ ನೀಡಲಾಗಿದೆ. ರೆಡ್ಮಿ 9 ಸರಣಿಯ ಫೋನ್ 6,999 ರೂ. ಗಳಿಂದ ಆರಂಭವಾಗುತ್ತಿದೆ. ರೆಡ್ಮಿ ನೋಟ್ 10, ರೆಡ್ಮಿ ನೋಟ್ 10ಟಿ 5ಜಿ, ರೆಡ್ಮಿ ನೋಟ್ 10 ಪ್ರೊ, ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್, ರೆಡ್ಮಿ ನೋಟ್ 10ಎಸ್ ಅನ್ನು ಬ್ಯಾಂಕ್ ಆಫರ್ ಮೂಲಕ ಕಡಿಮೆ ಬೆಲೆಗೆ ನಿಮ್ಮದಾಗಿಸಬಹುದು.

ಶವೋಮಿ 11 ಲೈಟ್ ಫೋನ್ ಕೇವಲ 24,999 ರೂ. ಗೆ ಸೇಲ್ ಕಾಣುತ್ತಿದೆ. ಅಂತೆಯೆ ಶವೋಮಿ 11ಟಿ ಪ್ರೊ ಸ್ಮಾರ್ಟ್ ಫೋನ್ ಅನ್ನು 37,999 ರೂ. ಗೆ ಖರೀದಿಸಬಹುದು. ಇದರ ಜೊತೆಗೆ ಎಕ್ಸ್ ಚೇಂಜ್ ಆಫರ್, ಬ್ಯಾಂಕ್ ಆಫರ್ ಕೂಡ ನೀಡಲಾಗಿದೆ.
Published On - 3:05 pm, Fri, 12 August 22




