Updated on: Aug 11, 2022 | 10:40 PM
ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಅವರು ‘ಲೈಗರ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕಾಗಿ ಅವರು ನಾನಾ ನಗರಗಳಿಗೆ ತೆರಳುತ್ತಿದ್ದಾರೆ.
‘ಲೈಗರ್’ ಸಿನಿಮಾ ಪ್ರಚಾರಕ್ಕಾಗಿ ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ ಮುಂಬೈಗೆ ತೆರಳಿದ್ದರು. ಈ ವೇಳೆ ಅವರು ಕಾಫಿ ಹೀರಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ಲೈಗರ್’ ಚಿತ್ರ ಆಗಸ್ಟ್ 25ರಂದು ತೆರೆಗೆ ಬರುತ್ತಿದೆ. ಹಿಂದಿ, ತೆಲುಗು ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಈಗಾಗಲೇ ಹಾಡಿನ ಮೂಲಕ ಈ ಸಿನಿಮಾ ಸಾಕಷ್ಟು ಹೈಪ್ ಸೃಷ್ಟಿ ಮಾಡಿದೆ.
ವಿಜಯ್ ದೇವರಕೊಂಡ ಅವರು ಇದೇ ಮೊದಲ ಬಾರಿಗೆ ‘ಲೈಗರ್’ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಬಾಲಿವುಡ್ ಎಂಟ್ರಿಗೆ ಅವರಿಗೆ ಭವ್ಯ ಸ್ವಾಗತ ಸಿಗುತ್ತಿದೆ. ಪುರಿ ಜಗನ್ನಾಥ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
‘ಅರ್ಜುನ್ ರೆಡ್ಡಿ’ ಚಿತ್ರದ ಯಶಸ್ಸಿನಿಂದ ವಿಜಯ್ ದೇವರಕೊಂಡ ಅವರಿಗೆ ದೇಶವ್ಯಾಪಿ ಜನಪ್ರಿಯತೆ ಸಿಕ್ಕಿತು. ನಂತರ ಅವರು ನಟಿಸಿದ ‘ಗೀತ ಗೋವಿಂದಂ’ ಚಿತ್ರ ಯಶಸ್ವಿ ಆಯಿತು. ಬಳಿಕ ಅವರ ‘ಡಿಯರ್ ಕಾಮ್ರೇಡ್’ ಸಿನಿಮಾ ಕೂಡ ಹಲವು ಭಾಷೆಗಳಿಗೆ ಡಬ್ ಆಗಿ ತೆರೆಕಂಡಿತಾದರೂ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿರಲಿಲ್ಲ.
ಈಗ ‘ಲೈಗರ್’ ಚಿತ್ರದ ಮೂಲಕ ವಿಜಯ್ ದೇವರಕೊಂಡ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.