ತಪ್ಪು ಮಾಡಿದ ಬಳಿಕ ಜಾನ್ವಿಗೆ ಕಾಡ್ತಿದೆ ಮಗ ಹಾಗೂ ಕುಟುಂಬದ ಭಯ

Updated on: Oct 23, 2025 | 2:24 PM

ಜಾನ್ವಿ ಹಾಗೂ ಅಶ್ವಿನಿ ಗೌಡ ಅವರು ಮಾಡಿದ ತಪ್ಪಿಗೆ ದೊಡ್ಡ ದಂದ ತೆತ್ತುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಸಾಕಷ್ಟು ಹೇಟ್ ಕಮೆಂಟ್​ಗಳು ಬರುತ್ತಿವೆ. ಈ ಸೂಚನೆ ಸಿಕ್ಕಿದ ಬಳಿಕ ಜಾನ್ವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಕಣ್ಣೀರು ಹಾಕಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

1 / 5
ಬಿಗ್ ಬಾಸ್ ಮೂಲಕ ಆ್ಯಂಕರ್ ಜಾನ್ವಿ ಅವರ ಹೆಸರು ಮತ್ತೆ ಚರ್ಚೆಗೆ ಬಂದಿದೆ. ಮೊದಲು ಟಿವಿಯಲ್ಲಿ ಆ್ಯಂಕರ್ ಆಗಿದ್ದ ಅವರು ವಿಚ್ಛೇದನದ ಕಾರಣಕ್ಕೆ ಸುದ್ದಿ ಆದರು. ಆ ಬಳಿಕ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡರು.

2 / 5
ಈಗ ಜಾನ್ವಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಸ್ಪರ್ಧಿ ಆಗಿದ್ದಾರೆ. ಅವರು ತಮ್ಮ ತನವನ್ನು ಸಾಬೀತು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅಶ್ವಿನಿ ಗೌಡ ಅವರ ಪ್ರಭಾವ ಬಹುವಾಗಿ ಅವರ ಮೇಲೆ ಬೀಳುತ್ತಿದೆ. ಈ ಮಧ್ಯೆ ಅವರಿಗೆ ಮನೆಯವರ ಭಯ ಕಾಡುತ್ತಿದೆ.  

3 / 5
ಜಾನ್ವಿ ಅವರು ಕಳೆದ ವಾರ ರಕ್ಷಿತಾ ಶೆಟ್ಟಿ ಮೇಲೆ ಸಾಕಷ್ಟು ದಬ್ಬಾಳಿಕೆ ಮಾಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಜಾನ್ವಿ ಅವರನ್ನು ಅನೇಕರು ಟೀಕೆ ಕೂಡ ಮಾಡಿದರು. ಅವರ ಬಗ್ಗೆ ಹರಿದಾಡಿರಬಹುದಾದ ನೆಗೆಟಿವಿಟಿ ಬಗ್ಗೆ ಹೇಳಿದ್ದರು.

4 / 5
ಇದರಿಂದ ಜಾನ್ವಿ ಸಾಕಷ್ಟು ಕಂಗಾಲಾಗಿದ್ದಾರೆ. ‘ಒಂದೇ ವಾರ ಇದ್ದರೂ ತೊಂದರೆ ಇಲ್ಲ. ಯಾವುದೇ ನೆಗೆಟಿವ್ ವಿಚಾರಕ್ಕೆ ಸುದ್ದಿ ಆಗಬೇಡ ಎಂದು ಮನೆಯಲ್ಲಿ ಹೇಳಿ ಕಳುಹಿಸಿದ್ದಾರೆ’ ಎಂದು ಜಾನ್ವಿ ಹೇಳಿ ಕಣ್ಣೀರು ಹಾಕಿದ್ದಾರೆ. ಮಗ, ತಾಯಿ ಹಾಗೂ ಜಾನ್ವಿ ಸಹೋದರ ಇದೇ ಮಾತನ್ನೇ ಹೇಳಿದ್ದರಂತೆ.

5 / 5
ಜಾನ್ವಿ ಅವರಿಗೆ ದುರಹಂಕಾರ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಹೇಟ್ ಕಮೆಂಟ್​ಗಳು ಬರುತ್ತಿವೆ. ಇದು ಅವರ ಕುಟುಂಬದ ಮೇಲೆ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.