AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

೬ ಎಸೆತಗಳಿಂದ ಭರ್ಜರಿ ದಾಖಲೆ ತಪ್ಪಿಸಿಕೊಂಡ RCB

IPL 2026 DC vs RCB: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 75 ರನ್​ಗಳಿಗೆ ಆಲೌಟ್ ಆಗಿದ್ದರು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6.3 ಓವರ್​ಗಳಲ್ಲಿ ಪಂದ್ಯ ಮುಗಿಸಿದ್ದರು. ಈ ಭರ್ಜರಿ ಚೇಸಿಂಗ್ ಹೊರತಾಗಿಯೂ ಆರ್​ಸಿಬಿ ತಂಡ ಅಮೋಘ ದಾಖಲೆ ಬರೆಯುವ ಅವಕಾಶವನ್ನು ಕೈ ಚೆಲ್ಲಿಕೊಂಡಿದ್ದಾರೆ.

ಝಾಹಿರ್ ಯೂಸುಫ್
|

Updated on: Apr 28, 2026 | 2:52 PM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅಮೋಘ ಗೆಲುವು ದಾಖಲಿಸಿದೆ. ಅದು ಕೂಡ ಕೇವಲ 6.3 ಓವರ್​ಗಳಲ್ಲಿ ಪಂದ್ಯ ಮುಗಿಸುವ ಮೂಲಕ. ಇದಾಗ್ಯೂ ಆರ್​ಸಿಬಿ ತಂಡಕ್ಕೆ ಐಪಿಎಲ್​ನ ಫಾಸ್ಟೆಸ್ಟ್ ಚೇಸಿಂಗ್ ದಾಖಲೆಯನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.

1 / 6
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್​ಸಿಬಿ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿತು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡವು​ 16.3 ಓವರ್​ಗಳಲ್ಲಿ 75 ರನ್​ಗಳಿಸಿ ಆಲೌಟ್ ಆಯಿತು.

2 / 6
ಅದರಂತೆ 76 ರನ್​ಗಳ ಸುಲಭ ಗುರಿ ಬೆನ್ನತ್ತಿದ ಆರ್​ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಜೇಕಬ್ ಬೆಥೆಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಈ ಇಬ್ಬರು ಮೊದಲ ವಿಕೆಟ್​ಗೆ 26 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಇದಾದ ಬಳಿಕ ಬಂದ ವಿರಾಟ್ ಕೊಹ್ಲಿ (20) ಜೊತೆಗೂಡಿದ ದೇವದತ್ ಪಡಿಕ್ಕಲ್ 13 ಎಸೆತಗಳಲ್ಲಿ 34 ರನ್​ ಸಿಡಿಸಿದರು. ಈ ಮೂಲಕ ಆರ್​ಸಿಬಿ ಕೇವಲ 6.3 ಓವರ್​ಗಳಲ್ಲಿ 76 ರನ್ ಬಾರಿಸಿ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

3 / 6
ಇತ್ತ ಆರ್​ಸಿಬಿ ತಂಡವು ಕೇವಲ 39 ಎಸೆತಗಳಲ್ಲಿ ಚೇಸಿಂಗ್ ಮಾಡಿದರೂ ಇದು ಐಪಿಎಲ್​ ಇತಿಹಾಸದ ಅತೀ ವೇಗದ ಚೇಸಿಂಗ್ ಅಲ್ಲ ಎಂಬುದು ವಿಶೇಷ. ಅಂದರೆ ಆರ್​ಸಿಬಿಗಿಂತ ವೇಗವಾಗಿ ಮುಂಬೈ ಇಂಡಿಯನ್ಸ್ ಪಂದ್ಯ ಮುಗಿಸಿ ಇತಿಹಾಸ ನಿರ್ಮಿಸಿದ್ದಾರೆ.

4 / 6
2008 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪ್ರಚಂಡ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 15.2 ಓವರ್​ಗಳಲ್ಲಿ 67 ರನ್​ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಮುಂಬೈ ಇಂಡಿಯನ್ಸ್ ತಂಡವು ಕೇವಲ 5.3 ಓವರ್​ಗಳಲ್ಲಿ ಚೇಸ್ ಮಾಡಿದ್ದರು. ಅಂದರೆ ಕೇವಲ 33 ಎಸೆತಗಳಲ್ಲಿ ಪಂದ್ಯ ಮುಗಿಸಿ ದಾಖಲೆ ಬರೆದಿದ್ದರು.

5 / 6
ಈ ದಾಖಲೆಯನ್ನು ಮುರಿಯುವ ಉತ್ತಮ ಅವಕಾಶ ಆರ್​ಸಿಬಿ ತಂಡದ ಮುಂದಿತ್ತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್​ಗಳು ಹೆಚ್ಚುವರಿ 6 ಎಸೆತಗಳನ್ನು ಎದುರಿಸುವ ಮೂಲಕ 39 ಎಸೆತಗಳಲ್ಲಿ 76 ರನ್ ಬಾರಿಸಿದ್ದಾರೆ. ಈ ಮೂಲಕ ಐಪಿಎಲ್​ನ ಎರಡನೇ ವೇಗದ ಚೇಸಿಂಗ್ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

6 / 6
Follow Us
SIR ಗೆ ಶಿಕ್ಷಕರ ನಿಯೋಜನೆ: ತರಗತಿಗಳು ಸ್ಥಗಿತ, ವಿದ್ಯಾರ್ಥಿಗಳ ಪ್ರತಿಭಟನೆ

ಮೈಸೂರು ದಸರಾದಲ್ಲಿ ಕಂಬಳಕ್ಕೆ ವಿರೋಧಿಸ್ತಿರೋ ಪ್ರತಿಭಟನಾಕಾರರು ಹೇಳಿದ್ದೇನು?

ಸಂಡೂರಿನ ಅಂತಾಪುರದಲ್ಲಿ ವಿಜಯನಗರ ಕಾಲದ ಅಪರೂಪದ ಜೈನ ದಾನಶಾಸನ ಪತ್ತೆ!

ಟೋಯಿಂಗ್ ಬಳಿಕವೂ ಮಾಲೀಕರು ಬರದಿದ್ರೆ ಹರಾಜು ಹಾಕ್ತೇವೆ: ಸಚಿವ ಕೃಷ್ಣಭೈರೇಗೌಡ

ರಾಯಚೂರಿನಲ್ಲಿ 760 ಕೆಜಿಗೂ ಅಧಿಕ ನಂದಿನಿ ಕೆನೆಭರಿತ ಹಾಲಿನ ಪುಡಿ ಪತ್ತೆ

ಚೆನ್ನಮ್ಮ ಆರೋಗ್ಯ ಈಗ ಹೇಗಿದೆ? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ

ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ ಒಟ್ಟು 5-6 ಸೇತುವೆಗಳು ಧ್ವಂಸ

ಸೌದಿ ಅರೇಬಿಯಾದಲ್ಲಿ ಮಂಗಳೂರಿನ ವಿಟ್ಲದ ಯುವಕನ ಸಾಧನೆ!

ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ

ಬಂಟ್ವಾಳ ಕೊಲೆ ಆರೋಪಿ ಬಗ್ಗೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇಸ್