
ನಟಿ ಅನುಪಮಾ ಪರಮೇಶ್ವರನ್.

ಮಲಯಾಳಂ ಮಾತ್ರವಲ್ಲದೆ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲೂ ಅನುಪಮಾ ಗುರುತಿಸಿಕೊಂಡರು. ನಂತರ ಅವರಿಗೆ ಕನ್ನಡದಲ್ಲೂ ನಟಿಸೋಕೆ ಅವಕಾಶ ಸಿಕ್ಕಿತ್ತು.

ಪುನೀತ್ ರಾಜ್ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾ ಮೂಲಕ ಅನುಪಮಾ ಕನ್ನಡಕ್ಕೂ ಕಾಲಿಟ್ಟರು. ಈ ಮೂಲಕ ಕನ್ನಡದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿತ್ತು.

ಸದ್ಯ ಅನುಪಮಾ ತೆಲುಗು ಹಾಗೂ ತಮಿಳಿನಲ್ಲಿ ತಲಾ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೊರೊನಾ ಕಾರಣಕ್ಕೆ ಸಿನಿಮಾ ಕೆಲಸ ನಿಂತಿದೆ.

ಇನ್ನು, ಅನುಪಮಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಅವರ ಸಾಕಷ್ಟು ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅವರು ಈಗ ಕನ್ನಡಕ್ಕೆ ಮರಳೋದು ಯಾವಾಗ ಎನ್ನುವ ಪ್ರಶ್ನೆ ಮೂಡಿದೆ.

ಅನುಪಮಾ ಪರಮೇಶ್ವರನ್
Published On - 5:00 pm, Mon, 26 April 21