
ನಟಿ ಮತ್ತು ಕನ್ನಡದ ಬಲು ಜನಪ್ರಿಯ ಕಾರ್ಯಕ್ರಮ ನಿರೂಪಕಿ ಅನುಶ್ರೀ ಇಂದು (ಆಗಸ್ಟ್ 28) ವಿವಾಹವಾಗಿದ್ದಾರೆ.

ಅನುಶ್ರೀ ಅವರು ತಮ್ಮ ಬಹು ವರ್ಷದ ಗೆಳೆಯ ರೋಷನ್ ಅವರೊಟ್ಟಿಗೆ ಮದುವೆ ಆಗಿದ್ದಾರೆ. ವಿವಾಹ ಸಮಾರಂಭ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ.

ಎಲ್ಲರಿಗೂ ಗೊತ್ತಿರುವಂತೆ ಅನುಶ್ರೀ, ನಟ ಪುನೀತ್ ರಾಜ್ಕುಮಾರ್ ಅವರ ಬಲು ದೊಡ್ಡ ಅಭಿಮಾನಿ. ಅವರು ಏನೇ ಶುಭ ಕಾರ್ಯ ಮಾಡಿದರೂ ಅಪ್ಪು ಅನ್ನು ನೆನೆಯುತ್ತಿದ್ದರು.

ಇದೀಗ ಮದುವೆ ಸಮಾರಂಭದಲ್ಲೂ ಸಹ ಪುನೀತ್ ರಾಜ್ಕುಮಾರ್ ಅವರನ್ನು ಮರೆಯದೇ ನೆನಪು ಮಾಡಿಕೊಂಡಿದ್ದಾರೆ ನಟಿ ಅನುಶ್ರೀ.

ಅನುಶ್ರೀ ಹಾಗೂ ರೋಷನ್ ವಿವಾಹವಾಗುತ್ತಿರುವ ಹಾಲ್ನಲ್ಲಿ ಪುನೀತ್ ರಾಜ್ಕುಮಾರ್ ಅವರ ಚಿತ್ರವನ್ನು ಇರಿಸಿ ಆ ಚಿತ್ರವನ್ನು ಹೂವುಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗಿದೆ.

ಅನುಶ್ರೀ ಹಾಗೂ ರೋಷನ್ ವಿವಾಹದ ಬಳಿಕ ಅಪ್ಪು ಅವರ ಚಿತ್ರದ ಮುಂದೆ ನಿಂತು ಕೈ ಮುಗಿದು ಆಶೀರ್ವಾದವನ್ನೂ ಸಹ ಪಡೆದಿದ್ದಾರೆ ಎನ್ನಲಾಗಿದೆ.