Apple Phones: ಆ್ಯಪಲ್ ಫೋನ್ ಫ್ಯಾಕ್ಟರಿಗಾಗಿ ಬೆಂಗಳೂರಿನಲ್ಲಿ 303 ಕೋಟಿ ರೂ.ಗೆ ಭೂಮಿ ಖರೀದಿಸಿದ ಫಾಕ್ಸ್‌ಕಾನ್
ಆ್ಯಪಲ್ ಕಂಪನಿಯು ವ್ಯವಹಾರವನ್ನು ಮತ್ತಷ್ಟು ವಿಸ್ತರಿಸುತ್ತಿದ್ದು, ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದೆ. ಟೈಗಾ ದೇಶದ ಇನ್ನೊಂದು ನಗರದಲ್ಲಿ ಐಫೋನ್ ತಯಾರಿಕಾ ಕಾರ್ಖಾನೆಯನ್ನು ಸ್ಥಾಪಿಸುತ್ತಿದೆ. ಆ್ಯಪಲ್ ಇಂಕ್ ಪಾಲುದಾರ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಬೆಂಗಳೂರು ವಿಮಾನ ನಿಲ್ದಾಣದ ಬಳಿ ದೇವನಹಳ್ಳಿಯಲ್ಲಿ 303 ಕೋಟಿ ರೂ.ಗೆ ಭೂಮಿ ಖರೀದಿ ಮಾಡಿದೆ.
Updated on: May 12, 2023 | 10:01 PM

ಆ್ಯಪಲ್ ಇಂಕ್ ಪಾಲುದಾರರಾದ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಬೆಂಗಳೂರು ವಿಮಾನ ನಿಲ್ದಾಣದ ಬಳಿಯ ದೇವನಹಳ್ಳಿ ಪ್ರದೇಶದಲ್ಲಿ 13 ಮಿಲಿಯನ್ ಚದರ ಅಡಿ (1.2 ಮಿಲಿಯನ್ ಚದರ ಮೀಟರ್) ಭೂಮಿಯನ್ನು ಖರೀದಿಸಿದೆ.

ವರದಿಗಳ ಪ್ರಕಾರ, ಭೂಮಿ ಖರೀದಿಸಿರುವ ಬಗ್ಗೆ ಫಾಕ್ಸ್‌ಕಾನ್‌ನ ಅಂಗಸಂಸ್ಥೆ ಹಾನ್ ಹೈ ಟೆಕ್ನಾಲಜಿ ಇಂಡಿಯಾ ಮೆಗಾ ಡೆವಲಪ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ (ಎಲ್‌ಎಸ್‌ಇ) ಗೆ ಮಾಹಿತಿ ನೀಡಿದೆ.

ಕಂಪನಿಯು ಬೆಂಗಳೂರಿನಲ್ಲಿ ಈ ಭೂಮಿಯನ್ನು 37 ಮಿಲಿಯನ್ ಡಾಲರ್ ಅಂದರೆ 303 ಕೋಟಿ ರೂ.ಗೆ ಖರೀದಿಸಿದೆ. ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಈ ಭೂಮಿಯಲ್ಲಿ ಉತ್ಪಾದನಾ ಘಟಕವನ್ನು ನಿರ್ಮಿಸಲಿದೆ. ಕಂಪನಿಯು ಈ ಸ್ಥಾವರದಲ್ಲಿ ಆ್ಯಪಲ್ ಹ್ಯಾಂಡ್‌ಸೆಟ್‌ಗಳನ್ನು ಜೋಡಿಸಲಿದೆ.

ಫಾಕ್ಸ್‌ಕಾನ್ ತನ್ನ ಹೊಸ ಎಲೆಕ್ಟ್ರಿಕ್ ವಾಹನ ವ್ಯಾಪಾರಕ್ಕಾಗಿ ಬಿಡಿ ಭಾಗಗಳನ್ನು ತಯಾರಿಸಲು ಕೂಡ ಈ ಸೈಟ್ ಅನ್ನು ಬಳಸಬಹುದು.

ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಭಾರತದಲ್ಲಿ ಹೊಸ ಪ್ಲಾಂಟ್‌ನಲ್ಲಿ ಸುಮಾರು 700 ಮಿಲಿಯನ್ ಡಾಲರ್ (ಸುಮಾರು 5.7 ಸಾವಿರ ಕೋಟಿ ರೂ.) ಹೂಡಿಕೆ ಮಾಡಲು ಯೋಜಿಸಿದೆ ಎಂದು ಬ್ಲೂಮ್‌ಬರ್ಗ್ ವರದಿಯು ಈ ಹಿಂದೆ ತಿಳಿಸಿತ್ತು.




