
ಅರ್ಜುನ್ ಸರ್ಜಾ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದೆ. ಸರ್ಜಾರ ಪುತ್ರಿ ಐಶ್ವರ್ಯಾ ಮದುವೆ ನಡೆಯಲಿದೆ.

ಐಶ್ವರ್ಯಾ ಸರ್ಜಾ ಅವರು ತಮಿಳು ನಟ ಉಮಾಪತಿ ರಾಮಯ್ಯ ಅವರೊಟ್ಟಿಗೆ ವಿವಾಹವಾಗಲಿದ್ದಾರೆ ಇದೇ ಜೂನ್ 10ಕ್ಕೆ.

ಐಶ್ವರ್ಯಾ ಸರ್ಜಾ ಮನೆಯಲ್ಲಿ ಮದುವೆ ಸಂಭ್ರಮ ಜೋರಿದ್ದು ಹಳದಿ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ. ಕುಟುಂಬ ಸದಸ್ಯರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ಹಳದಿ ಶಾಸ್ತ್ರದ ಹಾಗೂ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಐಶ್ವರ್ಯ ಸರ್ಜಾ ಮೆಹಂದಿ ಹಾಕಿಸಿಕೊಂಡು ಸಂಭ್ರಮಿಸಿದ್ದಾರೆ.

ಐಶ್ವರ್ಯಾ ಸರ್ಜಾ ಹಾಗೂ ಉಮಾಪತಿ ಪರಸ್ಪರ ಪ್ರೀತಿಸಿ ವಿವಾಹವಾಗುತ್ತಿದ್ದಾರೆ. ಉಮಾಪತಿ ರಾಮಯ್ಯ, ತಮಿಳಿನ ಹಿರಿಯ ನಟ ತಂಬಿ ರಾಮಯ್ಯ ಅವರ ಪುತ್ರ.

ಜೂನ್ 10 ಕ್ಕೆ ಚೆನ್ನೈ ನಲ್ಲಿರುವ ಅರ್ಜುನ್ ಸರ್ಜಾ ಅವರೇ ಕಟ್ಟಿಸಿರುವ ಆಂಜನೇಯ ದೇವಸ್ಥಾನದಲ್ಲಿ ಇವರಿಬ್ಬರ ವಿವಾಹ ನಡೆಯಲಿದೆ.

ಜೂನ್ 14ರಂದು ಚೆನ್ನೈನ ಲೀಲಾ ಪ್ಯಾಲೇಸ್ ನಲ್ಲಿ ನವ ಜೋಡಿಯ ಆರತಕ್ಷತೆ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಲವು ಸಿನಿಮಾ ತಾರೆಯರು ಭಾಗಿಯಾಗಲಿದ್ದಾರೆ.