
ಸಂಖ್ಯಾಶಾಸ್ತ್ರದ ಮೂಲಕ ಫೇಮಸ್ ಆಗಿದ್ದ ಆರ್ಯವರ್ಧನ್ ಗುರೂಜಿ ಈಗ ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಅವರ ಹೊಸ ಅವತಾರ ನೋಡಿ ಪ್ರೇಕ್ಷಕರು ಅಚ್ಚರಿಪಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಪ್ರತಿ ಸೀಸನ್ನಲ್ಲೂ ಕೆಲವು ಸ್ಪರ್ಧಿಗಳ ಇಮೇಜ್ ಬದಲಾಗುತ್ತದೆ. ಈ ಬಾರಿ ಆರಂಭದಲ್ಲೇ ಆರ್ಯವರ್ಧನ್ ಗುರೂಜಿ ಗೆಟಪ್ ಚೇಂಜ್ ಆಗಿದೆ.

ತಲೆ ಬೋಳಿಸಿಕೊಂಡು, ಗಡ್ಡ-ಮೀಸೆ ಕ್ಲೀನ್ ಶೇವ್ ಮಾಡಿಕೊಂಡು ಸಂಪೂರ್ಣ ಬದಲಾದ ಲುಕ್ನಲ್ಲಿ ಆರ್ಯವರ್ಧನ್ ಗುರೂಜಿ ಕಾಣಿಸಿಕೊಂಡಿದ್ದಾರೆ. ಎಲ್ಲ ಸ್ಪರ್ಧಿಗಳ ಜೊತೆ ಅವರು ಮಿಂಗಲ್ ಆಗುತ್ತಿದ್ದಾರೆ.

ಇಷ್ಟು ದಿನ ಜನರ ಕಣ್ಣಿಗೆ ಕಾಣಿಸಿದ್ದ ಗುರೂಜಿಯೇ ಬೇರೆ, ಈಗ ಬಿಗ್ ಬಾಸ್ ಮನೆಯಲ್ಲಿ ಅವರ ಅವತಾರವೇ ಬೇರೆ. ಅವರ ಹೊಸ ಗೆಟಪ್ ಹೀಗಿದೆ.

‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋ 6 ವಾರಗಳ ಕಾಲ ನಡೆಯಲಿದೆ. ಅದಾದ ಬಳಿಕ ಟಿವಿಯಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಶುರುವಾಗಲಿದೆ. ಅದರಲ್ಲಿ ಯಾರಿಗೆಲ್ಲ ಅವಕಾಶ ಸಿಗಬಹುದು ಎಂಬ ಕೌತುಕ ಇದೆ.