Kannada News Photo gallery Asha Bhat Varun Aradhya And many more Bigg Boss Kannada Season 11 Contestant tentative list Bigg boss Kannada News
ಈ ಬಾರಿ ‘ಕನ್ನಡ ಬಿಗ್ ಬಾಸ್’ಗೆ ಎಂಟ್ರಿ ಕೊಡೋರು ಇವರೇನಾ? ಇಲ್ಲಿದೆ ಸಂಭಾವ್ಯ ಪಟ್ಟಿ
‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಇರುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈಗಾಗಲೇ ಆಯ್ಕೆ ಪ್ರತಿಕ್ರಿಯೆ ನಡೆದಿದೆ ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರ ಹೆಸರು ಹರಿದಾಡಿದೆ.
1 / 15
ಈ ಬಾರಿ ಬಿಗ್ ಬಾಸ್ಗೆ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುತ್ತಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ‘ಬಿಗ್ ಬಾಸ್’ ಆರಂಭ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
2 / 15
ಈಗಾಗಲೇ ಪ್ರೋಮೋಶೂಟ್ ಪೂರ್ಣಗೊಂಡಿದೆ. ಇದರ ಪ್ರಸಾರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಬಗ್ಗೆ ಇಲ್ಲಿದೆ ವಿವರ.
3 / 15
ಗಾಯಕಿ ಆಶಾ ಭಟ್ ಅವರು ‘ಬಿಗ್ ಬಾಸ್’ಗೆ ಕಾಲಿಡುತ್ತಾರೆ ಎಂದು ವರದಿ ಆಗಿದೆ. ಅವರು ಜೀ ಕನ್ನಡ ರಿಯಾಲಿಟಿ ಶೋನಲ್ಲಿ ಗಮನ ಸೆಳೆದಿದ್ದರು.
4 / 15
ಮೋಕ್ಷಿತಾ ಪೈ ‘ಪಾರು’ ಧಾರಾವಾಹಿ ಮೂಲಕ ಗಮನ ಸೆಳೆದಿದ್ದಾರೆ. ಅವರು ಕೂಡ ಈ ಬಾರಿ ಬಿಗ್ ಬಾಸ್ನಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.
5 / 15
ಕಿರುತೆರೆಯ ಮೂಲಕ ಸುಕೃತಾ ನಾಗ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಸಿಕ್ಕಿದೆ. ಅವರು ದೊಡ್ಡಮನೆಗೆ ತೆರಳಲಿದ್ದಾರೆ.
6 / 15
‘ಅಂತರಪಟ’ ಧಾರಾವಾಹಿ ಮೂಲಕ ಫೇಮಸ್ ಆದವರು ತನ್ವಿ ಬಾಲರಾಜ್ ಅವರು. ಅವರು ಈ ಬಾರಿ ಬಿಗ್ ಬಾಸ್ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ.
7 / 15
ಯೂಟ್ಯೂಬರ್ ವರ್ಷಾ ಕಾವೇರಿ ಕೂಡ ಬಿಗ್ ಬಾಸ್ಗೆ ಬರೋ ನಿರೀಕ್ಷೆ ಇದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿದೆ.
8 / 15
ನಟ, ನಿರ್ದೇಶಕ ಎಸ್. ನಾರಾಯಣ್ ಮಗ ಪಂಕಜ್ ನಾರಾಯಣ್ ಕೂಡ ಬಿಗ್ ಬಾಸ್ಗೆ ಬರೋ ಸಾಧ್ಯತೆ ಇದೆಯಂತೆ. ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
9 / 15
‘ಸತ್ಯ’ ಧಾರಾವಾಹಿಯಲ್ಲಿ ಸಖತ್ ರಗಡ್ ಪಾತ್ರ ಮಾಡಿ ಗೌತಮಿ ಜಾಧವ್ ಗಮನ ಸೆಳೆದಿದ್ದರು. ಅವರು ಕೂಡ ಬಿಗ್ ಬಾಸ್ನ ಭಾಗವಾಗಲಿದ್ದಾರಂತೆ.
10 / 15
‘ಗೀತಾ’ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡಿ ಗಮನ ಸೆಳೆದವರು ಶರ್ಮಿತಾ ಗೌಡ. ಅವರು ಈ ಬಾರಿಯ ಬಿಗ್ ಬಾಸ್ ಆಫರ್ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
11 / 15
‘ಗಿಚ್ಚಿ ಗಿಲಿಗಿಲಿ’ ಹಾಸ್ಯ ಶೋಗಳ ಮೂಲಕ ಗಮನ ಸೆಳೆದವರು ರಾಘವೇಂದ್ರ ಗೌಡ. ಅವರು ಈ ಬಾರಿ ದೊಡ್ಮನೆಗೆ ಒಳಗೆ ಪ್ರವೇಶ ಪಡೆಯಲಿದ್ದಾರಂತೆ.
12 / 15
ಇನ್ಸ್ಟಾಗ್ರಾಮ್ ಮೂಲಕ ಫೇಮಸ್ ಆದ ವರುಣ್ ಆರಾಧ್ಯಾ ಅವರು ನಂತರ ‘ಬೃಂದಾವನ’ ಧಾರಾವಾಹಿಯಲ್ಲಿ ನಟಿಸಿದರು. ಅವರು ಈ ರಿಯಾಲಿಟಿ ಶೋನಲ್ಲಿ ಮನರಂಜನೆ ನೀಡೋ ಸಾಧ್ಯತೆ ಇದೆ.
13 / 15
ಅಮಿತಾ ಸದಾಶಿವ ಅವರು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗೂ ಬಿಗ್ ಬಾಸ್ ಆಫರ್ ಹೋಗಿದೆಯಂತೆ.
14 / 15
ಚಂದ್ರಪ್ರಭಾ ಅವರು ಹಾಸ್ಯದ ಮೂಲಕ ಗಮನ ಸೆಳೆದವರು. ಅವರು ‘ಗಿಚ್ಚಿ ಗಿಲಿ ಗಿಲಿ 2’ ಗೆದ್ದಿದ್ದರು. ಅವರು ಈಗ ಬಿಗ್ ಬಾಸ್ ರಿಯಾಲಿಟಿ ಶೋಗೆ ಅವಕಾಶ ಪಡೆಯುತ್ತಿದ್ದಾರೆ.
15 / 15
‘ಪದ್ಮಾವತಿ’ ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆದವರು ತ್ರಿವಿಕ್ರಮ್. ಅವರಿಗೆ ಬಿಗ್ ಬಾಸ್ ಆಫರ್ ಹೋಗಿದೆ.
Published On - 10:59 am, Sat, 24 August 24