Asian Kabaddi Championship 2023: ಮೊದಲ ದಿನವೇ 2 ಪಂದ್ಯ ಗೆದ್ದ ಭಾರತ! ಇಂದು ಜಪಾನ್ ಎದುರಾಳಿ

Updated on: Jun 28, 2023 | 10:50 AM

Asian Kabaddi Championship 2023: ಸೌತ್ ಕೊರಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ 2023 ರಲ್ಲಿ ಭಾರತ ಕಬ್ಬಡಿ ತಂಡ ಮೊದಲ ದಿನವೇ ಎರಡು ಪಂದ್ಯಗಳ ಭರ್ಜರಿ ಜಯದೊಂದಿಗೆ ಚಾಂಪಿಯನ್‌ಶಿಪ್​ನಲ್ಲಿ ಶುಭಾರಂಭ ಮಾಡಿದೆ.

1 / 5
ಸೌತ್ ಕೊರಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ 2023 ರಲ್ಲಿ ಭಾರತ ಕಬಡ್ಡಿ ತಂಡ ಮೊದಲ ದಿನವೇ ಎರಡು ಪಂದ್ಯಗಳ ಭರ್ಜರಿ ಜಯದೊಂದಿಗೆ ಚಾಂಪಿಯನ್‌ಶಿಪ್​ನಲ್ಲಿ ಶುಭಾರಂಭ ಮಾಡಿದೆ. ಜೂನ್ 27 ರಿಂದ ಆರಂಭವಾಗಿರುವ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್​ ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಗಳಿಸುವ ತಂಡಗಳು ಜೂನ್ 30 ರಂದು ಫೈನಲ್ ಪಂದ್ಯವನ್ನು ಆಡಲಿವೆ.

ಸೌತ್ ಕೊರಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ 2023 ರಲ್ಲಿ ಭಾರತ ಕಬಡ್ಡಿ ತಂಡ ಮೊದಲ ದಿನವೇ ಎರಡು ಪಂದ್ಯಗಳ ಭರ್ಜರಿ ಜಯದೊಂದಿಗೆ ಚಾಂಪಿಯನ್‌ಶಿಪ್​ನಲ್ಲಿ ಶುಭಾರಂಭ ಮಾಡಿದೆ. ಜೂನ್ 27 ರಿಂದ ಆರಂಭವಾಗಿರುವ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್​ ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಗಳಿಸುವ ತಂಡಗಳು ಜೂನ್ 30 ರಂದು ಫೈನಲ್ ಪಂದ್ಯವನ್ನು ಆಡಲಿವೆ.

2 / 5

ಜೂನ್ 27 ರಂದು ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಕೊರಿಯಾ ತಂಡವನ್ನು ಎದುರಿಸಿದ ಪವನ್ ಸೆಹ್ರಾವತ್ ನೇತೃತ್ವದ ಭಾರತದ ಕಬಡ್ಡಿ ತಂಡ 76-13 ಅಂತರದ ಭರ್ಜರಿ ಗೆಲುವು ದಾಖಲಿಸಿತು. ಭಾರತ ತಂಡ ಕೊರಿಯಾವನ್ನು ಬರೋಬ್ಬರಿ ಏಳು ಬಾರಿ ಆಲ್ ಔಟ್ ಮಾಡುವಲ್ಲಿ ಯಶಸ್ವಿಯಾಯಿತು. ಈ ಬಲಿಷ್ಠ ಭಾರತದ ತಂಡದ ಮುಂದೆ ಕೊರಿಯಾ ತಂಡಕ್ಕೆ ನಿಲ್ಲಲು ಸಾಧ್ಯವಾಗಲಿಲ್ಲ. ಪಂದ್ಯದುದ್ದಕ್ಕೂ ಕೊರಿಯಾ ತಂಡದಿಂದ ಟೀಂ ಇಂಡಿಯಾಗೆ ಯಾವುದೇ ಸವಾಲು ಎದುರಾಗಲಿಲ್ಲ.

3 / 5

ಇನ್ನು ಜೂನ್ 27 ರಂದೇ ತನ್ನ ಎರಡನೇ ಪಂದ್ಯವನ್ನಾಡಿದ ಭಾರತ, ತನ್ನ 2ನೇ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು 53-20 ಅಂತರದಿಂದ ಸೋಲಿಸಿತು. ಮೊದಲ 10 ನಿಮಿಷಗಳ ಆಟದಲ್ಲಿ ಚೈನೀಸ್ ತೈಪೆ ತಂಡ ಅದ್ಭುತ ಹೋರಾಟ ನೀಡಿತು. ಹೀಗಾಗಿ ಪವನ್ ಸೆಹ್ರಾವತ್ ಮತ್ತು ನವೀನ್ ಕುಮಾರ್ ಅವರಂತಹ ರೈಡರ್‌ಗಳು ಆರಂಭದಲ್ಲಿ ಅಂಕಗಳನ್ನು ಗಳಿಸಲು ಹೆಚ್ಚಿನ ಅವಕಾಶಗಳನ್ನು ಪಡೆಯಲಿಲ್ಲ. ಆದರೆ ಆ ಬಳಿಕ ಭಾರತದ ಆಕ್ರಮಣಕಾರಿ ಆಡದ ಮುಂದೆ ಚೈನೀಸ್ ತೈಪೆ ಮಂಡಿಯೂರಬೇಕಾಯಿತು.

4 / 5

ಈ ಮೂಲಕ ಆಡಿದ ಮೊದಲ ಎರಡು ಪಂದ್ಯಗಳಲ್ಲೇ ಎದುರಾಳಿ ತಂಡವನ್ನು ಹೀನಾಯವಾಗಿ ಸೋಲಿಸುವ ಮೂಲಕ ಚಾಂಪಿಯನ್‌ಶಿಪ್​ನಲ್ಲಿ ಭರ್ಜರಿ ಆರಂಭ ಪಡೆದುಕೊಂಡಿದೆ. ಇದೀಗ ಭಾರತ ತನ್ನ ಮೂರನೇ ಪಂದ್ಯದಲ್ಲಿ ಜಪಾನ್ ತಂಡವನ್ನು ಜೂನ್ 28 ರಂದು ಅಂದರೆ ಇಂದು ಎದುರಿಸಲಿದೆ. ಈ ಉಭಯ ತಂಡಗಳ ನಡುವಿನ ಪಂದ್ಯ ಬೆಳಿಗ್ಗೆ 11:30 ಕ್ಕೆ ಆರಂಭವಾಗಲಿದೆ.

5 / 5

ಭಾರತ ಕಬಡ್ಡಿ ತಂಡ: ಅರ್ಜುನ್ ದೇಶ್ವಾಲ್, ನವೀನ್ ಕುಮಾರ್, ಸಚಿನ್, ಅಸ್ಲಾಂ ಇನ್ಮಾದಾರ್, ಮೋಹಿತ್ ಗೋಯತ್, ಸುನಿಲ್ ಕುಮಾರ್, ಪರ್ವೇಶ್ ಭೈನ್ಸ್ವಾಲ್, ನಿತಿನ್ ರಾವಲ್, ನಿತೇಶ್ ಕುಮಾರ್, ಸುರ್ಜೀತ್ ಸಿಂಗ್, ವಿಶಾಲ್ ಭಾರದ್ವಾಜ್, ಪವನ್ ಸೆಹ್ರಾವತ್ ಸ್ಟ್ಯಾಂಡ್ ಬೈ ಆಟಗಾರರು: ವಿಜಯ್ ಮಲಿಕ್, ಶುಭಂ ಶಿಂಧೆ

Published On - 10:44 am, Wed, 28 June 23

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us