ಶ್ರೀನಗರದಲ್ಲಿದೆ ಏಷ್ಯಾದ ಅತಿ ದೊಡ್ಡ ಟ್ಯೂಲಿಪ್ ಉದ್ಯಾನವನ: ವಸಂತಕಾಲದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿವೆ ಟ್ಯೂಲಿಪ್ ಹೂಗಳು
ಶ್ರೀನಗರದ ದಾಲ್ ಸರೋವರ ಮತ್ತು ಜಬರ್ವಾನ್ ಬೆಟ್ಟಗಳ ನಡುವೆ ಇದೆ ಏಷ್ಯಾದ ಅತಿದೊಡ್ಡ ಇಂದಿರಾ ಗಾಂಧಿ ಟ್ಯೂಲಿಪ್ ಉದ್ಯಾನವನ. ಮಾರ್ಚ್ 19 ಉದ್ಯಾನವನದಲ್ಲಿ ಪುಷ್ಪ ಪ್ರದರ್ಶನ ಆರಂಭವಾಗಲಿದೆ.
Updated on: Mar 19, 2023 | 6:00 AM

ಶ್ರೀನಗರದ ದಾಲ್ ಸರೋವರ ಮತ್ತು ಜಬರ್ವಾನ್ ಬೆಟ್ಟಗಳ ನಡುವೆ ಇದೆ ಏಷ್ಯಾದ ಅತಿದೊಡ್ಡ ಇಂದಿರಾ ಗಾಂಧಿ ಟ್ಯೂಲಿಪ್ ಉದ್ಯಾನವನ. ಮಾರ್ಚ್ 19 ಉದ್ಯಾನವನದಲ್ಲಿ ಪುಷ್ಪ ಪ್ರದರ್ಶನ ಆರಂಭವಾಗಲಿದೆ.

ಟ್ಯೂಲಿಪ್ ಉದ್ಯಾನವನವು ದಾಲ್ ಸರೋವರದ ದಂಡದಲ್ಲಿ 30 ಹೆಕ್ಟೇರ್ ಪ್ರದೇಶದಲ್ಲಿದೆ. ಈ ಉದ್ಯಾನವನದಲ್ಲಿ 16 ಲಕ್ಷ ವಿವಿಧ ಪ್ರಭೇದಗಳು, ಬಣ್ಣಗಳು ಮತ್ತು ಪರಿಮಳಗಳಿಂದ ಕೂಡಿದ ಹೂವುಗಳಿವೆ.

ಈ ವರ್ಷ ಉದ್ಯಾನದಲ್ಲಿ ನಾಲ್ಕು ಹೊಸ ತಳಿಗಳು ಸೇರಿದಂತೆ 68 ತಳಿಗಳ 16 ಲಕ್ಷ ಟ್ಯೂಲಿಪ್ ಹಗಳಿವೆ ಎಂದು ಉದ್ಯಾನದ ಉಸ್ತುವಾರಿ ಇನಾಮ್-ಉಲ್-ರೆಹಮಾನ್ ಹೇಳಿದ್ದಾರೆ. ಉದ್ಯಾನವನ್ನು 100 ಕ್ಕೂ ಹೆಚ್ಚು ತೋಟಗಾರರು ಒಂದು ತಿಂಗಳ ಕಾಲ ಸಿದ್ಧಪಡಿಸಲು ಶ್ರಮಿಸುತ್ತಿದ್ದಾರೆ.

ಉದ್ಯಾನವು ಒಂದು ತಿಂಗಳವರೆಗೆ ತೆರೆದಿರುತ್ತದೆ ಮತ್ತು ಪ್ರವಾಸಿಗರಿಗೆ ವಿಭಿನ್ನವಾದ ಹೂಗಳು ನೋಡಲು ಸಿಗುತ್ತವೆ ಎಂದು ಟ್ಯೂಲಿಪ್ ಗಾರ್ಡನ್ ಮುಖ್ಯಸ್ಥ ಮೊಹಮ್ಮದ್ ಯೂಸುಫ್ ಹೇಳಿದ್ದಾರೆ.

ಟ್ಯೂಲಿಪ್ ಹೂಗಳು ಕಡಿಮೆ ತಾಪಮಾನದಲ್ಲಿ ಮಾತ್ರ ಅರಳುತ್ತವೆ. ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದರೆ ಬದುಕುವುದಿಲ್ಲ.

2020 ರಲ್ಲಿ, ದಾಖಲೆಯ 3.60 ಲಕ್ಷ ಪ್ರವಾಸಿಗರು ಉದ್ಯಾನಕ್ಕೆ ಭೇಟಿ ನೀಡಿದ್ದರು. ನೆದರ್ಲೆಂಡ್ಸ್‌ನ ಐಕಾನಿಕ್ ಕ್ಯುಕೆನ್‌ಹಾಫ್ ಹೂವಿನ ಉದ್ಯಾನವನ್ನು ಪ್ರವಾಸಿಗರು ವಿಶ್ವದ ಅತಿದೊಡ್ಡ ಟ್ಯೂಲಿಪ್ ಉದ್ಯಾನ ಎಂದು ಕರೆಯುತ್ತಾರೆ.

2007 ರಲ್ಲಿ ಆಗಿನ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರು ಟ್ಯೂಲಿಪ್ ಉದ್ಯಾನವನ್ನು ಉದ್ಘಾಟಿಸಿದರು.



















