- Kannada News Photo gallery Ayodhya Ram Mandir Pran Pratishtha Ceremony Narendra Modi attends the historic ceremony
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭ; ಇದು ಭಾವನಾತ್ಮಕ ಕ್ಷಣ ಎಂದ ಮೋದಿ
ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯ ಇಂದು (ಸೋಮವಾರ) ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿ ವಿಧಿ ವಿಧಾನಗಳನ್ನು ನಿರ್ವಹಿಸಿದ್ದಾರೆ. ರಾಮಮಂದಿರಕ್ಕೆ ಮೋದಿ ಪ್ರವೇಶದಿಂದ ಹಿಡಿದು ರಾಮಲಲ್ಲಾ ಪ್ರತಿಷ್ಠಾಪನೆವರೆಗೆ ನಡೆದ ಕಾರ್ಯಕ್ರಮಗಳ ಝಲಕ್ ಇಲ್ಲಿದೆ
Updated on:Jan 22, 2024 | 4:35 PM

ಅಯೋಧ್ಯೆಯಲ್ಲಿ ಅದ್ಧೂರಿ ಆಚರಣೆಗಳ ನಡುವೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮ ಮಂದಿರಕ್ಕೆ ಆಗಮಿಸಿದರು.

ಕ್ರೀಮ್ ಕಲರ್ ಧೋತಿ ಮತ್ತು ಚಿನ್ನದ ಬಣ್ಣದ ಕುರ್ತಾ ಧರಿಸಿ, ಮಡಿಸಿದ ಕೆಂಪು ದುಪಟ್ಟಾದಲ್ಲಿ ಬೆಳ್ಳಿಯ ಛತ್ರಿಯನ್ನು ಹಿಡಿದು ದೇವಾಲಯದ ಗರ್ಭಗುಡಿಗೆ ಮೋದಿ ಬಂದಿದ್ದಾರೆ

ರಾಮಮಂದಿರದೊಳಗೆ ಬಂದ ಪ್ರಧಾನಮಂತ್ರಿ ಅವರು ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ 'ಸಂಕಲ್ಪ' ತೆಗೆದುಕೊಂಡರು.

ನರೇಂದ್ರ ಮೋದಿ ಅವರು ಸಮಾರಂಭಕ್ಕಾಗಿ ಪೂಜೆ ಸಾಮಾಗ್ರಿಗಳನ್ನು ಹೊತ್ತು ರಾಮಮಂದಿರ ಆವರಣವನ್ನು ಪ್ರವೇಶಿಸಿದರು.

ಮೋದಿ ಅವರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿಗಳಲ್ಲಿ ಭಾಗಿಯಾಗಿದ್ದಾರೆ.

ಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದಿದ್ದು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಉಪಸ್ಥಿತರಿದ್ದರು.

ಮೋದಿ ಅವರು ಈ ಕಾರ್ಯಕ್ರಮದ ನಂತರ ಕುಬೇರ ತಿಲಕ್ಕೂ ಭೇಟಿ ನೀಡಲಿದ್ದಾರೆ. ಅವರು ದೇವಾಲಯದ ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಮಿಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮಲಲ್ಲಾ ಮೂರ್ತಿಯನ್ನು ಅನಾವರಣಗೊಳಿಸಿದರು

ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಅಸಾಧಾರಣ ಮತ್ತು ಭಾವನಾತ್ಮಕ ಕ್ಷಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Published On - 1:05 pm, Mon, 22 January 24



