
ಆಮಿರ್ ಖಾನ್ ನಟನೆಯ ‘ಲಗಾನ್’ ಸಿನಿಮಾ ಪ್ರೇಕ್ಷಕರ ಪಾಲಿಗೆ ಆಲ್ಟೈಮ್ ಫೇವರಿಟ್ ಆಗಿದೆ. ಕ್ರಿಕೆಟ್ ಆಟದ ಮೂಲಕ ಬ್ರಿಟಿಷರನ್ನು ಮಣಿಸುವ ಹಳ್ಳಿ ಮಂದಿಯ ಕಥೆ ಈ ಚಿತ್ರದಲ್ಲಿದೆ.

‘ರಂಗ್ ದೇ ಬಸಂತಿ’ ಚಿತ್ರದಲ್ಲಿ ಯುವಕರಿಗೆ ಉತ್ತಮ ಸಂದೇಶ ನೀಡಲಾಗಿದೆ. ಸ್ವಾತಂತ್ ಭಾರತದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಈ ಸಿನಿಮಾ ವಿವರಿಸುತ್ತದೆ.

‘ಕೇಸರಿ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ಭಾರತದ ವೀರ ಯೋಧರ ಕಥೆ ಈ ಚಿತ್ರದಲ್ಲಿದೆ.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಂಗಲ್ ಪಾಂಡೆಯ ತ್ಯಾಗವನ್ನು ಮರೆಯುವಂತಿಲ್ಲ. ಅವರ ಜೀವನದ ಕಥೆಯನ್ನು ಆಧರಿಸಿ ತಯಾರಾದ ‘ಮಂಗಲ್ ಪಾಂಡೆ’ ಚಿತ್ರದಲ್ಲಿ ಆಮೀರ್ ಖಾನ್ ಮುಖ್ಯ ಪಾತ್ರ ಮಾಡಿದ್ದಾರೆ.

‘ದಿ ಲೆಜೆಂಡ್ ಆಫ್ ಭಗತ್ ಸಿಂಗ್’ ಸಿನಿಮಾದಲ್ಲಿ ಅಜಯ್ ದೇವಗನ್ ನಟಿಸಿದ್ದಾರೆ. 2002ರಲ್ಲಿ ತೆರೆಕಂಡ ಈ ಚಿತ್ರಕ್ಕೆ ರಾಜ್ಕುಮಾರ್ ಸಂತೋಷಿ ನಿರ್ದೇಶನ ಮಾಡಿದ್ದಾರೆ. ಭಗತ್ ಸಿಂಗ್ ಜೀವನದ ಕುರಿತ ಕಥೆ ಈ ಚಿತ್ರದಲ್ಲಿದೆ.
Published On - 3:42 pm, Fri, 5 August 22