ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಅವರು ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ರಿಲೀಸ್ ದಿನಾಂಕ ರೀವೀಲ್ ಮಾಡಲಾಗಿದೆ.
2024 ಈದ್ಗೆ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ರಿಲೀಸ್ ಆಗಲಿದೆ. ಈ ವಿಚಾರವನ್ನು ಟೈಗರ್ ಶ್ರಾಫ್ ರಿವೀಲ್ ಮಾಡಿದ್ದಾರೆ.
ಟೈಗರ್ ಶ್ರಾಫ್ ಸಿನಿಮಾಗಳಲ್ಲಿ ಮಸ್ತ್ ಆ್ಯಕ್ಷನ್ ಇರುತ್ತದೆ. ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲೂ ಭರ್ಜರಿ ಆ್ಯಕ್ಷನ್ ಇರಲಿದೆ.
ಟೈಗರ್ ಶ್ರಾಫ್ ಹಾಗೂ ಅಕ್ಷಯ್ ಕುಮಾರ್ ಈವರೆಗೆ ಒಟ್ಟಾಗಿ ನಟಿಸಿಲ್ಲ. ಅವರು ಇದೇ ಮೊದಲ ಬಾರಿಗೆ ಒಟ್ಟಿಗೆ ಬರುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಇದೆ.
ಈದ್ ಸಂದರ್ಭಕ್ಕೆ ಸಲ್ಮಾನ್ ಖಾನ್ ನಟನೆಯ ಸಿನಿಮಾಗಳು ರಿಲೀಸ್ ಆಗುತ್ತವೆ. 2024ರ ಈದ್ಗೆ ಸಲ್ಮಾನ್ ಖಾನ್ ನಟನೆಯ ಸಿನಿಮಾ ಒಂದು ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.