Carlos Alcaraz: ನಡಾಲ್, ಜೊಕೊವಿಚ್ರನ್ನು ಸೋಲಿಸಿ ಮ್ಯಾಡ್ರಿಡ್ ಓಪನ್ ಗೆದ್ದ 19 ವರ್ಷದ ಕಾರ್ಲೋಸ್..!
TV9 Web | Updated By: ಝಾಹಿರ್ ಯೂಸುಫ್
Updated on:
May 10, 2022 | 2:56 PM
Carlos Alcaraz: ಕಾರ್ಲೋಸ್ ಅಲ್ಕರಾಜ್ ತನ್ನ ಮ್ಯಾಡ್ರಿಡ್ ಓಪನ್ ವಿಜಯದ ನಂತರ ಇತ್ತೀಚಿನ ATP ಶ್ರೇಯಾಂಕಗಳಲ್ಲಿ ವೃತ್ತಿಜೀವನದ ಅತ್ಯುತ್ತಮ ನಂ. 6 ಕ್ಕೆ ಏರಿದರು. ಒಂದು ವರ್ಷದ ಹಿಂದೆ, ಸ್ಪೇನ್ ದೇಶದ ಈ ಯುವ ಆಟಗಾರ 120 ನೇ ಸ್ಥಾನದಲ್ಲಿದ್ದರು.
1 / 6
ಟೆನಿಸ್ ಅಂಗಳದ ಅಂಗಳದ ಅತಿರಥ ಮಹಾರಥರು ಎನಿಸಿಕೊಂಡಿರುವ ರೆಫಲ್ ನಡಾಲ್, ನೊವಾಕ್ ಜೊಕೊವಿಚ್ರಂತಹ ಆಟಗಾರರನ್ನು ಸೋಲಿಸಿ 19 ವರ್ಷದ ಕಾರ್ಲೋಸ್ ಅಲ್ಕರಾಜ್ ಮ್ಯಾಡ್ರಿಡ್ ಓಪನ್ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು 6-3, 6-1 ರ ನೇರ ಸೆಟ್ಗಳ ಮೂಲಕ ಸೋಲಿಸಿ ಸ್ಪೆನ್ ಅಂಗಳದ ಹೊಸ ಟೆನಿಸ್ ತಾರೆಯಾಗಿ ಕಾರ್ಲೋಸ್ ಕಾಣಿಸಿಕೊಂಡಿದ್ದಾರೆ.
2 / 6
ಕ್ವಾರ್ಟರ್-ಫೈನಲ್‌ನಲ್ಲಿ ರಫೆಲ್ ನಡಾಲ್ ಅವರನ್ನು 6-2, 1-6, 6-3 ಸೆಟ್‌ಗಳಿಂದ ಸೋಲಿಸಿದ್ದ ಕಾರ್ಲೋಸ್ ಅಲ್ಕರಾಜ್ ಇಡೀ ವಿಶ್ವದ ಗಮನ ಸೆಳೆದಿದ್ದರು. ಇದಾದ ಬಳಿಕ ಸೆಮಿಫೈನಲ್ನಲ್ಲಿ ವಿಶ್ವದ ನಂ. 1 ಆಟಗಾರ ನೊವಾಕ್ ಜೊಕೊವಿಕ್ ಅವರ ವಿರುದ್ದ 3 ಗಂಟೆ, 36 ನಿಮಿಷಗಳಲ್ಲಿ ಹೋರಾಟದಲ್ಲಿ 6-7(5), 7-5, 7-6(5) ಸೆಟ್‌ಗಳಿಂದ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದರು.
3 / 6
ಕ್ಲೇ ಕೋರ್ಟ್ ಈವೆಂಟ್‌ನಲ್ಲಿ ಮತ್ತು ಎಲ್ಲಾ ಅಂಗಳದಲ್ಲೂ 41 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಇಬ್ಬರು ದಂತಕಥೆಗಳಾದ ನಡಾಲ್ ಮತ್ತು ಜೊಕೊವಿಚ್ ಅವರನ್ನು ಸೋಲಿಸಿದ ಹದಿಹರೆಯದ ಆಟಗಾರನಾಗಿ ಇದೀಗ ಕಾರ್ಲೋಸ್ ಅಲ್ಕರಾಜ್ ಹೊಸ ಅಧ್ಯಾಯ ಬರೆದಿದ್ದಾರೆ.
4 / 6
ಪ್ರಸ್ತುತ ಕಾರ್ಲೋಸ್ ಅವರ ಆಟದ ಶೈಲಿಯನ್ನು ನಡಾಲ್ ಅವರ ಆಟಕ್ಕೆ ಹೋಲಿಸಲಾಗುತ್ತಿರುವುದು ವಿಶೇಷ. ನಡಾಲ್‌ನಂತೆಯೇ, 19 ವರ್ಷದ ಯುವ ಆಟಗಾರ ಫೋರ್‌ಹ್ಯಾಂಡ್ ಅನ್ನು ಗ್ರೌಂಡ್‌ಸ್ಟ್ರೋಕ್‌ಗಳಲ್ಲಿ ಅತ್ಯುತ್ತಮ ನಿಯಂತ್ರಣ ಹೊಂದಿದ್ದಾರೆ. ಹಾಗೆಯೇ ಬೇಸ್‌ಲೈನ್‌ನಿಂದ ಅಂಕಗಳನ್ನು ನಿಯಂತ್ರಿಸುವ ಮತ್ತು ಗೆಲ್ಲುವ ಕೌಶಲ್ಯವನ್ನು ಹೊಂದಿರುವುದರಿಂದ ಮುಂದಿನ ದಿನಗಳಲ್ಲಿ ಕಾರ್ಲೋಸ್ ಅಲ್ಕರಾಜ್ ಟೆನಿಸ್ ಅಂಗಳವನ್ನು ಆಳಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
5 / 6
ಕಾರ್ಲೋಸ್ ಅವರ ಸಾಧನೆಗಳನ್ನು ಮೆಲುಕು ಹಾಕುವುದಾದರೆ, ವಿಶ್ವ ನಂ.3 ಸ್ಟೆಫಾನೋಸ್ ಸಿಟ್ಸಿಪಾಸ್ ವಿರುದ್ದ US ಓಪನ್ 2021 ರ 4 ನೇ ಸುತ್ತನ್ನು ತಲುಪಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ವರ್ಷದ ಆರಂಭದಲ್ಲಿ, ಅಲ್ಕಾರಾಜ್ ಆಸ್ಟ್ರೇಲಿಯನ್ ಓಪನ್‌ನೊಂದಿಗೆ ತನ್ನ ಗ್ರ್ಯಾಂಡ್ ಸ್ಲಾಮ್ ಚೊಚ್ಚಲ ಪಂದ್ಯವನ್ನು ಆಡಿದ್ದರು. ಹಾಗೆಯೇ ವಿಂಬಲ್ಡನ್ ಮತ್ತು ಫ್ರೆಂಚ್ ಓಪನ್‌ನಲ್ಲಿ ಅವರ ಓಟವು 3 ನೇ ಸುತ್ತಿನಲ್ಲಿ ಕೊನೆಗೊಂಡಿತು.
6 / 6
ಕಾರ್ಲೋಸ್ ಅಲ್ಕರಾಜ್ ತನ್ನ ಮ್ಯಾಡ್ರಿಡ್ ಓಪನ್ ವಿಜಯದ ನಂತರ ಇತ್ತೀಚಿನ ATP ಶ್ರೇಯಾಂಕಗಳಲ್ಲಿ ವೃತ್ತಿಜೀವನದ ಅತ್ಯುತ್ತಮ ನಂ. 6 ಕ್ಕೆ ಏರಿದರು. ಒಂದು ವರ್ಷದ ಹಿಂದೆ, ಸ್ಪೇನ್ ದೇಶದ ಈ ಯುವ ಆಟಗಾರ 120 ನೇ ಸ್ಥಾನದಲ್ಲಿದ್ದರು. ಅಂದರೆ ಕೇವಲ ಒಂದೇ ವರ್ಷದಲ್ಲಿ ಕಾರ್ಲೋಸ್ ಅಲ್ಕರಾಜ್ ಬರೋಬ್ಬರಿ 114 ಸ್ಥಾನ ಮೇಲೇಕ್ಕೇರಿದ್ದಾರೆ.