AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣರೋಚಕ ಹೋರಾಟದಲ್ಲಿ ಗೆದ್ದು ಬೀಗಿದ ಬೆಂಗಳೂರು ಬುಲ್ಸ್

Bengaluru Bulls: ಪ್ರೊ ಕಬಡ್ಡಿ ಲೀಗ್ ಸೀಸನ್-11 ರಲ್ಲಿ ತೆಲುಗು ಟೈಟಾನ್ಸ್ ವಿರುದ್ಧದ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದ ಬೆಂಗಳೂರು ಬುಲ್ಸ್ ತಂಡವು, ಆ ಬಳಿಕ ಗುಜರಾತ್ ಜೈಂಟ್ಸ್, ಯುಪಿ ಯೋಧಾಸ್ ಹಾಗೂ ಪುಣೇರಿ ಪಲ್ಟನ್ ವಿರುದ್ಧ ಪರಾಜಯಗೊಂಡಿತ್ತು. ಇದೀಗ ದಬಾಂಗ್ ಡೆಲ್ಲಿ ವಿರುದ್ಧ ಗೆಲ್ಲುವ ಮೂಲಕ ಬೆಂಗಳೂರು ಬುಲ್ಸ್ ಗೆಲುವಿನ ಖಾತೆ ತೆರೆದಿದೆ.

ಝಾಹಿರ್ ಯೂಸುಫ್
|

Updated on:Oct 30, 2024 | 2:53 PM

Share
ಪ್ರೊ ಕಬಡ್ಡಿ ಲೀಗ್ ಸೀಸನ್-11 ರಲ್ಲಿ ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಬೆಂಗಳೂರು ಬುಲ್ಸ್ ತಂಡವು ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಅದು ಕೂಡ ಬಲಿಷ್ಠ ದಬಾಂಗ್ ಡೆಲ್ಲಿ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಎಂಬುದು ವಿಶೇಷ.

1 / 5
ಹೈದಬಾರಾಬಾದ್​ನ GMCB ಒಳಾಂಗಣ ಸ್ಟೇಡಿಯಂ ನಡೆದ ಪ್ರೊ ಕಬಡ್ಡಿ ಲೀಗ್​ನ 24ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ಡೆಲ್ಲಿ ತಂಡಗಳು ಮುಖಾಮುಖಿಯಾಗಿದ್ದವು. ಆರಂಭದಿಂದಲೇ ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲಾರ್ಧದಲ್ಲಿ ದಬಾಂಗ್ ಡೆಲ್ಲಿ ಆಟಗಾರರು ಪಾರುಪತ್ಯ ಮೆರೆದಿದ್ದರು.

2 / 5
ಉತ್ತಮ ರೈಡಿಂಗ್ ಹಾಗೂ ಟ್ಯಾಕಲ್ ಪಾಯಿಂಟ್ಸ್​ಗಳೊಂದಿಗೆ ಗಮನ ಸೆಳೆದ ದಬಾಂಗ್ ಡೆಲ್ಲಿ ತಂಡವು ಮೊದಲಾರ್ಧದಲ್ಲಿ 22 ಅಂಕಗಳನ್ನು ಕಲೆಹಾಕಿದ್ದರು. ಇದೇ ವೇಳೆ ಬೆಂಗಳೂರು ಬುಲ್ಸ್ ಗಳಿಸಿದ್ದು ಕೇವಲ 14 ಅಂಕಗಳು ಮಾತ್ರ. ಹೀಗಾಗಿಯೇ ಪಂದ್ಯವು ದಬಾಂಗ್ ಡೆಲ್ಲಿ ಪಾಲಾಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು.

3 / 5
ಆದರೆ ದ್ವಿತೀಯಾರ್ಧದಲ್ಲಿ ಕಂಬ್ಯಾಕ್ ಮಾಡಿದ ಬೆಂಗಳೂರು ಬುಲ್ಸ್ ಪರ ಜೈ ಭಗವಾನ್ ಅದ್ಭುತ ಪ್ರದರ್ಶನ ನೀಡಿದರು. ಮತ್ತೊಂದೆಡೆ ನಿತಿನ್ ರಾವಲ್ ಕೂಡ ಉತ್ತಮ ಸಾಥ್ ನೀಡಿದರು. ಈ ಮೂಲಕ ಸೆಕೆಂಡ್ ಹಾಫ್​ನಲ್ಲಿ ಬೆಂಗಳೂರು ಬುಲ್ಸ್ ಒಟ್ಟು 20 ಅಂಕಗಳನ್ನು ಕಲೆಹಾಕಿತು. ಅತ್ತ ದಬಾಂಗ್ ಡೆಲ್ಲಿ ದ್ವಿತೀಯಾರ್ಧದಲ್ಲಿ ಕೇವಲ 11 ಅಂಕಗಳನ್ನು ಮಾತ್ರ ಗಳಿಸಿದ್ದರು.

4 / 5
ಈ ಅದ್ಭುತ ಪ್ರದರ್ಶನದೊಂದಿಗೆ ಬೆಂಗಳೂರು ಬುಲ್ಸ್ ತಂಡವು 34-33 ಅಂಕಗಳ ಅಂತರದಿಂದ ದಬಾಂಗ್ ಡೆಲ್ಲಿ ತಂಡವನ್ನು ಮಣಿಸಿ ರೋಚಕ ಜಯ ಸಾಧಿಸಿತು. ಇಲ್ಲಿ ಬೆಂಗಳೂರು ಬುಲ್ಸ್ 22 ರೈಡ್ ಪಾಯಿಂಟ್ಸ್ ಕಲೆಹಾಕಿದರೆ, 8 ಟ್ಯಾಕಲ್ ಪಾಯಿಂಟ್ಸ್ ಗಳಿಸಿದ್ದರು. ಅಲ್ಲದೆ 2 ಬಾರಿ ದಬಾಂಗ್ ಡೆಲ್ಲಿ ತಂಡವನ್ನು ಆಲೌಟ್ ಮಾಡಿದ್ದರು. ಈ ಭರ್ಜರಿ ಪ್ರದರ್ಶನದೊಂದಿಗೆ ಪಿಕೆಎಲ್ ಸೀಸನ್-11 ರಲ್ಲಿ ಬೆಂಗಳೂರು ಬುಲ್ಸ್  ಗೆಲುವಿನ ಖಾತೆ ತೆರೆದಿದೆ.

5 / 5

Published On - 10:11 am, Wed, 30 October 24