Bengaluru Rains: ಮಳೆಗೆ ಮುಳುಗುತ್ತಿದೆ ರಾಜ್ಯ ರಾಜಧಾನಿ, ಫೋಟೋಗಳಲ್ಲಿ ನೋಡಿ

| Updated By: ಆಯೇಷಾ ಬಾನು

Updated on: Sep 05, 2022 | 10:45 PM

ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಭಾರಿ ಅನಾಹುತಗಳು ಸಂಭವಿಸುತ್ತಿವೆ. ರಸ್ತೆಗಳಲ್ಲಿ ನೀರು ನಿಂತಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಮಳೆ ನೀರು ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

1 / 6

2 / 6
ಬೆಂಗಳೂರಿನ ವೈಟ್​ಫೀಲ್ಡ್​​ನಲ್ಲಿ ವರ್ಷಧಾರೆಗೆ ರಸ್ತೆಗಳು ಕೆರೆಯಂತಾಗಿದ್ದು, ಬಿಎಂಟಿಸಿ ನೀರಲ್ಲೇ ಲಾಕ್​ ಆಗಿತ್ತು. ಕೂಡಲೇ ಅಲ್ಲಿದ್ದ ಸ್ಥಳೀಯರು ಹಗ್ಗದ ಸಹಾಯದಿಂದ ಬಿಎಂಟಿಸಿ ಬಸ್​​ನ್ನ ಹೊರತೆಗೆದಿದ್ದಾರೆ.

3 / 6
ರೈನ್​ ಬೋ ಲೇಔಟ್​ನ​ ಪ್ರಮುಖ ರಸ್ತೆಯಲ್ಲಿ ಈಗ ಬೋಟ್​ಗಳು ಸಂಚಾರ ಮಾಡುವಂತಾಗಿದೆ. ರಸ್ತೆ ಮೇಲೆ ಮೂರ್ನಾಲ್ಕು ಅಡಿಗಳಷ್ಟು ನೀರು ನಿಂತಿದ್ರಿಂದ ಎಲ್ಲವೂ ಜಲಸ್ವಾಹ ಆಗಿದೆ. ಹೀಗಾಗಿ ಜನರು  ಬೋಟ್​ಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಇಷ್ಟೇ ಅಲ್ಲ ರಸ್ತೆ ಮೇಲೆ ಹಾಗೂ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು ಕೂಡ ನೀರಲ್ಲಿ ಮುಳುಗಿ ಹೋಗಿವೆ.

4 / 6
ಮಾರತ್ತಹಳ್ಳಿ-ಸರ್ಜಾಪುರ ಔಟರ್​ ರಿಂಗ್ ರಸ್ತೆ ಥೇಟ್​ ಹಳ್ಳದಂತೆ ನೀರು ಹರಿಯುತ್ತಿದೆ. ಪ್ರಯಾಣಿಕರು & ಸವಾರರು ಜೀವ ಕೈಯಲ್ಲಿಡಿದು ಓಡಾಡುತ್ತಿದ್ದಾರೆ. ಇಷ್ಟೇ ಅಲ್ಲ ಇದೇ ನೀರಿನಿಂದ ಹಲವು ವಾಹನಗಳು ಕೆಟ್ಟು ನಿಂತಿದ್ದು, ಸವಾರರಿಗೆ ಪೀಕಲಾಟ ತಂದಿಟ್ಟಿದೆ.

5 / 6
ಮಾರತಹಳ್ಳಿ ಸರ್ಜಾಪುರ ಔಟರ್ ರಿಂಗ್ ರೋಡ್​ನಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಅಲ್ಲಲ್ಲಿ ಮಳೆ ನೀರು ನಿಲ್ಲುತ್ತಿದೆ. ಇದರಿಂದಾಗಿ ಐಟಿ ಕಂಪನಿಗಳಿಗೆ ಭಾರೀ ನಷ್ಟವಾಗಿದ್ದು, ಕಂಪನಿಗಳ ಸಂಘವೇ ಹೇಳುವಂತೆ ಸುಮಾರು 225 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ.

6 / 6
ಬೆಳ್ಳಂದೂರಿನಲ್ಲಿ ಮಳೆ ಎಫೆಕ್ಟ್ ಗೆ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ವಾಹನಗಳು ಮುಳುಗಿವೆ

Published On - 10:45 pm, Mon, 5 September 22