- Kannada News Photo gallery Best Bridal Designs, Here are some beautiful flower jewels to enhance your beauty
ನಿಮ್ಮ ಸೌಂದರ್ಯವನ್ನು ಹೆಚ್ಚಿಸುವ ವಿಭಿನ್ನ ಶೈಲಿಯ ಹೂವಿನ ಆಭರಣಗಳು
ಮಧ್ಯಮ ಕುಟುಂಬಗಳಿಗೂ ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾದ ವಿಭಿನ್ನ ಶೈಲಿಯ ಹೂವಿನ ಆಭರಣಗಳು ಇಲ್ಲಿವೆ. ಸಾವಿರಾರು ಜನರ ಮಧ್ಯೆ ನಿಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ ಈ ಜ್ಯುವೆಲರಿ ಡಿಸೈನ್ಸ್.
Updated on: Nov 19, 2022 | 5:00 PM

ಇಂದಿನ ಜೀವನಶೈಲಿಯಲ್ಲಿ ಚಿನ್ನದ ಆಭರಣಗಳಿಗಿಂತ ಹೆಚ್ಚಾಗಿ ಕ್ರಿಯಾತ್ಮಕ ಶೈಲಿಯ ಆಭರಣಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಧ್ಯಮ ಕುಟುಂಬಗಳಿಗೂ ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾದ ವಿಭಿನ್ನ ಶೈಲಿಯ ಹೂವಿನ ಆಭರಣಗಳು ಇಲ್ಲಿವೆ.

ಹಳದಿ ಹೂವಿನ ಜ್ಯುವೆಲರಿ ಡಿಸೈನ್ಸ್: ದಕ್ಷಿಣ ಭಾರತದ ಮದುವೆಯ ಹಿಂದಿನ ದಿನ ಅರಶಿನ ಶಾಸ್ತ್ರಗಳಲ್ಲಿ ಈ ಶೈಲಿಯ ಹೂವಿನ ಆಭರಣಗಳನ್ನು ಹೆಚ್ಚಾಗಿ ಕಾಣಬಹುದು. ಇದು ವಧುವಿನ ಅರಶಿನ ಶಾಸ್ತ್ರಕ್ಕೆ ಆಕರ್ಷಕ ಲುಕ್ ನೀಡುತ್ತದೆ.

ಗುಲಾಬಿ ಹೂವಿನ ಜ್ಯುವೆಲರಿ ಡಿಸೈನ್ಸ್: ಹಿಂದಿನ ಸಂಪ್ರದಾಯದ ಪ್ರಕಾರ ಹೂವುಗಳಿಂದ ಜಡೆಗಳನ್ನು ಅಲಂಕರಿಸಲಾಗುತ್ತಿತ್ತು. ಆದರೆ ಕೂದಲಿನ ಜೊತೆಗೆ ಕೈಗಳಿಗೆ ಹಾಗೂ ಮೂಗಿನ ಆಭರಣಗಳಾಗಿ ಈ ಗುಲಾಬಿ ಹೂವಿನ ಆಭರಣಗಳನ್ನು ತಯಾರಿಸಲಾಗುತ್ತದೆ.

ನವಿಲುಗರಿಗಳ ಜ್ಯುವೆಲರಿ ಡಿಸೈನ್ಸ್: ಇದು ನಿಮಗೆ ಗ್ರ್ಯಾಂಡ್ ಲುಕ್ ನೀಡುವಲ್ಲಿ ಸಂದೇಹವಿಲ್ಲ. ಇಂದಿನ ಟ್ರೆಂಡ್ರೀ ಬಟ್ಟೆಗಳಿಗೆ ಈ ಜುವೆಲ್ಲರಿ ಹೇಳಿ ಮಾಡಿಸಿದ ಜೋಡಿ. ಅತಿ ಕಡಿಮೆ ಬೆಲೆಗೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವ ಈ ಜ್ಯುವೆಲರಿಗಳನ್ನು ಖರೀದಿಸಿ.

ಕವಡೆ ಜ್ಯುವೆಲರಿ ಡಿಸೈನ್ಸ್: ಸಂಪ್ರದಾಯಿಕವಾಗಿ ಕವಡೆ ಶಾಸ್ತ್ರಗಳಲ್ಲಿ ಬಳಸಲಾಗುತ್ತಿದ್ದ ಕವಡೆಗಳು ಇವು. ಇಂದೂ ಇವುಗಳ ಮೂಲಕ ಸಾಕಷ್ಟು ವಿಭಿನ್ನ ಶೈಲಿಯ ಜ್ಯುವೆಲರಿ ಡಿಸೈನ್ಸ್ ಟ್ರೆಂಡ್ ಆಗಿ ಬಿಟ್ಟಿದೆ. ಕವಡೆ ಜ್ಯುವೆಲರಿ ಡಿಸೈನ್ಸ್ ನಿಮಗೆ ವಿಶೇಷ ದಿನಗಳಲ್ಲಿ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಗುಲಾಬಿ ಬಣ್ಣದ ಜ್ಯುವೆಲರಿ ಡಿಸೈನ್ಸ್: ಇದು ವಧುವಿನ ಆಲಂಕಾರಕ್ಕಾಗಿ ಹೇಳಿ ಮಾಡಿಸಿರುವ ಜ್ಯುವೆಲರಿ ಡಿಸೈನ್. ಇದು ವಧುವಿನ ಗುಲಾಬಿ ಬಣ್ಣದ ಗ್ರ್ಯಾಂಡ್ ಗೌನ್ ಗೆ ಸೂಪರ್ ಲುಕ್ ನೀಡುತ್ತದೆ.




