AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Best Tourist Places: ನಿಮ್ಮ ಜೀವನದಲ್ಲಿ ಅದ್ಭುತಗಳನ್ನು ಕಣ್ತುಂಬಿಕೊಳ್ಳಲು ಈ ಸ್ಥಳಗಳಿಗೆ ಭೇಟಿ ಕೊಡಿ

ಭಾರತವು ಹೇರಳವಾದ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದ್ದು, ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ದೇಶಗಳಿಂದಲೂ ಬರುತ್ತಾರೆ.

TV9 Web
| Updated By: Rakesh Nayak Manchi|

Updated on: Sep 10, 2022 | 8:00 AM

Share
ಪರ್ವತಗಳು, ನದಿಗಳು, ಸಮುದ್ರಗಳು, ಮರುಭೂಮಿ ಸೇರಿದಂತೆ ಅನೇಕ ರೀತಿಯ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿಕೊಡುತ್ತಾರೆ. ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ಭೇಟಿಕೊಡಬೇಕಾದ ಕೆಲವು ಅದ್ಭುತ ಸ್ಥಳಗಳಿವೆ. ಅವುಗಳು ಈ ಕೆಳಗಿನಂತಿವೆ.

Best Tourist Places Best places in India that you must visit in your lifetime

1 / 8
ಪಶ್ಚಿಮ ಘಟ್ಟ ಪರ್ವತಗಳು: ಪಶ್ಚಿಮ ಘಟ್ಟ ಪರ್ವತಗಳನ್ನು ಸಹ್ಯಾದ್ರಿ ಪರ್ವತಗಳು ಎಂದೂ ಕರೆಯುತ್ತಾರೆ. ಈ ಪರ್ವತ ಶ್ರೇಣಿಯು ಗುಜರಾತ್ ಗಡಿಯಿಂದ ಕನ್ಯಾಕುಮಾರಿಯವರೆಗೆ ವ್ಯಾಪಿಸಿದೆ. ಈ ಪರ್ವತಗಳ ಜೀವವೈವಿಧ್ಯವು ಪ್ರಪಂಚದ ಇತರ ಪ್ರವಾಸಿ ತಾಣಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಪರ್ವತ ಶ್ರೇಣಿಯ ಒಡಲಲ್ಲಿ ಬೆಳೆದು ನಿಂತಿರುವ ಎಷ್ಟೋ ಅಜ್ಞಾತ ಸಸ್ಯಗಳು ಮತ್ತು ಮರಗಳ ಒಳಗೆ ವಾಸಿಸುವ ಪ್ರಾಣಿಗಳನ್ನು ನೋಡುವಾಗ ಬೆರಗು ಮೂಡಿಸದೆ ಇರಲಾರದರು.

Best Tourist Places Best places in India that you must visit in your lifetime

2 / 8
Best Tourist Places Best places in India that you must visit in your lifetime

ಲಡಾಖ್‌ನ ಸರೋವರಗಳು: ಲಡಾಖ್‌ಗೆ ಒಮ್ಮೆ ಹೆಜ್ಜೆ ಇಟ್ಟ ಪ್ರವಾಸಿಗರು ಸರೋವರಗಳಿಗೆ ಭೇಟಿಕೊಡದೆ ಹಿಂದಿರುಗಲಾರರು. ಸುಂದರವಾದ ನೀಲಿ ನೀರಿನಿಂದ ಕೂಡಿದ ಸರೋವರ ಮನಸ್ಸಿಗೆ ಮುದ ನೀಡುವಂತಿದೆ. ಮಲೆನಾಡಿನ ಸರೋವರಗಳ ಪೈಕಿ ಪಾಂಗಾಂಗ್ ಮತ್ತು ಮೊರಿರಿ ಸರೋವರಗಳು ಸೌಂದರ್ಯದ ದೃಷ್ಟಿಯಿಂದ ನಿಜವಾಗಿಯೂ ವಿಭಿನ್ನವಾಗಿವೆ.

3 / 8
Best Tourist Places Best places in India that you must visit in your lifetime

ಹಿಮಾಲಯದ ಘನೀಕೃತ ಸರೋವರಗಳು: ಹಿಮಾಲಯವು ಹಲವಾರು ಸಣ್ಣ ಮತ್ತು ದೊಡ್ಡ ಸರೋವರಗಳನ್ನು ಹೊಂದಿದೆ. ಆ ಸರೋವರಗಳು ಊಹಿಸಿದ್ದಕ್ಕಿಂತ ಹೆಚ್ಚು ಸುಂದರವಾಗಿವೆ. ವಿಶೇಷವಾಗಿ ಸಿಕ್ಕಿಂ ರಾಜ್ಯದಲ್ಲಿ ಹಲವಾರು ಹೆಪ್ಪುಗಟ್ಟಿದ ಸರೋವರಗಳಿವೆ.

4 / 8
Best Tourist Places Best places in India that you must visit in your lifetime

ಸುಂದರಬನ್ಸ್ ಮ್ಯಾಂಗ್ರೋವ್ ಅರಣ್ಯಗಳು: ಪಶ್ಚಿಮ ಬಂಗಾಳದ ಸುಂದರಬನ್ಸ್‌ನ ಸುರುಳಿಯಾಕಾರದ ತೊರೆಗಳು ಮತ್ತು ಅದರ ಸುತ್ತಲಿನ ದಟ್ಟವಾದ ಬಹುತೇಕ ಪ್ರವೇಶಿಸಲಾಗದ ಮ್ಯಾಂಗ್ರೋವ್ ಕಾಡುಗಳು ವಿಶ್ವದ ಅತ್ಯಂತ ರೋಮಾಂಚಕಾರಿ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಯುನೆಸ್ಕೋ ಈ ಮ್ಯಾಂಗ್ರೋವ್ ಅರಣ್ಯವನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ. ರಾಯಲ್ ಬೆಂಗಾಲ್ ಟೈಗರ್ ಇದೇ ಕಾಡಿನಲ್ಲಿ ಕಂಡುಬರುತ್ತದೆ.

5 / 8
Best Tourist Places Best places in India that you must visit in your lifetime

ಬ್ರಹ್ಮಪುತ್ರ ನದಿ: ವಿಶ್ವದ ಅತ್ಯುತ್ತಮ ಅನುಭವವೆಂದರೆ ಬ್ರಹ್ಮಪುತ್ರ ನದಿಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವುದು. ನೀವು ಕೂಡ ಈ ಭವ್ಯ ದೃಶ್ಯಾವಳಿಯನ್ನು ನೋಡಬೇಕೆಂದರೆ ಇಲ್ಲಿಗೆ ಭೇಟಿ ಕೊಡಬಹುದು.

6 / 8
Best Tourist Places Best places in India that you must visit in your lifetime

ಲಕ್ಷದ್ವೀಪ: ಭಾರತೀಯ ಮೂಲದ ಬೀಚ್​ಗಳಲ್ಲಿ ಲಕ್ಷದ್ವೀಪ ಕೂಡ ಒಂದು. ಆಕಾಶ ನೀಲಿ ಸಮುದ್ರ, ಬಿಳಿ ಮರಳಿನ ಕಡಲತೀರವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ನೀಲಿ ಸಮುದ್ರದ ಆಳವನ್ನು ನೋಡಲು ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್ ಕೂಡ ಇಲ್ಲಿ ಲಭ್ಯವಿದೆ.

7 / 8
Best Tourist Places Best places in India that you must visit in your lifetime

ಥಾರ್ ಮರುಭೂಮಿ: ನೀವು ರಾಜಸ್ಥಾನಕ್ಕೆ ಭೇಟಿ ಕೊಟ್ಟರೆ ಥಾರ್ ಮರುಭೂಮಿಯಲ್ಲಿ ಕ್ಯಾಂಪ್ ಮಾಡಬೇಕು. ತಂಪಾದ ರಾತ್ರಿಯಲ್ಲಿ ವಿಶಾಲವಾದ ಚಿನ್ನದ ಮರಳಿನ ಮೇಲೆ ಕಪ್ಪು ಆಕಾಶವನ್ನು ನೋಡುವುದು ಸ್ವರ್ಗೀಯ ದೃಶ್ಯವಾಗಿದೆ. ವರ್ಷಗಳಿಂದ ಉರಿಯುತ್ತಿರುವ ನಕ್ಷತ್ರಗಳು, ನಕ್ಷತ್ರಪುಂಜವು ರಾಜನ ರತ್ನಖಚಿತ ಅರಮನೆಯ ಛಾವಣಿ ನೋಡಿದಂತೆ ಅನುಭವ ನೀಡಲಿದೆ.

8 / 8
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ