Updated on: Sep 10, 2022 | 8:00 AM
Best Tourist Places Best places in India that you must visit in your lifetime
ಲಡಾಖ್‌ನ ಸರೋವರಗಳು: ಲಡಾಖ್‌ಗೆ ಒಮ್ಮೆ ಹೆಜ್ಜೆ ಇಟ್ಟ ಪ್ರವಾಸಿಗರು ಸರೋವರಗಳಿಗೆ ಭೇಟಿಕೊಡದೆ ಹಿಂದಿರುಗಲಾರರು. ಸುಂದರವಾದ ನೀಲಿ ನೀರಿನಿಂದ ಕೂಡಿದ ಸರೋವರ ಮನಸ್ಸಿಗೆ ಮುದ ನೀಡುವಂತಿದೆ. ಮಲೆನಾಡಿನ ಸರೋವರಗಳ ಪೈಕಿ ಪಾಂಗಾಂಗ್ ಮತ್ತು ಮೊರಿರಿ ಸರೋವರಗಳು ಸೌಂದರ್ಯದ ದೃಷ್ಟಿಯಿಂದ ನಿಜವಾಗಿಯೂ ವಿಭಿನ್ನವಾಗಿವೆ.
ಹಿಮಾಲಯದ ಘನೀಕೃತ ಸರೋವರಗಳು: ಹಿಮಾಲಯವು ಹಲವಾರು ಸಣ್ಣ ಮತ್ತು ದೊಡ್ಡ ಸರೋವರಗಳನ್ನು ಹೊಂದಿದೆ. ಆ ಸರೋವರಗಳು ಊಹಿಸಿದ್ದಕ್ಕಿಂತ ಹೆಚ್ಚು ಸುಂದರವಾಗಿವೆ. ವಿಶೇಷವಾಗಿ ಸಿಕ್ಕಿಂ ರಾಜ್ಯದಲ್ಲಿ ಹಲವಾರು ಹೆಪ್ಪುಗಟ್ಟಿದ ಸರೋವರಗಳಿವೆ.
ಸುಂದರಬನ್ಸ್ ಮ್ಯಾಂಗ್ರೋವ್ ಅರಣ್ಯಗಳು: ಪಶ್ಚಿಮ ಬಂಗಾಳದ ಸುಂದರಬನ್ಸ್‌ನ ಸುರುಳಿಯಾಕಾರದ ತೊರೆಗಳು ಮತ್ತು ಅದರ ಸುತ್ತಲಿನ ದಟ್ಟವಾದ ಬಹುತೇಕ ಪ್ರವೇಶಿಸಲಾಗದ ಮ್ಯಾಂಗ್ರೋವ್ ಕಾಡುಗಳು ವಿಶ್ವದ ಅತ್ಯಂತ ರೋಮಾಂಚಕಾರಿ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಯುನೆಸ್ಕೋ ಈ ಮ್ಯಾಂಗ್ರೋವ್ ಅರಣ್ಯವನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ. ರಾಯಲ್ ಬೆಂಗಾಲ್ ಟೈಗರ್ ಇದೇ ಕಾಡಿನಲ್ಲಿ ಕಂಡುಬರುತ್ತದೆ.
ಬ್ರಹ್ಮಪುತ್ರ ನದಿ: ವಿಶ್ವದ ಅತ್ಯುತ್ತಮ ಅನುಭವವೆಂದರೆ ಬ್ರಹ್ಮಪುತ್ರ ನದಿಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವುದು. ನೀವು ಕೂಡ ಈ ಭವ್ಯ ದೃಶ್ಯಾವಳಿಯನ್ನು ನೋಡಬೇಕೆಂದರೆ ಇಲ್ಲಿಗೆ ಭೇಟಿ ಕೊಡಬಹುದು.
ಲಕ್ಷದ್ವೀಪ: ಭಾರತೀಯ ಮೂಲದ ಬೀಚ್ಗಳಲ್ಲಿ ಲಕ್ಷದ್ವೀಪ ಕೂಡ ಒಂದು. ಆಕಾಶ ನೀಲಿ ಸಮುದ್ರ, ಬಿಳಿ ಮರಳಿನ ಕಡಲತೀರವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ನೀಲಿ ಸಮುದ್ರದ ಆಳವನ್ನು ನೋಡಲು ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್ ಕೂಡ ಇಲ್ಲಿ ಲಭ್ಯವಿದೆ.
ಥಾರ್ ಮರುಭೂಮಿ: ನೀವು ರಾಜಸ್ಥಾನಕ್ಕೆ ಭೇಟಿ ಕೊಟ್ಟರೆ ಥಾರ್ ಮರುಭೂಮಿಯಲ್ಲಿ ಕ್ಯಾಂಪ್ ಮಾಡಬೇಕು. ತಂಪಾದ ರಾತ್ರಿಯಲ್ಲಿ ವಿಶಾಲವಾದ ಚಿನ್ನದ ಮರಳಿನ ಮೇಲೆ ಕಪ್ಪು ಆಕಾಶವನ್ನು ನೋಡುವುದು ಸ್ವರ್ಗೀಯ ದೃಶ್ಯವಾಗಿದೆ. ವರ್ಷಗಳಿಂದ ಉರಿಯುತ್ತಿರುವ ನಕ್ಷತ್ರಗಳು, ನಕ್ಷತ್ರಪುಂಜವು ರಾಜನ ರತ್ನಖಚಿತ ಅರಮನೆಯ ಛಾವಣಿ ನೋಡಿದಂತೆ ಅನುಭವ ನೀಡಲಿದೆ.