ನಟಿ ಭಾವನಾ ರಾಮಣ್ಣ ಪುತ್ರಿಯ ನಾಮಕರಣ, ಮಗಳಿಗೆ ಅಜ್ಜಿಯ ಹೆಸರು: ಚಿತ್ರಗಳ ನೋಡಿ
Bhavana Ramanna: ನಟಿ ಭಾವನಾ ರಾಮಣ್ಣ ಐವಿಎಫ್ ಪದ್ಧತಿ ಮೂಲಕ ಕಳೆದ ಆಗಸ್ಟ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಐವಿಎಫ್ ಪದ್ಧತಿ ಅನುಸರಿಸಿದ ಕಾರಣ ಭಾವನಾ ರಾಮಣ್ಣ ತಾಯಿ ಆಗಿದ್ದು ಸಖತ್ ಸುದ್ದಿ ಆಗಿತ್ತು. ಇಂದು (ಮಾರ್ಚ್ 21) ಭಾವನಾ ರಾಮಣ್ಣ ಅವರು ತಮ್ಮ ಮಗಳಿಗೆ ನಾಮಕರಣ ಮಾಡಿದ್ದಾರೆ. ಕೆಲ ಆಪ್ತರ ಹಾಜರಿಯಲ್ಲಿ ನಾಮಕರಣ ಮಹೋತ್ಸವ ನಡೆದಿದ್ದು, ಮಗಳಿಗೆ ಅಜ್ಜಿಯ ಹೆಸರಿಟ್ಟಿದ್ದಾರೆ.
Updated on: Mar 21, 2026 | 7:07 PM

ಭಾವನಾ ರಾಮಣ್ಣ ಅವರ ಅಜ್ಜಿಯ ಹೆಸರು ರುಕ್ಮಿಣಿ ಅಂತೆ. ಅದರಂತೆ ಭಾವನಾ ಅವರು ತಮ್ಮ ಮುದ್ದಾದ ಮಗಳಿಗೆ ರುಕ್ಮಿಣಿ ಎಂದೇ ಹೆಸರಿಟ್ಟಿದ್ದಾರೆ.

ಭಾವನಾ ರಾಮಣ್ಣ ಅವರು ಎಂಟು ತಿಂಗಳ ಗರ್ಭಿಣಿ ಆಗಿದ್ದಾಗ ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಲಾಯ್ತು. ಈ ವೇಳೆ ಒಂದು ಮಗು ತೀರಿಕೊಂಡು ಒಂದು ಮಗು ಮಾತ್ರವೇ ಜನಿಸಿತು. ಅದೇ ಮಗುವಿಗೆ ಈಗ ನಾಮಕರಣ ಮಾಡಲಾಗಿದೆ.

ಇಂದು (ಮಾರ್ಚ್ 21) ಭಾವನಾ ರಾಮಣ್ಣ ಅವರು ತಮ್ಮ ಮಗಳಿಗೆ ನಾಮಕರಣ ಮಾಡಿದ್ದಾರೆ. ಕೆಲ ಆಪ್ತರ ಹಾಜರಿಯಲ್ಲಿ ನಾಮಕರಣ ಮಹೋತ್ಸವ ನಡೆದಿದ್ದು, ಮಗಳಿಗೆ ಅಜ್ಜಿಯ ಹೆಸರಿಟ್ಟಿದ್ದಾರೆ.

ತಾಯಿ ಆಗಬೇಕೆಂಬ ಅದಮ್ಯ ಆಸೆಯಿಂದ ನಟಿ ಭಾವನಾ ರಾಮಣ್ಣ ಐವಿಎಫ್ ತಂತ್ರಜ್ಞಾನದ ಮೂಲಕ ತಾಯಿ ಆಗಿದ್ದಾರೆ. ಈ ಹಿಂದೆ ತಮ್ಮ ಈ ನಿರ್ಧಾರದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು ನಟಿ ಭಾವನಾ.

ನಟಿ ಭಾವನಾ ರಾಮಣ್ಣ ಐವಿಎಫ್ ಪದ್ಧತಿ ಮೂಲಕ ಕಳೆದ ಆಗಸ್ಟ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಐವಿಎಫ್ ಪದ್ಧತಿ ಅನುಸರಿಸಿದ ಕಾರಣ ಭಾವನಾ ರಾಮಣ್ಣ ತಾಯಿ ಆಗಿದ್ದು ಸಖತ್ ಸುದ್ದಿ ಆಗಿತ್ತು.




